SHIVAMOGGA LIVE | 27 JUNE 2022 | NATIONAL UPDATE
ಅಗ್ನಿಪಥ (Agnipath) ಯೋಜನೆ ಪರ ಮತ್ತು ವಿರುದ್ಧ ದೇಶಾದ್ಯಂತ ಚರ್ಚೆ, ಪ್ರತಿಭಟನೆಗಳು ನಡೆಯುತ್ತಿವೆ. ಈ ಮಧ್ಯೆ ಅಗ್ನಿಪಥ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಈವರೆಗೆ 59,960 ಅರ್ಜಿ ಸಲ್ಲಿಕೆಯಾಗಿದೆ.
ಅಗ್ನಿಪಾಥ ಯೋಜನೆ ಅಡಿ ಭಾರತೀಯ ವಾಯುಸೇನೆಗೆ ನೇಮಕಾತಿಗೆ ಅರ್ಜಿ ಅಹ್ವಾನಿಸಲಾಗಿತ್ತು. ಮೂರು ದಿನದಲ್ಲಿ 59,960 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ಭಾರತೀಯ ವಾಯು ಸೇನೆ ಟ್ವೀಟ್ ಮಾಡಿದೆ. (Agnipath)
ಅರ್ಜಿ ಸಲ್ಲಿಸುವುದು ಹೇಗೆ?
ಅಗ್ನಿಪಥ ಯೋಜನೆ ಅಡಿ ಭಾರತೀಯ ವಾಯು ಸೇನೆ ನೇಮಕಾತಿ ಮಾಡಿಕೊಳ್ಳುತ್ತಿದೆ. 2022ರ ಜೂನ್ 24ರಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 2022ರ ಜುಲೈ 5ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. https://careerindianairforce.cdac.in/ ಈ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಭಾನುವಾರದವರೆಗೆ 59,960 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಅಂತಿಮ ದಿನಾಂಕದ ವೇಳೆಗೆ ಈ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾದ್ಯತೆ ಇದೆ.
ALSO READ : ತಕ್ಷಣಕ್ಕೆ ಸಾಲ ಕೊಡ್ತಾರೆ, ಆಮೇಲೆ ಪ್ರಾಣವನ್ನೇ ತೆಗೆದುಬಿಡ್ತಾರೆ, ಬಡ, ಮಧ್ಯಮ ವರ್ಗದವರೆ ಇವರ ಟಾರ್ಗೆಟ್