ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 14 MAY 2024
AADHAR NEWS : ಆಧಾರ್ ಕಾರ್ಡ್‌ಗೆ ಉಚಿತವಾಗಿ (Free Update) ಅಗತ್ಯ ಮಾಹಿತಿ ಅಪ್‌ಡೇಟ್ ಮಾಡಲು ನೀಡಿದ್ದ ಗಡುವು ಜೂ.14ರವರೆಗೆ ವಿಸ್ತರಣೆ ಮಾಡಲಾಗಿದೆ. ಇದನ್ನು ಉಪಯೋಗಿಸಿಕೊಂಡು ಸಾರ್ವಜನಿಕರು ತಮ್ಮ ಆಧಾರ್ ಕಾರ್ಡ್‌ಗೆ ಅಗತ್ಯವಿರುವ ಮಾಹಿತಿ ಅಪ್‌ಡೇಟ್ ಮಾಡಬಹುದು.
ನಿಯಮದ ಪ್ರಕಾರ ನಾಗರಿಕರು ಪ್ರತಿ ಹತ್ತು ವರ್ಷಕ್ಕೊಮ್ಮೆ ಆಧಾರ್‌ಗೆ ಅಗತ್ಯ ಮಾಹಿತಿ ಅಪ್‌ಡೇಟ್ ಮಾಡಬೇಕು. ತಮ್ಮ ಗುರುತು ಮತ್ತು ವಿಳಾಸದ ದಾಖಲೆಗಳನ್ನು ಒದಗಿಸಬೇಕು. ಮಕ್ಕಳ ಬಯೋಮೆಟ್ರಿಕ್ ದಾಖಲೆಗಳನ್ನು ನೀಡಬೇಕು.
ಈಗ ಆಧಾರ್ ಆಪ್‌ಡೇಟ್ ಉಚಿತ
ಜೂ.14ರವರೆಗೆ ಸಾರ್ವಜನಿಕರು ಉಚಿತವಾಗಿ ಆಧಾರ್ ಅಪ್‌ಡೇಟ್ ಮಾಡಬಹುದು. ಆಫ್‌ಲೈನ್ ಮತ್ತು ಆನ್‌ಲೈನ್ ಮೂಲಕ ಅಪ್‌ಡೇಟ್ ಮಾಡಲು ಅವಕಾಶವಿದೆ. ಆ ಬಳಿಕ ಆಫ್‌ಲೈನ್ ಅಪ್‌ಡೇಟ್‌ಗೆ 50 ರೂ., ಆನ್‌ಲೈನ್ ಅಪ್‌ಡೇಟ್‌ಗೆ 25 ರೂ. ಶುಲ್ಕ ಪಾವತಿಸಬೇಕಾಗುತ್ತದೆ.
ಆನ್‌ಲೈನ್ ಅಪ್‌ಡೇಟ್ ಹೇಗೆ?
ಆನ್‌ಲೈನ್‌ನಲ್ಲಿ uidai.gov.in ವೆಬ್‌ಸೈಟ್‌ಗೆ ಹೋಗಿ ಭಾಷೆ ಆಯ್ಕೆ ಮಾಡಿ. My Aadhar ಕ್ಲಿಕ್ ಮಾಡಿ, Update Your Aadhaar ಕ್ಲಿಕ್ ಮಾಡಬೇಕು. Update Aadhar Details ಪೇಜ್‌ನಲ್ಲಿ Document Update ಕೊಡಬೇಕು. ನಂತರ ಆಧಾರ್ ನಂಬರ್, ಒಟಿಪಿ ನಮೂದಿಸಿ Log In ಕ್ಲಿಕ್ ಮಾಡಬೇಕು. ಮಾಹಿತಿ ಅಪ್‌ಲೋಡ್ ನೀಡಿದ ನಂತರ submit ಬಟನ್ ಕ್ಲಿಕ್ ಮಾಡಬೇಕು. ನಂತರ submit update request ಕ್ಲಿಕ್ ಮಾಡಿದರೆ ಅಪ್‌ಡೇಟ್ ರಿಕ್ವೆಸ್ಟ್ ನಂಬರ್ ಬರಲಿದೆ.
ಇನ್ನು, ಫೋಟೊ, ಕಣ್ಣಿನ ಐರಿಸ್, ಬಯೋಮೆಟ್ರಿಕ್ ಅಪ್‌ಡೇಟ್‌ಗೆ ಆಧಾರ್ ಎನ್‌ರೋಲ್‌ಮೆಂಟ್ ಸೆಂಟರ್‌ಗಳಿಗೆ ಭೇಟಿ ನೀಡಬೇಕು.
ಇದನ್ನೂ ಓದಿ – ಧಗಧಗ ಹೊತ್ತಿ ಉರಿದ ಐರಾವತ, ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ದೊಡ್ಡ ಅನಾಹುತ
LATEST NEWS
- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು






