ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್‌ನೆಟ್‌ ಸೇವೆ, ಮಸ್ಕ್‌ ಸಂಸ್ಥೆಗೆ ಪರವಾನಗಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ನವದೆಹಲಿ: ಅಮೆರಿಕದ ಉದ್ಯಮಿ ಇಲಾನ್ ಮಸ್ಕ್ ಒಡೆತನದ ಸ್ಟಾರ್‌ಲಿಂಕ್‌ಗೆ ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ (Internet) ಸೇವೆಗಳನ್ನು ಒದಗಿಸಲು ಪರವಾನಗಿ ದೊರೆತಿದೆ. ದೂರಸಂಪರ್ಕ ಇಲಾಖೆಯಿಂದ (DoT) ಈ ಪರವಾನಗಿ ಪಡೆದ ಮೂರನೇ ಕಂಪನಿ ಸ್ಟಾರ್‌ಲಿಂಕ್ ಆಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಪ್ರಾಯೋಗಿಕ ತರಂಗಾಂತರವನ್ನು ಅರ್ಜಿ ಸಲ್ಲಿಸಿದ 15ರಿಂದ 20 ದಿನಗಳ ಒಳಗಾಗಿ ಹಂಚಿಕೆ ಮಾಡಲಾಗುವುದು ಎಂದು ದೂರಸಂಪರ್ಕ ಇಲಾಖೆ ಹೇಳಿದೆ. ಆದರೆ, ಈ ಮಹತ್ವದ ಪರವಾನಗಿ ಹಂಚಿಕೆ ಕುರಿತು ಸ್ಟಾರ್‌ಲಿಂಕ್‌ ಅಥವಾ ದೂರಸಂಪರ್ಕ ಇಲಾಖೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ ಎಂದು ಪಿಟಿಐ ವರದಿ ಮಾಡಿದೆ. ಇದು ಮಾರುಕಟ್ಟೆಯಲ್ಲಿ ಕುತೂಹಲ ಮೂಡಿಸಿದೆ.

https://chat.whatsapp.com/JPJ0lTQsTKf365Fqu6Q7cd

ಈಗಾಗಲೇ ಬ್ರಿಟಿಷ್ ಮೂಲದ ಯುಟೆಲ್‌ಸ್ಯಾಟ್‌ನ ಒನ್‌ವೆಬ್‌ ಮತ್ತು ಭಾರತೀಯ ಟೆಲಿಕಾಂ ದೈತ್ಯ ರಿಲಯನ್ಸ್‌ನ ಜಿಯೊ ಈ ಪರವಾನಗಿಯನ್ನು ಪಡೆದಿವೆ.

ಇದನ್ನೂ ಓದಿ » ಭದ್ರಾವತಿ VISLಗೆ ಕೇಂದ್ರ ಸರ್ಕಾರದ ಅಧಿಕಾರಿಗಳ ನಿಯೋಗ, ಎಲ್ಲೆಲ್ಲಿ ಭೇಟಿ ನೀಡಿದರು? ಯಾರನ್ನೆಲ್ಲ ಭೇಟಿಯಾದರು?

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment