ನವದೆಹಲಿ: ಅಮೆರಿಕದ ಉದ್ಯಮಿ ಇಲಾನ್ ಮಸ್ಕ್ ಒಡೆತನದ ಸ್ಟಾರ್‌ಲಿಂಕ್‌ಗೆ ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ (Internet) ಸೇವೆಗಳನ್ನು ಒದಗಿಸಲು ಪರವಾನಗಿ ದೊರೆತಿದೆ. ದೂರಸಂಪರ್ಕ ಇಲಾಖೆಯಿಂದ (DoT) ಈ ಪರವಾನಗಿ ಪಡೆದ ಮೂರನೇ ಕಂಪನಿ ಸ್ಟಾರ್‌ಲಿಂಕ್ ಆಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪ್ರಾಯೋಗಿಕ ತರಂಗಾಂತರವನ್ನು ಅರ್ಜಿ ಸಲ್ಲಿಸಿದ 15ರಿಂದ 20 ದಿನಗಳ ಒಳಗಾಗಿ ಹಂಚಿಕೆ ಮಾಡಲಾಗುವುದು ಎಂದು ದೂರಸಂಪರ್ಕ ಇಲಾಖೆ ಹೇಳಿದೆ. ಆದರೆ, ಈ ಮಹತ್ವದ ಪರವಾನಗಿ ಹಂಚಿಕೆ ಕುರಿತು ಸ್ಟಾರ್‌ಲಿಂಕ್ ಅಥವಾ ದೂರಸಂಪರ್ಕ ಇಲಾಖೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ ಎಂದು ಪಿಟಿಐ ವರದಿ ಮಾಡಿದೆ. ಇದು ಮಾರುಕಟ್ಟೆಯಲ್ಲಿ ಕುತೂಹಲ ಮೂಡಿಸಿದೆ.
ಈಗಾಗಲೇ ಬ್ರಿಟಿಷ್ ಮೂಲದ ಯುಟೆಲ್‌ಸ್ಯಾಟ್‌ನ ಒನ್‌ವೆಬ್ ಮತ್ತು ಭಾರತೀಯ ಟೆಲಿಕಾಂ ದೈತ್ಯ ರಿಲಯನ್ಸ್‌ನ ಜಿಯೊ ಈ ಪರವಾನಗಿಯನ್ನು ಪಡೆದಿವೆ.
ಇದನ್ನೂ ಓದಿ » ಭದ್ರಾವತಿ VISLಗೆ ಕೇಂದ್ರ ಸರ್ಕಾರದ ಅಧಿಕಾರಿಗಳ ನಿಯೋಗ, ಎಲ್ಲೆಲ್ಲಿ ಭೇಟಿ ನೀಡಿದರು? ಯಾರನ್ನೆಲ್ಲ ಭೇಟಿಯಾದರು?




