ಶಿವಮೊಗ್ಗ ಲೈವ್.ಕಾಂ | SHIMOGA | 17 ಅಕ್ಟೋಬರ್ 2019
ಬೆಂಗಳೂರು – ಶಿವಮೊಗ್ಗ ಪ್ಯಾಸೆಂಜರ್ ರೈಲಿನ ವೇಳಾಪಟ್ಟಿ ಬದಲಾಗಿದೆ. ಈ ಕುರಿತು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ರೈಲು ಸಂಖ್ಯೆ 56917 ಬೆಂಗಳೂರು – ಶಿವಮೊಗ್ಗ ಪ್ಯಾಸೆಂಜರ್ ರೈಲು ಹೊರಡುವ ಸಮಯ ಬದಲಾಗಿದೆ. ಮೆಜಸ್ಟಿಕ್’ನಿಂದ ಬೆಳಗ್ಗೆ 6.30ಕ್ಕೆ ಹೊರಡುತ್ತಿದ್ದ ರೈಲು ಇನ್ಮುಂದೆ ಬೆಳಗ್ಗೆ 5.30ಕ್ಕೆ ಹೊರಡಲಿದೆ.
ರೈಲು ಸಂಖ್ಯೆಯ 56918 ರೈಲು ಶಿವಮೊಗ್ಗ – ಬೆಂಗಳೂರು ರೈಲು ಮಧ್ಯಾಹ್ನ 2 ಗಂಟೆಗೆ ಹೊರಡುವ ಬದಲು ಇನ್ಮುಂದೆ 12.30ಕ್ಕೆ ಹೊರಡಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು – ಶಿವಮೊಗ್ಗ ಪ್ಯಾಸೆಂಜರ್ ರೈಲು ಟೈಮ್
ಇನ್ಮುಂದೆ ಬೆಳಗ್ಗೆ 5.30ಕ್ಕೆ ಮೆಜಸ್ಟಿಕ್’ನಿಂದ ಹೊರಡಲಿದೆ. 5.35ಕ್ಕೆ ಮಲ್ಲೇಶ್ವರಂ, 5.40ಕ್ಕೆ ಯಶವಂತಪುರ, 5.49ಕ್ಕೆ ಚಿಕ್ಕಬಾಣಾವರ, 6.04 ದೊಡ್ಡಬೆಲೆ, 6.16ಕ್ಕೆ ನಿಡುವಂದ, 6.29ಕ್ಕೆ ಕ್ಯಾತಸಂದ್ರ, 6.38ಕ್ಕೆ ತುಮಕೂರು, 7.04ಕ್ಕೆ ಗುಬ್ಬಿ, 7.45ಕ್ಕೆ ಅಮ್ಮಸಂದ್ರ, 7.52ಕ್ಕೆ ಬಾಣಸಂದ್ರ, 7.57ಕ್ಕೆ ಅರಳಗುಪ್ಪೆ, 8.20ಕ್ಕೆ ತಿಪಟೂರು, 8.35ಕ್ಕೆ ಹೊನ್ನವಳ್ಳಿ ರಸ್ತೆ, 8.55ಕ್ಕೆ ಅರಸಿಕೆರೆ, 9.16ಕ್ಕೆ ಬಾಣಾವರ, 9.27ಕ್ಕೆ ದೇವನೂರು, 9.47ಕ್ಕೆ ಕಡೂರು, 9.58ಕ್ಕೆ ಬೀರೂರು, 10.25ಕ್ಕೆ ತರೀಕೆರೆ, 10.43ಕ್ಕೆ ಭದ್ರಾವತಿ, ಬೆಳಗ್ಗೆ 11 ಗಂಟೆಗೆ ಶಿವಮೊಗ್ಗ ತಲುಪಲಿದೆ.
ಶಿವಮೊಗ್ಗದಿಂದ ಬೆಂಗಳೂರು ಸಮಯವು ಬದಲು
ಶಿವಮೊಗ್ಗದಿಂದ ಮಧ್ಯಾಹ್ನ 12.34 ಹೊರಡಲಿದೆ. ಭದ್ರಾವತಿ 12.48, ತರೀಕೆರೆ 1.10, ಬೀರೂರು 1.48, ಕಡೂರು 2 ಗಂಟೆ, ದೇವನೂರು 2.10ಕ್ಕೆ, ಬಾಣಾವರ ಮಧ್ಯಾಹ್ನ 2.22, ಅರಸಿಕೆರೆ ಮಧ್ಯಾಹ್ನ 2.40ಕ್ಕೆ, ಹೊನ್ನಾವಳ್ಳಿ ರಸ್ತೆ ಮದ್ಯಾಹ್ನ 3.01ಕ್ಕೆ, ತಿಪಟೂರು ಮಧ್ಯಾಹ್ನ 3.15, ಅರಳಗುಪ್ಪೆ ಮಧ್ಯಾಹ್ನ 3.29, ಬಾಣಸಂದ್ರ ಮಧ್ಯಾಹ್ನ 3.34, ಅಮ್ಮಸಂದ್ರ ಮಧ್ಯಾಹ್ನ 3.49, ಗುಬ್ಬಿ ಸಂಜೆ 4.40, ತುಮಕೂರು ಸಂಜೆ 5.05, ಕ್ಯಾತಸಂದ್ರ ಸಂಜೆ 5.26, ನಿಡುವಂದ 5.47, ದೊಡ್ಡಬೆಲೆ 5.59, ಚಿಕ್ಕಬಾಣಾವರ 6.19, ಯಶವಂತಪುರ ಸಂಜೆ 6.40ಕ್ಕೆ, ಮಲ್ಲೇಶ್ವರಂ 6.52, ಬೆಂಗಳೂರು ಮಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ರಾತ್ರಿ 7.30ಕ್ಕೆ ತಲುಪಲಿದೆ.
ಪ್ಯಾಸೆಂಜರ್ ರೈಲಿನಲ್ಲಿ ಒಂಭತ್ತು ಕೋಚ್’ಗಳು ಇರಲಿವೆ. ಈ ಪೈಕಿ ಏಳು ಜನರಲ್ ಕೋಚ್, ಉಳಿದೆರಡು ಸೆಕೆಂಡ್ ಕ್ಲಾಸ್ ಕೋಚ್’ಗಳು ಇರಲಿವೆ. ಅಕ್ಟೋಬರ್ 18ರಿಂದ ಹೊಸ ಸಮಯದಂತೆ ರೈಲು ಹೊರಡಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಲಿಂಕ್ ಕ್ಲಿಕ್ ಮಾಡಿ, ಪೂರ್ತಿ ನ್ಯೂಸ್ ಓದಿ
- ತ್ಯಾವರೆಕೊಪ್ಪ ಸಫಾರಿಯ ಹುಲಿ ಅಂಜನಿ ಸಾವು, ಕಾರಣವೇನು?
- ಶಿವಮೊಗ್ಗ ತಾಲೂಕಿನ ಹಲವೆಡೆ ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?
- ಅಮೆರಿಕದಿಂದಲೇ ಆನ್ಲೈನ್ ಮೀಟಿಂಗ್, ಜವಾಬ್ದಾರಿ ಮೆರೆದ ಮಿನಿಸ್ಟರ್, ಯಾವೆಲ್ಲ ಸಭೆ ನಡೆಸಿದ್ದಾರೆ?
- ಸಾವಿರ ಮೂಟೆ ಸಿಮೆಂಟ್ ಆರ್ಡರ್ ಮಾಡಿದ್ದ ಗುತ್ತಿಗೆದಾರನಿಗೆ ಕೊನೆಗೆ ಕಾದಿತ್ತು ಶಾಕ್, ಆಗಿದ್ದೇನು?
- ಶಿವಮೊಗ್ಗ ಜಿಲ್ಲೆಯ ಯಾವ್ಯಾವ ತಾಲೂಕಿನಲ್ಲಿ ಎಷ್ಟಿದೆ ತಾಪಮಾನ? ಇಲ್ಲಿದೆ ಲಿಸ್ಟ್
Nigt what time