ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 10 MAY 2024
TRAFFIC FINES PAYMENT : ನಿಮ್ಮ ವಾಹನದ ಮೇಲೆ ಸಂಚಾರ ಉಲ್ಲಂಘನೆ ಕೇಸ್ ಇದೆಯಾ? ಎಷ್ಟು ದಂಡ ಪಾವತಿಸುವುದು ಬಾಕಿ ಇದೆ? ಇದನ್ನು ಚೆಕ್ ಮಾಡುವುದು ಈಗ ಸುಲಭ. ಕರ್ನಾಟಕ ಪೊಲೀಸ್ ಇಲಾಖೆ ಇದಕ್ಕಾಗಿ ಪ್ರತ್ಯೆಕ ವೆಬ್‌ಸೈಟ್ ಬಿಡುಗಡೆ ಮಾಡಿದೆ. ಒಂದೇ ಕ್ಲಿಕ್‌ನಲ್ಲಿ ನಿಮ್ಮ ವಾಹನದ ಮೇಲಿನ ದಂಡದ ಮಾಹಿತಿ ಪಡೆಯಬಹುದಾಗಿದೆ.
ಈ ಮೊದಲು ಹೇಗಿತ್ತು ವ್ಯವಸ್ಥೆ?
ಈವರೆಗೂ ವಾಹನದ ದಂಡದ ಕುರಿತು ಮಾಹಿತಿಗೆ ಕರ್ನಾಟಕ ಒನ್ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬೇಕಿತ್ತು. ಇಲ್ಲವಾದಲ್ಲಿ ಸಂಚಾರ ಠಾಣೆಗೆ ಭೇಟಿ ನೀಡಿ ಪೊಲೀಸರ ಬಳಿ ವಿಚಾರಿಸಬೇಕಿತ್ತು. ಈಗ ಪೊಲೀಸ್ ಇಲಾಖೆ ಹೊಸ ವೆಬ್‌ಸೈಟ್ ಆರಂಭಿಸಿದೆ.
https://payfine.mchallan.com:7271/ ಈ ವೆಬ್‌ಸೈಟ್ ಮೇಲೆ ಕ್ಲಿಕ್ ಮಾಡಿಬೇಕು. ವಾಹನದ ನೋಂದಣಿ ಸಂಖ್ಯೆ ನಮೂದಿಸಬೇಕು. ನಗರ ಅಥವಾ ಜಿಲ್ಲೆಯನ್ನು ಆಯ್ಕೆ ಮಾಡಬೇಕು. ಕೆಳಗೆ ಸರ್ಚ್ ಬಟನ್ ಕ್ಲಿಕ್ ಮಾಡಬೇಕು. ದಂಡ ಇದ್ದರೆ ತೋರಿಸುತ್ತದೆ. ಪೇ ಬಟನ್ ಕ್ಲಿಕ್ ಮಾಡಿದರೆ ಪಾವತಿಸಬಹುದು.
ಬೆಂಗಳೂರು ನರ ಹೊರತು ಉಳಿದ ಜಿಲ್ಲೆಗಳ ಸಂಚಾರ ನಿಯಮ ಉಲ್ಲಂಘನೆಯ ಮಾಹಿತಿ ಈ ವೆಬ್‌ಸೈಟ್‌ನಲ್ಲಿ ದೊರೆಯಲಿದೆ ಎಂದು ಸಂಚಾರ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದ ಈ ಸರ್ಕಲ್‌ನಲ್ಲಿ ದಿಕ್ಕಿಗೊಂದು ಗುಂಡಿ ಇದೆ, ರಾತ್ರಿ ಹೊತ್ತು ಕರಾಳ ರೂಪ ತೋರಿಸುತ್ತವೆ
LATEST NEWS
- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

About The Editor
ನಿತಿನ್ ಆರ್.ಕೈದೊಟ್ಲು






