ಪೊಲೀಸ್‌ ಸಿಬ್ಬಂದಿಯ ಖಾತೆಯಿಂದಲೆ ₹1.47 ಲಕ್ಷ ಲಪಟಾಯಿಸಿದ ಸೈಬರ್‌ ವಂಚಕರು

 ಶಿವಮೊಗ್ಗ  LIVE 

ಶಿವಮೊಗ್ಗ: ಟ್ರಾಫಿಕ್‌ ಚಲನ್‌ ಹೆಸರಿನಲ್ಲಿ ಬಂದ ಎಪಿಕೆ ಫೈಲ್‌ ಡೌನ್‌ಲೋಡ್‌ ಮಾಡಿ ಪೊಲೀಸ್‌ (Police) ಸಿಬ್ಬಂದಿಯೊಬ್ಬರು ಹಣ ಕಳೆದುಕೊಂಡಿದ್ದಾರೆ.

ಹೇಗಾಯ್ತು ವಂಚನೆ?

ಶಿವಮೊಗ್ಗ ಜಿಲ್ಲೆಯ ಪೊಲೀಸ್‌ ಸಿಬ್ಬಂದಿಯೊಬ್ಬರ ವಾಟ್ಸಪ್‌ಗೆ ಟ್ರಾಫಿಕ್‌ ಚಲನ್‌ ಎಂದು apk ಫೈಲ್‌ ಬಂದಿತ್ತು. ಅದನ್ನು ಡೌನ್‌ಲೋಡ್‌ ಮಾಡಿಕೊಂಡು ತಮ್ಮ ವಾಹನದ ವಿರುದ್ಧದ ದಂಡವಿದೆಯೆ ಎಂದು ಪರಿಶೀಲಿಸಿದ್ದರು. ಯಾವುದೆ ಮಾಹಿತಿ ತೋರಿಸದ ಹಿನ್ನೆಲೆ ಸುಮ್ಮನಾಗಿದ್ದರು.

Sigandur-Janthre-2026-scaled.

ಬ್ಯಾಂಕ್‌ನಿಂದ ಹಣ ಮಾಯ

ಸ್ವಲ್ಪ ದಿನದ ಬಳಿಕ ಪೊಲೀಸ್‌ ಸಿಬ್ಬಂದಿಯ ಎರಡು ಬ್ಯಾಂಕ್‌ ಖಾತೆಗಳಿಂದ ಹಣ ಕಡಿತವಾಗಿತ್ತು. ಒಟ್ಟು ₹1.47 ಲಕ್ಷ ಹಣ ಕಡಿತವಾಗಿರುವುದು ಗಮನಕ್ಕೆ ಬಂದಿತ್ತು. ಎಪಿಕೆ ಫೈಲ್‌ ಮೂಲಕ ತಮ್ಮ ಮಾಹಿತಿ ಕದ್ದು ಬ್ಯಾಂಕ್‌ ಖಾತೆಯಿಂದ ದೋಚಿದ್ದಾರೆ ಎಂದು ಪೊಲೀಸ್‌ ಸಿಬ್ಬಂದಿ ದೂರಿನಲ್ಲಿ ಆರೋಪಿಸಿದ್ದಾರೆ.

SMS-Fraud-Shimoga-CEN-Police-Station.

ಘಟನೆ ಸಂಬಂಧ ಶಿವಮೊಗ್ಗದ ಸಿ.ಇ.ಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಶೂ ಎಸೆದ ವಕೀಲ, ಬಂಧನಕ್ಕೆ ಶಿವಮೊಗ್ಗದಲ್ಲಿ ಕಾನೂನು ವಿದ್ಯಾರ್ಥಿಗಳ ಆಗ್ರಹ

Police

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment