ಶಿವಮೊಗ್ಗದಲ್ಲಿ ಮಿನಿಸ್ಟರ್‌ ಜೊತೆಗೆ ಪ್ರತ್ಯಕ್ಷವಾದ ದೇವರಾಜ್‌, ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಗರಂ, ಏನಂದ್ರು?

ಶಿವಮೊಗ್ಗ: ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ರಾಜಕೀಯ ಹತಾಶೆ ಆವರಿಸಿದೆ. ಹರತಾಳು ಹಾಲಪ್ಪ ಅವರ ಮಾತು ಕೇಳಿ ಅವರು ದಡ್ಡರಾಗುತ್ತಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು. (ಈ ಸುದ್ದಿಯನ್ನು ಇನ್ನು 105 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಉಸ್ತುವಾರಿ ಸಚಿವರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಧು ಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಬಿಜೆಪಿ ರಾಜ್ಯ ಅ‍ಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ ಅವರ ರಾಜಕೀಯ ನಡೆ ಮತ್ತು ಹೇಳಿಕೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Soraba-Arecanut-Farmer-Devaraj-With-Minister-Madhu-Bangarappa

ಮಿನಿಸ್ಟರ್‌ ಏನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್

POINT-1

ಸೊರಬ ತಾಲ್ಲೂಕು ತೇವರತೆಪ್ಪದ ರೈತನಿಗೆ ಸೇರಿದ ಅಡಿಕೆ ಮೆರಗಳನ್ನು ತೆರವು ಮಾಡಿದ ವಿಷಯದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಬಿಜೆಪಿ ನಾಯಕರು ಕೀಳು ರಾಜಕಾರಣ ಮಾಡುತ್ತಿದ್ದಾರೆ. ದೇವರಾಜ್ ತಮ್ಮ ಬಡತನ ಹಾಗೂ ಕಷ್ಟದ ಕಾರಣದಿಂದ ಕೆರೆ ಜಾಗದಲ್ಲಿ ಅಡಿಕೆ ಬೆಳೆದುಕೊಂಡಿದ್ದರು. ಆ ಕುಟುಂಬಕ್ಕೆ ತೊಂದರೆಯಾಗದಂತೆ ಅಡಿಕೆ ಕೊಯ್ಲು ಮುಗಿಯುವವರೆಗೆ ಸದಾ ಬೆಂಬಲವಾಗಿ ನಿಂತು ನಾನು ರಕ್ಷಣೆ ನೀಡಿದೆ ಎಂದು ಹೇಳಿದರು.

POINT-2

ಸಂಸದ ರಾಘವೇಂದ್ರ ಹಾಗೂ ಮಾಜಿ ಶಾಸಕ ಹರತಾಳು ಹಾಲಪ್ಪ ಅವರು ದೇವರಾಜ್‌ ಅವರನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ. ನ್ಯಾಯಾಲಯಕ್ಕೆ ಫೋಟೊಗಳನ್ನು ನೀಡಿ ಒತ್ತುವರಿ ತೆರವುಗೊಳಿಸಿಲ್ಲ ಎಂದು ಕೆಲವರು ತೋರಿಸಿದ್ದಾರೆ. ಹಾಗಾಗಿ ಅಧಿಕಾರಿಗಳು ಅಡಿಕೆ ಬೆಳೆಯನ್ನು ತೆರವುಗೊಳಿಸಬೇಕಾಯಿತು. ಇದರಿಂದ ರೈತನ ಕುಟುಂಬಕ್ಕೆ ತೀವ್ರ ನಷ್ಟವಾಗಿದೆ. ದೇವರಾಜ್‌ ಅವರಿಗೆ ಯಾರು ಸಹಾಯ ಮಾಡಿದ್ದರು ಮತ್ತು ಯಾರು ರಕ್ಷಣೆ ನೀಡಿದ್ದರು ಎಂಬುದು ಸ್ವತಃ ದೇವರಾಜ್‌ ಅವರಿಗೂ ಚೆನ್ನಾಗಿ ಗೊತ್ತಿದೆ ಎಂದು ಮಧು ಬಂಗಾರಪ್ಪ ಹೇಳಿದರು.

POINT-3

ರಾಘವೇಂದ್ರ‌ ಅವರಿಗೆ ರೈತರ ಶಾಲು ಹಾಕುವ ಯೋಗ್ಯತೆಯಿಲ್ಲ. ನಾಲ್ಕು ಬಾರಿ ಸಂಸದರಾಗಿರುವ ರಾಘವೇಂದ್ರ ಅವರಿಗೆ ಜಿಲ್ಲೆಯ ಪ್ರಮುಖ ವಿಷಯಗಳ ಜ್ಞಾನವಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ತಾಳಗುಪ್ಪದಲ್ಲಿ ಬೆಳಿಗ್ಗೆ ನಾಲ್ಕು ಗಂಟೆಗೆ ಪೊಲೀಸರನ್ನು ಕರೆದೊಯ್ದು ಬಡವರ ಅಡಿಕೆ ತೋಟಗಳನ್ನು ಧ್ವಂಸಗೊಳಿಸಲಾಗಿತ್ತು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಹಾವೇರಿಯಲ್ಲಿ ಗೊಬ್ಬರ ಕೇಳಿದ ರೈತರ ಮೇಲೆ ಗುಂಡು ಹಾರಿಸಲಾಗಿತ್ತು ಎಂದು ಮಧು ಬಂಗಾರಪ್ಪ ಕಿಡಿಕಾರಿದರು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

POINT-4

ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಎಲ್ಲಿ ಬೇಕಾದರೂ ಹೋಗಿ ಟೆಂಟ್ ಹಾಕುವ ‘ಟೂರಿಂಗ್ ಟೆಂಟ್’ ಇದ್ದಂತೆ. ಬಂಗಾರಪ್ಪನವರೇ ಅವರಿಗೆ ಬಟ್ಟೆ ಕೊಡಿಸಿ, ಬೆಳೆಸಿ ಶಾಸಕರನ್ನಾಗಿ ಮಾಡಿದ್ದರು. ಆದರೆ ಶಾಸಕರಾದ ತಕ್ಷಣವೇ ಬಂಗಾರಪ್ಪ ಅವರ ಫೋಟೋವನ್ನು ತಮ್ಮ ಮನೆಯಿಂದ ಹೊರಗೆ ಹಾಕಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

POINT-5

ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲಿ ಶರಾವತಿ ಸಂತ್ರಸ್ತರು ಹಾಗೂ ಅರಣ್ಯ ಭೂಮಿ ಸಾಗುವಳಿದಾರರ ಅರ್ಜಿಗಳನ್ನು ಒಂದೇ ಬಾರಿ ತಿರಸ್ಕರಿಸಿ ಬಡ ರೈತರಿಗೆ ದ್ರೋಹ ಎಸಗಲಾಗಿತ್ತು. ಬಂಗಾರಪ್ಪ ಅವರು ಉಚಿತ ಪಂಪ್‌ಸೆಟ್ ನೀಡಿ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿದ್ದರು. ಆದರೆ ಬಿಜೆಪಿ ನಾಯಕರು ಕೆರೆ ಒತ್ತುವರಿ ನೆಪದಲ್ಲಿ ಬಡವರ ಹೊಟ್ಟೆಗೆ ಹೊಡೆಯುತ್ತಿದ್ದಾರೆ ಎಂದರು ಆರೋಪಿಸಿದರು.