SHIVAMOGGA LIVE NEWS, 29 JANUARY 2025
ಶಿವಮೊಗ್ಗ : ತೀವ್ರ ರಕ್ತಸ್ರಾವವಾಗಿ ಗರ್ಭಿಣಿ (Pregnant) ಸಾವನ್ನಪ್ಪಿದ್ದಾರೆ. ಸಾಗರದ ಸರ್ಕಾರಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಹೊಸನಗರ ತಾಲೂಕು ನಗರ ಹೋಬಳಿ ದುಬಾರತಟ್ಟೆ ನಿವಾಸಿ ಅಶ್ವಿನಿ (29) ಮೃತ ಗರ್ಭಿಣಿ. ರಕ್ತಸ್ರಾವದ ಹಿನ್ನೆಲೆ ಜ.26ರಂದು ಅಶ್ವಿನಿಯನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗರ್ಭಪಾತವಾದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅಶ್ವಿನಿ ಮೃತಪಟ್ಟಿದ್ದಾರೆ.
ಅಶ್ವಿನಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂಸಿಎ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದಿದ್ದರು. ನಗರದ ಅಮೃತ ವಿದ್ಯಾಲಯದಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪತಿ ಪ್ರಕಾಶ್ ಕೋಳಿ ವ್ಯಾಪಾರ ಮಾಡುತ್ತಿದ್ದು, ಒಂದೂವರೆ ವರ್ಷದ ಹಿಂದೆ ಇವರ ಮದುವೆಯಾಗಿತ್ತು.
ಇದನ್ನೂ ಓದಿ » ಮಿಳಘಟ್ಟ, ಖಾಸಗಿ ಬಸ್ ವಶಕ್ಕೆ ಪಡೆದ ಟ್ರಾಫಿಕ್ ಪೊಲೀಸ್, 5 ಸಾವಿರ ರೂ. ದಂಡ, ಕಾರಣವೇನು?