ಶಿವಮೊಗ್ಗ ಲೈವ್.ಕಾಂ | SHIMOGA | 31 ಅಕ್ಟೋಬರ್ 2019
ಪೊಲೀಸ್ ಇಲಾಖೆಯ ಪೂರ್ವ ವಲಯದ ವಿವಿಧ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 26 ಅಸಿಸ್ಟೆಂಟ್ ಸಬ್’ಇನ್ಸ್’ಪೆಕ್ಟರ್’ಗಳಿಗೆ ಸಬ್’ಇನ್ಸ್’ಪೆಕ್ಟರ್’ಗಳಾಗಿ ಪ್ರಮೋಷನ್ ನೀಡಲಾಗಿದೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯ ವಿವಿಧ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 6 ಎಎಸ್ಐಗಳಿಗು ಪದೋನ್ನತಿ ನೀಡಲಾಗಿದೆ. ಇವರನ್ನು ಬೇರೆ ಬೇರೆ ಠಾಣೆಗಳಿಗೆ ನಿಯೋಜಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಯಾರಿಗೆಲ್ಲ ಪ್ರಮೋಷನ್ ಸಿಕ್ಕಿದೆ? ಎಲ್ಲಿಗೆ ನಿಯೋಜಿಸಲಾಗಿದೆ?
- ಡಿ.ಲತಾ – ಡಿಎಸ್’ಬಿ ಘಟಕ ಶಿವಮೊಗ್ಗ – ಪಿ.ಎಸ್.ಐ ಡಿ.ಎಸ್.ಬಿ ಶಾಖೆ ಶಿವಮೊಗ್ಗಕ್ಕೆ ವರ್ಗ
- ಗೀತಾ ಮೊಗೆರ್ತಿ – ಡಿಸಿಆರ್’ಬಿ /ಸಿವಮೊಗ್ಗ – ಪಿ.ಎಸ್.ಐ ಡಿ.ಎಸ್.ಎ ಶಿವಮೊಗ್ಗಕ್ಕೆ ವರ್ಗ
- ಬಸವರಾಜಪ್ಪ – ತುಂಗಾ ನಗರ ಠಾಣೆ – ಪಿ.ಎಸ್.ಐ ಕಾನೂನು ಸುವ್ಯವಸ್ಥೆ ಜಯನಗರ ಠಾಣೆಗೆ ವರ್ಗ
- ರಾಹತ್ ಅಲಿ – ಸಿಇಎನ್ ಪೊಲೀಸ್ ಠಾಣೆ – ಪಿ.ಎಸ್.ಐ ಕಾನೂನು ಸುವ್ಯವಸ್ಥೆ ಭದ್ರಾವತಿ ಹೊಸಮನೆ ಠಾಣೆಗೆ ವರ್ಗ
- ಕೆ.ಜಿ.ನಾಗರಾಜಪ್ಪ – ಮಾಳೂರು ಪೊಲೀಸ್ ಠಾಣೆ – ಪಿ.ಎಸ್.ಐ-1 ಟ್ರಾಫಿಕ್ ವೆಸ್ಟ್ ಶಿವಮೊಗ್ಗಕ್ಕೆ ವರ್ಗ
- ತುಕಾರಾಮ್ ಸಾಗರಕರ್ – ಸಾಗರ ಗ್ರಾಮಾಂತರ ಠಾಣೆ – ಪಿ.ಎಸ್.ಐ-2 ಟೌನ್ ಪೊಲೀಸ್ ಠಾಣೆ ಸಾಗರಕ್ಕೆ ವರ್ಗ
ಇನ್ನು ದಾವಣಗೆರೆ ಜಿಲ್ಲೆಯ ನ್ಯಾಮತಿ ಠಾಣೆಯ ಎಎಸ್ಐ ಜಿ.ಮೋಹನ್ ಅವರಿಗೆ ಪಿಎಸ್ಐ ಆಗಿ ಪ್ರಮೋಷನ್ ನೀಡಿ, ಹೊಳೆಹೊನ್ನೂರು ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಮತ್ತೊಂದೆಡೆ ಸಾಗರ ಗ್ರಾಮಾಂತರ ಠಾಣೆಯ ಎಎಸ್ಐ ಮೀರಾಬಾಯಿ ಅವರು ಪ್ರಮೋಷನ್ ತ್ಯಜಿಸಿದ್ದಾರೆ. ಇದೆ ಠಾಣೆಯ ಗುರುವಾನಾಯ್ಕ, ಕೋಟೆ ಠಾಣೆಯ ಎಎಸ್ಐ ಮಂಜುನಾಥ ಅವರಿಗೆ ಮುಂಬಡ್ತಿ ನಿರಾಕರಿಸಿ ಪೂರ್ವ ವಲಯ ಐಜಿಪಿ ಅಮ್ರಿತ್ ಪೌಲ್ ಆದೇಶ ಹೊರಡಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]