ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 10 DECEMBER 2022
ಶಿವಮೊಗ್ಗ : ಮೈ ನಡುಗಿಸುವ ಚಳಿಯ ನಡುವೆ ಇವತ್ತು ಶಿವಮೊಗ್ಗದಲ್ಲಿ ಮಳೆಯಾಗಿದೆ. ಸಂಜೆ ವೇಳೆಗೆ ನಗರದ ವಿವಿಧೆಡೆ ಮಳೆಯಾಗಿದೆ. ಇನ್ನು ಮೂರ್ನಾಲ್ಕು ದಿನ ಚಳಿ ಮುಂದುವರೆಯಲಿದ್ದು, ಮಳೆಯಾಗುವ ಸಂಭವವಿದೆ. (cloudy weather)
ಕಳೆದ ಎರಡು ದಿನದಿಂದ ಮೋಡ ಕವಿದ ವಾತಾವರಣ ಇತ್ತು. ಇವತ್ತು ಸಂಜೆ ನಗರದಲ್ಲಿ ಮಳೆಯಾಗಿದೆ. ಕೆಲವೆಡೆ ಕೆಲವು ಕ್ಷಣ ಹನಿ ಬಿದ್ದಿದೆ. ಶುಕ್ರವಾರವು ಜಿಲ್ಲೆಯ ವಿವಿಧೆಡೆ ಮಳೆ ಸುರಿದಿದೆ.
(cloudy weather)
ರೈತರಿಗೆ ಆತಂಕ ಮೂಡಿಸಿದ ಮಳೆ
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಮಳೆಯಾಗುತ್ತಿದೆ. ಈ ಮಳೆ ರೈತರಲ್ಲಿ ಆತಂಕ ಮೂಡಿಸಿದೆ. ಅಡಕೆ, ಭತ್ತ, ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆಗಳ ಕೊಯ್ಲು ಮತ್ತು ಒಕ್ಕಲು ಭರದಿಂದ ಸಾಗಿದೆ. ಈ ಸಂದರ್ಭ ಮಳೆ ಬಂದಿದ್ದು ಫಸಲನ್ನು ಒಣಗಿಸುವುದೆ ಕಷ್ಟವಾಗಿದೆ.
ಅಡಕೆ ಕೊಯ್ಲು ಮಾಡಿ ಬೇಯಿಸಿ ಒಣಗಿಸಲು ಬಿಸಿಲು ಬೇಕು. ಆದರೆ ಮೋಡ ಕವಿದ ವಾತಾವರಣ ಮತ್ತು ಮಳೆಯಿಂದಾಗಿ ಬೆಳೆಗಾರರು ಚಿಂತೆಗೀಡಾಗಿದ್ದಾರೆ.
(cloudy weather)
ಗಢಗಢ ನಡುಗಿಸುತ್ತಿದೆ ಚಳಿ
ಒಂದು ತಿಂಗಳು ತಡವಾಗಿ ಚಳಿ ಆರಂಭವಾಗಿದೆ. ತೀವ್ರ ಚಳಿಗೆ ಜನರು ಗಢಗಢ ನಡುಗುವಂತಾಗಿದೆ. ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಮ್ಯಾಂದೊಸ್ ಚಂಡ ಮಾರುತದ ಪರಿಣಾಮ ರಾಜ್ಯದಲ್ಲಿ ಇನ್ನು ಐದು ದಿನ ಚಳಿ, ಮೋಡ, ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಇದನ್ನೂ ಓದಿ – ಮತ್ತೆ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ, ಚಳಿ ಪ್ರಮಾಣವು ಹೆಚ್ಚಳ
ರಾಜ್ಯದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಡಿ.10 ರಿಂದ ಡಿ.14ರವರೆಗೆ ಭಾರಿ ಮಳೆಯಾಗುವ ಸಂಭವವಿದೆ. ಹಾಗಾಗಿ ಕೆಲವು ಜಿಲ್ಲೆಗಳಲ್ಲಿ ಯಲ್ಲೊ ಅಲರ್ಟ್ ಘೋಷಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422