SHIVAMOGGA LIVE | 8 JULY 2023
SHIMOGA : ಜಿಲ್ಲೆಯಾದ್ಯಂತ ಮಳೆ (Rain) ಪ್ರಮಾಣ ಕ್ಷೀಣಿಸಿದೆ. ಶಿವಮೊಗ್ಗ ತಾಲೂಕಿನಲ್ಲಿ ಮಳೆ ಮರೆಯಾಗಿ ಬಿಸಿಲು ಕಾಣಿಸಿಕೊಂಡಿದೆ. ಉಳಿದ ತಾಲೂಕುಗಳಲ್ಲಿಯು ವರುಣನ ವೇಗ ತಗ್ಗಿದೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಕಳೆದ 24 ಗಂಟೆಯಲ್ಲಿ ಜಿಲ್ಲೆಯಾದ್ಯಂತ ಸರಾಸರಿ 35.3 ಮಿ.ಮೀ ಮಳೆಯಾಗಿದೆ. ಭದ್ರಾವತಿ ತಾಲೂಕಿನಲ್ಲಿ 8.1 ಮಿ.ಮೀ, ಹೊಸನಗರದಲ್ಲಿ 68.2 ಮಿ.ಮೀ, ಸಾಗರದಲ್ಲಿ 49.1 ಮಿ.ಮೀ, ಶಿಕಾರಿಪುರದಲ್ಲಿ 9.8 ಮಿ.ಮೀ, ಶಿವಮೊಗ್ಗದಲ್ಲಿ 12.8 ಮಿ.ಮೀ, ಸೊರಬದಲ್ಲಿ 23.1 ಮಿ.ಮೀ, ತೀರ್ಥಹಳ್ಳಿಯಲ್ಲಿ 41.9 ಮಿ.ಮೀ. ಮಳೆಯಾಗಿದೆ.

ಜಲಾಶಯಗಳ ಒಳ ಹರಿವು ಕುಸಿತ
ಜಿಲ್ಲೆಯಾದ್ಯಂತ ಕೆಲವು ದಿನ ಭಾರಿ ಮಳೆಯಾಗಿತ್ತು (Rain). ಇದರಿಂದ ಜಲಾಶಯಗಳ ಒಳ ಹರಿವು ಏರಿಕೆಯಾಗಿತ್ತು. ಆದರೆ ಮಳೆ ಕುಸಿತದಿಂದಾಗಿ ಜಲಾಶಯಗಳಿಗೆ ನೀರಿನ ಹರಿವು ಕಡಿಮೆಯಾಗಿದೆ. ಲಿಂಗನಮಕ್ಕಿ ಡ್ಯಾಂಗೆ 22,157 ಕ್ಯೂಸೆಕ್ ಒಳ ಹರಿವು ಇದೆ. ನೀರಿನ ಮಟ್ಟ 1749.35 ಅಡಿಗೆ ತಲುಪಿದೆ. ಭದ್ರಾ ಜಲಾಶಯದ ಒಳ ಹರಿವು 6030 ಕ್ಯೂಸೆಕ್ ದಾಖಲಾಗಿದೆ. ನೀರಿನ ಮಟ್ಟ 139.8 ಅಡಿಗೆ ತಲುಪಿದೆ. ಇನ್ನು, ತುಂಗಾ ಜಲಾಶಯಕ್ಕೆ 16,386 ಕ್ಯೂಸೆಕ್ ಒಳ ಹರಿವು ಇದ್ದು, 17,149 ಕ್ಯೂಸೆಕ್ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ.

ಇಳಿದ ನದಿ ಮಟ್ಟ
ತುಂಗಾ ಜಲಾಶಯದಿಂದ ಶುಕ್ರವಾರ ಹೆಚ್ಚಿನ ಪ್ರಮಾಣದ ನೀರನ್ನು ಹೊಳೆಗೆ ಹರಿಸಿದ್ದರಿಂದ ಶಿವಮೊಗ್ಗದಲ್ಲಿ ನದಿ ನೀರಿನ ಮಟ್ಟ ಏರಿಕೆಯಾಗಿತ್ತು. ಆದರೆ ಮಳೆ ಕಡಿಮೆಯಾಗಿದ್ದರಿಂದ ಶನಿವಾರ ಜಲಾಶಯದ ಹೊರ ಹರಿವು ಇಳಿಕೆಯಾಗಿದೆ. ಹಾಗಾಗಿ ನದಿ ನೀರಿನ ಮಟ್ಟ ಕಡಿಮೆಯಾಗಿದೆ. ಕೋರ್ಪಲಯ್ಯ ಛತ್ರ ಮಂಟಪದ ಅರ್ಧ ಭಾಗದವರೆಗೆ ಮಾತ್ರ ಈಗ ನೀರು ಹರಿಯುತ್ತಿದೆ.

ಇದನ್ನೂ ಓದಿ – ಅರ್ಧಕ್ಕರ್ಧ ಶಿವಮೊಗ್ಗ ತಾಲೂಕಿನಲ್ಲಿ ಜು.9ರಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ
LATEST NEWS
- ಸರ್ಕಾರಿ ಮಹಿಳಾ ನೌಕರರ ಸಂಘ ಅಸ್ಥಿತ್ವಕ್ಕೆ, ಉದ್ದೇಶವೇನು? ರಾಜ್ಯಾಧ್ಯಕ್ಷೆ ಏನೆಲ್ಲ ಹೇಳಿದರು?

- ಅರ್ಧಕ್ಕರ್ಧ ಶಿವಮೊಗ್ಗ ಸಿಟಿಯಲ್ಲಿ ಫೆಬ್ರವರಿ 7ರಂದು ಇಡೀ ದಿನ ಕರೆಂಟ್ ಇರಲ್ಲ, ಯಾವ್ಯಾವ ಏರಿಯಾ? ಇಲ್ಲಿದೆ ಲಿಸ್ಟ್

- ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತಷ್ಟು ತಗ್ಗಿದ ತಪಮಾನ, ಯಾವ್ಯಾವ ತಾಲೂಕಿನಲ್ಲಿ ಎಷ್ಟಿದೆ?

- ಶಿವಮೊಗ್ಗ ಮಾರಿಕಾಂಬಾ ಜಾತ್ರೆ, ಪಂದ್ಯ ಗೆದ್ದವರಿಗೆ ಎರಡು ಟಗರು

- MRPಗಿಂತಲು ಹೆಚ್ಚು ವಸೂಲಿ, ಫ್ಲಿಪ್ಕಾರ್ಟ್ ಸಂಸ್ಥೆಗೆ ಬಿಸಿ ಮುಟ್ಟಿಸಿದ ಶಿವಮೊಗ್ಗ ಗ್ರಾಹಕ ನ್ಯಾಯಾಲಯ

About The Editor
ನಿತಿನ್ ಆರ್.ಕೈದೊಟ್ಲು





