NEWS HIGHLIGHTS
ಶಿವಮೊಗ್ಗ : ಜಿಲ್ಲೆಯಲ್ಲಿ ಇವತ್ತೂ ಮಳೆ (Rainfall) ಮುಂದುವರೆದಿದೆ. ಮಧ್ಯಾಹ್ನದ ವೇಳೆಗೆ ಶುರುವಾದ ಮಳೆ ಎಡೆಬಿಡದೆ ಸುರಿಯುತ್ತಿದೆ. ಅಲ್ಲಲ್ಲಿ ಗುಡುಗು, ಗಾಳಿ ಸಹಿತ ಮಳೆಯಾಗುತ್ತಿದೆ.
➤ ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.ತೀರ್ಥಹಳ್ಳಿ, ಹೊಸನಗರ, ಸಾಗರ, ಸೊರಬ ಮತ್ತು ಶಿಕಾರಿಪುರದ ವಿವಿಧೆಡೆ ಜೋರು ಮಳೆಯಾಗುತ್ತಿದೆ (Rainfall). ಶಿವಮೊಗ್ಗ, ಭದ್ರಾವತಿ ತಾಲೂಕುಗಳಲ್ಲಿ ಮೋಡ ಕವಿದ ವಾತಾವರಣವಿದೆ. ವಿವಿಧೆಡೆ ತುಂತುರು ಮಳೆಯಾದ ಮಾಹಿತಿ ಇದೆ.
ಮಾರುತಿಪುರ, ತಾಳಗುಂದದಲ್ಲಿ ಭಾರಿ ಮಳೆ

ಹೊಸನಗರ ತಾಲೂಕು ಮಾರುತಿಪುರ, ಶಿಕಾರಿಪುರದ ತಾಳಗುಂದ, ಸಾಗರದ ಹೊಸೂರು, ಸೊರಬದ ಇಂಡುವಳ್ಳಿ, ಬಿಳುವಾಣಿ ಸುತ್ತಮುತ್ತ ಇವತ್ತು ಭಾರಿ ಮಳೆಯಾದ ವರದಿಯಾಗಿದೆ. ಮಾರುತಿಪುರ ಸುತ್ತಮುತ್ತ ಈತನಕ 51 ಮಿ.ಮೀ ಮಳೆಯಾಗಿದೆ. ಶಿಕಾರಿಪುರ ತಾಲೂಕು ತಾಳಗುಂದಲ್ಲಿ 40 ಮಿ.ಮೀ ಮಳೆಯಾಗಿದೆ. ಭಾರಿ ಬಿಸಿಲಿನಿಂದ ಹೈರಾಣಾಗಿದ್ದ ಜನರಿಗೆ ಜೋರು ಮಳೆ ತಂಪು ನೀಡಿದೆ.

ಇದನ್ನೂ ಓದಿ » ಹೊಸಮನೆ ಚಾನಲ್ ಏರಿ ಮೇಲೆ ಭೀಕರ ಅಪಘಾತ, ಯುವಕನ ಸ್ಥಿತಿ ಗಂಭೀರ
ಕೋಡೂರಿನಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮಳೆ
ಕಳೆದ 24 ಗಂಟೆ ಅವಧಿಯಲ್ಲಿ ಹೊಸನಗರ ತಾಲೂಕು ಕೋಡೂರಿನಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮಳೆಯಾಗಿದೆ. ಈ ಅವಧಿಯಲ್ಲಿ 82 ಮಿ.ಮೀ ಮಳೆಯಾಗಿದೆ. ಕೋಡೂರು ಸುತ್ತಮುತ್ತ ಸುರಿದ ಭಾರಿ ಮಳೆಗೆ ತೋಟ, ಗದ್ದೆಯಲ್ಲಿ ಬೆಳೆ ಹಾನಿ ಉಂಟಾಗಿತ್ತು.
