ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 7 JULY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
RAINFALL REPORT : ಶಿವಮೊಗ್ಗ ಜಿಲ್ಲೆಯಾದ್ಯಂತ ಭಾನುವಾರವು ಮಳೆ ಮುಂದುವರೆದಿದೆ. ಬೆಳಗ್ಗೆಯಿಂದ ಹಲವು ಕಡೆ ಸಾಧಾರಣ ಮಳೆಯಾಗುತ್ತಿದೆ. ಇವತ್ತು ಶಿವಮೊಗ್ಗ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿತ್ತು. ಆದರೆ ಮಳೆ ಪ್ರಮಾಣ ಕ್ಷೀಣಿಸಿದೆ.
ಭದ್ರಾವತಿಯ ಸಿಂಗನಮನೆ, ಅರಳಿಕೊಪ್ಪ, ಮಾವಿನಕೆರೆ, ಯರೆಹಳ್ಳಿ, ಕುಮ್ಮಾರನಹಳ್ಳಿ, ಅರಳಹಳ್ಳಿ, ಕಾಗೆಕೊಡಮಗ್ಗಿ, ತಡಸ, ಬಿಳಕಿ, ನಾಗತಿಬೆಳಗಲು, ದಾಸರಕಲ್ಲಹಳ್ಳಿಯಲ್ಲಿ ಮಳೆಯಾಗಿದೆ. ಶಿವಮೊಗ್ಗದ ಕೊರಲಹಳ್ಳಿ, ಹಸೂಡಿ, ಸೂಗೂರು, ಅಬ್ಬಲಗೆರೆ, ಕೊಮ್ಮನಾಳು, ಕುಂಚೇನಹಳ್ಳಿ, ಮಲ್ಲಾಪುರ, ರಾಮನಗರ, ಆಯನೂರು, ತಮ್ಮಡಿಹಳ್ಳಿ ಸೇರಿದಂತೆ ತಾಲೂಕಿನ ವಿವಿಧೆಡೆ ಮಳೆಯಾಗಿದೆ.
ಸಾಗರ ಭೀಮನಕೋಣೆ, ಕಲ್ಮನೆ, ಕಾಂಡಿಕಾ, ಸಿರಿವಂತೆ, ನಾಡಕಲಸಿ, ಹಿರೆನಲ್ಲೂರು. ಸೊರಬದ ಮುಟುಗುಪ್ಪೆ, ಹೊಸಬಾಳೆ, ಹೆಗ್ಗೋಡು, ಇಂಡುವಳ್ಳಿ, ಚಿತ್ತೂರು, ಮಾವಲಿ, ಹಳೆಸೊರಬ, ಹೆಚ್ಚೆ, ಬೆನ್ನೂರು, ದ್ಯಾವನಹಳ್ಳಿ, ತಾಳಗಡ್ಡಿ, ಕುಬಟೂರು, ಅಗಸನಹಳ್ಳಿ, ಮೂಡಿ ದೊಡ್ಡಿಕೊಪ್ಪ. ಶಿಕಾರಿಪುರದ ಬಿಳಕಿ, ಚಿಕ್ಕಮಾಗಡಿ, ತಾಳಗುಂದ, ಹಿರೆಜಂಬೂರು, ಚಿಕ್ಕ ಜಂಬೂರು. ಹೊಸನಗರದ ಸೋನಲೆ, ಹೊಸೂರು ಸಂಪೆಕಟ್ಟೆ. ತೀರ್ಥಹಳ್ಳಿಯ ಹೊಸಹಳ್ಳಿ, ತೀರ್ಥಮತ್ತೂರು, ನೊಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆಯಾಗಿದೆ.
ಇದನ್ನೂ ಓದಿ – ಭದ್ರಾ ಜಲಾಶಯದ ಗೇಟ್ಗಳು ರಿಪೇರಿ ಪೂರ್ಣ, ಅಚ್ಚುಕಟ್ಟು ರೈತರ ಆತಂಕ ದೂರ