ಶಿವಮೊಗ್ಗ: ಜಿಲ್ಲೆಯಾದ್ಯಂತ ಸೋಮವಾರ ಜೋರು ಗಾಳಿ ಸಹಿತ ಭಾರಿ ಮಳೆಯಾಗಿದೆ (Rainfall). ಇದರಿಂದ ಹಳ್ಳ-ಕೊಳ್ಳಗಳು ಭರ್ತಿಯಾಗಿವೆ. ನದಿ, ತೊರೆಗಳು ತುಂಬಿ ಹರಿಯುತ್ತಿವೆ. ಇನ್ನು, ಮಳೆಯಿಂದಾಗಿ ಜಿಲ್ಲೆಯ ಹಲವು ಕಡೆ ಹಾನಿಯು ಸಂಭವಿಸಿದೆ.
ಹೊಸನಗರ, ಸಾಗರ, ತೀರ್ಥಹಳ್ಳಿ ತಾಲೂಕುಗಳಲ್ಲಿ ಭಾರಿ ಮಳೆಯಾಗಿದೆ. ಈ ಭಾಗದಲ್ಲಿಯೇ ಹೆಚ್ಚು ಹಾನಿ ಸಂಭವಿಸಿದೆ.
ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ಟಾಪ್ ನ್ಯೂಸ್
ಮನೆ ಗೋಡೆ ಕುಸಿತ
ಹೊಸನಗರ: ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಗಿ ನಿವಾಸಿ ವಿಶ್ವನಾಥ್ ಅವರ ಮನೆ ಮತ್ತು ಕೊಟ್ಟಿಗೆಯ ಗೋಡೆ ಕಸಿದಿದೆ. ಭಾನುವಾರ ರಾತ್ರಿ ಘಟನೆ ಸಂಭವಿಸಿದೆ. ವಿಶ್ವನಾಥ್, ಪತ್ನಿ ಮತ್ತು ಮಕ್ಕಳು ಅಪಾಯದಿಂದ ಪರಾಗಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯ ಸತೀಶ್ ಸೊನಲೆ ಸೇರಿದ ಹಲವರು ಸ್ಥಳಕ್ಕೆ ಭೇಟಿ ನೀಡಿದ್ದರು.
ಭೂಮಿಯಲ್ಲಿ ಬಿರುಕು
ಹೊಸನಗರ: ಕುಂದಗಲ್ ಗ್ರಾಮದಲ್ಲಿ ಭಾರಿ ಭೂಕುಸಿತ ಉಂಟಾಗಿದೆ. ಸುಮಾರು 200 ಮೀಟರ್‌ನಷ್ಟು ಉದ್ದದ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕಳೆದ ವರ್ಷವು ಇದೇ ಜಾಗದಲ್ಲಿ ಭೂಮಿ ಕುಸಿದಿತ್ತು.
ಎಲ್ಲ ಗೇಟ್ ಓಪನ್
ಶಿವಮೊಗ್ಗ: ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾದ್ದರಿಂದ ತುಂಗಾ ಜಲಾಶಯಕ್ಕೆ ಒಳ ಹರಿವು ಹೆಚ್ಚಿತ್ತು. ಅಷ್ಟೇ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. 21 ಗೇಟ್‌ಗಳನ್ನು ತೆರೆದು ನೀರು ಹೊರ ಬಿಡುತ್ತಿದ್ದು, ನದಿಯಲ್ಲಿ ನೀರಿನ ಮಟ್ಟ ಏರಿಕೆಯಗಿದೆ. ಶಿವಮೊಗ್ಗದ ಕೋರ್ಪಲಯ್ಯ ಛತ್ರ ಮಂಟಪ ಮುಕ್ಕಾಲು ಭಾಗ ಮುಳುಗಿತ್ತು.
ಗೋಡೆ ಕುಸಿತ, ವೃದ್ಧೆ ಸಾವು
ಶಿವಮೊಗ್ಗ: ಮಂಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಡುಗಡಿ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ವೃದ್ಧೆ ಸಿದ್ದಮ್ಮ ಮೃತಪಟ್ಟಿದ್ದಾರೆ. ಮನೆಯಲ್ಲಿದ್ದ ನಾಲ್ವರು ಗಾಯಗೊಂಡಿದ್ದು ಅವರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು.
ಜೋಗ ನೋಡಲು ಪ್ರವಾಸಿಗರ ದಂಡು
ಸಾಗರ: ಮಳೆಯಿಂದಾಗಿ ಜೋಗ ಜಲಪಾತಕ್ಕೆ ಜೀವ ಕಳೆ ಬಂದಿದೆ. ರಾಜಾ, ರಾಣಿ, ರೋರರ್, ರಾಕೆಟ್ ಜಲಪಾತಗಳು ಮೈದುಂಬಿಕೊಂಡಿವೆ. ಜಲಪಾತ ವೀಕ್ಷಣೆಗೆ ದೊಡ್ಡ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಅಂಗನವಾಡಿ ಮೇಲೆ ಬಿದ್ದ ಮರ
ತೀರ್ಥಹಳ್ಳಿ: ಹಿರೇಬೈಲು ಮಜರೆ ಹಳ್ಳಿಯ ಅಂಗನವಾಡಿ ಕಟ್ಟಡದ ಮೇಲೆ ಮರ ಬಿದ್ದಿದೆ. ಗೋಡೆಗೆ ಹಾನಿಯಾಗಿದೆ. ಮುಂಜಾಗ್ರತೆ ಕ್ರಮವಾಗಿ ಇಲ್ಲಿನ ಅಂಗನವಾಡಿಯನ್ನು ಕುಡುವಳ್ಳಿಯ ಸರ್ಕಾರಿ ಶಾಲೆ ಆವರಣಕ್ಕೆ ಸ್ಥಳಾಂತರ ಮಾಡಲಾಗಿತ್ತು. ಇದರಿಂದಾಗಿ ದೊಡ್ಡ ಅನಾಹುತ ತಪ್ಪಿದೆ.
ಮನೆ ಗೋಡೆ ಕುಸಿತ
ತೀರ್ಥಹಳ್ಳಿ: ಬಾಂಡ್ಯ-ಕುಕ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಂಡ್ಯ ಗ್ರಾಮದ ಜಾನ್ ಜೋಸೆಫ್ ಎಂಬುವವರ ಮನೆ ಸಂಪೂರ್ಣವಾಗಿ ಮಳೆಗೆ ಕುಸಿದಿದೆ. ಕಂದಾಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಮಂಡಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಗಲಕೊಪ್ಪ ಗ್ರಾಮದ ಸಾವಿತ್ರಮ್ಮ ಎಂಬುವವರ ಮನೆಯ ಗೋಡೆ ಕುಸಿದು ಗೃಹೋಪಯೋಗಿ ವಸ್ತುಗಳು ಜಖಂಗೊಂಡಿವೆ.
ಮೆಕ್ಕೆಜೋಳಕ್ಕೆ ಹಾನಿ
ಶಿಕಾರಿಪುರ: ಇಲ್ಲಿನ ಎಪಿಎಂಸಿಯಲ್ಲಿ ಒಣಗಲು ಹಾಕಿದ್ದ 50 ಕ್ವಿಂಟಾಲ್‌ನಷ್ಟು ಮೆಕ್ಕೆ ಜೋಗಳ ಮಳೆ ಸುರಿ ಹಾನಿಯಾಗಿದೆ. ಕೊರಟಗೆರೆಯಲ್ಲಿಯು ಮೆಕ್ಕಜೋಳ ಹಾನಿಯಾಗಿದೆ. ತಾಲೂಕಿನಲ್ಲಿ ಸುಮಾರು 300 ಕ್ವಿಂಟಾಲ್‌ನಷ್ಟು ಮೆಕ್ಕೆ ಜೋಳ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಬೇಗೂರು ಗ್ರಾಮದ ಕಮಲಮ್ಮ ಎಂಬುವವರ ಮನೆ ಕುಸಿದಿದೆ.
ವಿದ್ಯುತ್ ಲೈನ್ ಮೇಲೆ ಬಿದ್ದ ರೆಂಬೆ
ಆನಂದಪುರ: ಇಲ್ಲಿನ ಆಚಾಪುರದಲ್ಲಿ ಮಾವಿನ ಮರದ ರೆಂಬೆ ತುಂಡಾಗಿ ವಿದ್ಯುತ್ ತಂತಿ ಮೇಲೆ ಬಿದ್ದಿದೆ. ವಿದ್ಯುತ್ ಕಂಬಗಳು ಕೂಡ ಹಾನಿಯಾಗಿವೆ. ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಕಡೆ ವಿದ್ಯುತ್ ಲೈನ್ ಮೇಲೆ ರೆಂಬೆಗಳು ಬಿದ್ದು ಸುತ್ತಮುತ್ತಲ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯವಾಗಿತ್ತು.
ಹಳ್ಳ, ಕೊಳ್ಳ, ಡ್ಯಾಮ್‌ಗಳಿಗೆ ನೀರು
ವಿವಿಧೆಡೆ ಭಾರಿ ಮಳೆಗೆ ಹಳ್ಳ, ಕೊಳ್ಳಗಳು, ಜಲಾಶಯಗಳಲ್ಲಿ ನೀರಿ ಮಟ್ಟ ಏರಿಕೆಯಾಗಿದೆ. ಲಿಂಗನಮಕ್ಕಿ, ಭದ್ರಾ ಜಲಾಶಯಗಳಿಗೆ ಒಳ ಹರಿವು ಏರಿಕೆಯಾಗಿದೆ. ಆನಂದಪುರದಲ್ಲಿ ಹೆದ್ದಾರಿಗೆ ಹೊಂದಿಕೊಂಡಿರುವ ಅಮ್ಮನಕೆರೆ ಭರ್ತಿಯಾಗಿದೆ. ಸೊರಬದಲ್ಲಿ ವರದಾ ನದಿ ತುಂಬಿ ಹರಿಯುತ್ತಿದೆ. ಅಂಜನಾಪುರ ಜಲಾಶಯಕ್ಕೆ 250 ಕ್ಯೂಸೆಕ್ ಒಳ ಹರಿವು ಇತ್ತು. ನೀರಿನ ಮಟ್ಟ 14 ಅಡಿಗೆ ತಲುಪಿದೆ. ಅಂಬ್ಲಿಗೊಳ ಜಲಾಶಯದ ನೀರಿನ ಮಟ್ಟ 16 ಅಡಿಗೆ ತಲುಪಿದೆ. 300 ಕ್ಯೂಸೆಕ್ ಒಳ ಹರಿವು ಇತ್ತು.
ಇದನ್ನೂ ಓದಿ » ಶಿವಮೊಗ್ಗದ ಹವಾಮಾನ ವರದಿ | 17 ಜೂನ್ 2025 | ಜಿಲ್ಲೆಗೆ ಆರೆಂಜ್ ಅಲರ್ಟ್, ಇವತ್ತು ಎಷ್ಟಿದೆ ತಾಪಮಾನ?

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200