ಶಿವಮೊಗ್ಗ ಲೈವ್
ಶಿವಮೊಗ್ಗ: ಜಿಲ್ಲೆಯಲ್ಲಿ ಇವತ್ತು ಮಳೆ ಪ್ರಮಾಣ ಕಡಿಮೆಯಾಗಿದೆ. ಶಿವಮೊಗ್ಗ ತಾಲೂಕು ಹೊರತು ಉಳಿದೆಡೆ ಸಾಧಾರಣ ಮಳೆಯಾಗುತ್ತಿದೆ (Rainfall Report). ಇನ್ನು, ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 13.64 ಮಿ.ಮೀ ಮಳೆಯಾಗಿದೆ. (ಈ ಸುದ್ದಿಯನ್ನು ಇನ್ನು 27 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಇದನ್ನೂ ಓದಿ » ಕೋಟೆಗಂಗೂರು ದೇಗುಲದಲ್ಲಿ ಹುಂಡಿ ಒಡೆದು ಟವೆಲ್ನಲ್ಲಿ ಕಾಣಿಕೆ ಹಣ ಸುತ್ತಿಕೊಂಡು ಹೋದ ಖದೀಮರು
ಜು.15ರ ಬೆಳಗ್ಗೆ 8.30 ರಿಂದ ಜು.16ರ ಬೆಳಗ್ಗೆ 8.30ರವರೆಗೆ ಶಿವಮೊಗ್ಗ ತಾಲೂಕಿನಲ್ಲಿ 4.10 ಮಿ.ಮೀ ಮಳೆಯಾಗಿದೆ. ಭದ್ರಾವತಿಯಲ್ಲಿ 3.90 ಮಿ.ಮೀ, ತೀರ್ಥಹಳ್ಳಿ 22.70 ಮಿ.ಮೀ, ಸಾಗರ 21.60 ಮಿ.ಮೀ, ಶಿಕಾರಿಪುರದಲ್ಲಿ 4.80 ಮಿ.ಮೀ, ಸೊರಬದಲ್ಲಿ 14 ಮಿ.ಮೀ, ಹೊಸನಗರದಲ್ಲಿ 24.40 ಮಿ.ಮೀ ಮಳೆಯಾಗಿದೆ.
