ಶಿವಮೊಗ್ಗ ವಿಮಾನ ನಿಲ್ದಾಣ, ಇಲಾಖೆಯಿಂದ ಮರು ಪರಿಶೀಲನೆ, ಲೋಪ ಕಂಡರೆ ತನಿಖೆ, ಸದನದಲ್ಲಿ ಸಚಿವರ ಹೇಳಿಕೆ

Modern Cement Articles

SHIVAMOGGA LIVE | 12 JULY 2023

BENGALURU : ಶಿವಮೊಗ್ಗ ವಿಮಾನ ನಿಲ್ದಾಣ (Airport) ನಿರ್ಮಾಣದ ವೆಚ್ಚವನ್ನು ಇಲಾಖೆಯಿಂದ ಮರುಪರಿಶೀಲನೆ ನಡೆಸಲಾಗುತ್ತದೆ. ಲೋಪಗಳು ಪತ್ತೆಯಾದಲ್ಲಿ ತನಿಖೆ ನಡೆಸಲಾಗುತ್ತದೆ ಎಂದು ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್‌ ವಿಧಾನ ಪರಿಷತ್‌ನಲ್ಲಿ ತಿಳಿಸಿದರು.

Shimoga-Airport-General-Image

ಕಾಂಗ್ರೆಸ್‌ ಪಕ್ಷದ ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಅವರು ಕೇಳಿದ್ದ ಪ್ರಶ್ನೆಗೆ ಸದನದಲ್ಲಿ ಉತ್ತರಿಸಿದ ಸಚಿವ ಎಂ.ಬಿ.ಪಾಟೀಲ್‌, ಶಿವಮೊಗ್ಗದಲ್ಲಿ ಮೊದಲು ಎಟಿಆರ್‌ 72 ಮಾದರಿ ವಿಮಾನಗಳು ಲ್ಯಾಂಡಿಂಗ್‌ ಆಗಲು ಅನುವಾಗುವಂತೆ ವಿನ್ಯಾಸ (Airport) ರೂಪಿಸಲಾಗಿತ್ತು. ಇದಕ್ಕಾಗಿ 220 ಕೋಟಿ ರೂ. ವೆಚ್ಚ ಅಂದಾಜಿಸಲಾಗಿತ್ತು ಎಂದರು.

ಇದನ್ನೂ ಓದಿ – ಶಿವಮೊಗ್ಗ – ಬೆಂಗಳೂರು ವಿಮಾನ ಹಾರಾಟ, ಟೈಮಿಂಗ್‌ ಏನು? ಏರೋ ಶೋಗೆ ಸಂಸದರು ಮನವಿ ಮಾಡಿದ್ದೇಕೆ?

ಬಳಿಕ ಏರ್‌ಬಸ್‌ ಮಾದರಿ ವಿಮಾನಗಳು ಕೂಡ ಲ್ಯಾಂಡ್‌ ಆಗಲು, ನೈಟ್‌ ಲ್ಯಾಂಡಿಂಗ್‌ ವ್ಯವಸ್ಥೆ ಕಲ್ಪಿಸಲು ವಿನ್ಯಾಸ ಬದಲಾಯಿಸಲಾಯಿತು. ನವೀನ ಮಾದರಿ ಟರ್ಮಿನಲ್‌ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಯಿತು. ಇದರಿಂದ ಯೋಜನಾ ವೆಚ್ಚ 449.22 ಕೋಟಿ ರೂ.ಗೆ ಪರಿಷ್ಕರಿಸಲಾಗಿದೆ. ನಿಯಮಾನುಸಾರವೆ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಯೋಜನಾ ಗಾತ್ರದ ಕುರಿತು ಅನುಮಾನ ವ್ಯಕ್ತಪಡಿಸಿರುವುದರಿಂದ ಇಲಾಖೆಯಿಂದ ವೆಚ್ಚದ ಕುರಿತು ಮರು ಪರಿಶೀಲನೆ ನಡೆಸಲಾಗುತ್ತದೆ. ಲೋಪ ಕಂಡು ಬಂದಲ್ಲಿ ತನಿಖೆ ನಡೆಸಲಾಗುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್‌ ಸ್ಪಷ್ಟಪಡಿಸಿದರು.

Shimoga-Airport-Terminal-Building-Sogane

Leave a Comment