ಇಸ್ರೇಲ್‌ನಲ್ಲಿರುವ ಶಿವಮೊಗ್ಗದ ನಿವಾಸಿಗಳು ಸೇಫ್‌, ಮಾಹಿತಿ ಸಂಗ್ರಹ

SHIVAMOGGA LIVE NEWS | 10 OCTOBER 2023

SHIMOGA : ಪ್ಯಾಲಸ್ತೇನ್‌ ದೇಶದ ದಾಳಿಯಿಂದ ಇಸ್ರೇಲ್‌ನಲ್ಲಿ (Israel) ನೆಲೆಸಿರುವ ಭಾರತೀಯರು ಸಂಕಷ್ಟಕ್ಕೀಡಾಗಿದ್ದಾರೆ. ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿದ್ದು, ಶಿವಮೊಗ್ಗ ಜಿಲ್ಲೆಯವರ ಸಂಖ್ಯೆಯು ಅಧಿಕವಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಇಸ್ರೇಲ್‌ನಲ್ಲಿ ಸಿಲುಕಿರುವ ಜಿಲ್ಲೆಯ ಜನರ ಕುರಿತು ಜಿಲ್ಲಾಡಳಿತವು ಮಾಹಿತಿ ಸಂಗ್ರಹಿಸುತ್ತಿದೆ.

ಶಿವಮೊಗ್ಗ ಜಿಲ್ಲೆಯ ಲಾರೆನ್ಸ್‌ ಡಿಸೋಜಾ ಎಂಬುವವರು ಇಸ್ರೇಲ್‌ ದೇಶದಲ್ಲಿ ನೆಲೆಸಿದ್ದಾರೆ. ಸದ್ಯ ಅವರು ಸುರಕ್ಷಿತವಾಗಿದ್ದಾರೆ. ಕಳೆದ 12 ವರ್ಷದಿಂದ ಇಸ್ರೇಲ್‌ನಲ್ಲಿ ಹಿರಿಯರ ಕೇರ್‌ ಟೇಕಿಂಗ್‌ ಕೆಲಸದಲ್ಲಿ ಲಾರೆನ್ಸ್‌ ಡಿಸೋಜಾ ತೊಡಗಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಶಿವಮೊಗ್ಗದವರ ಕುರಿತು ಮಾಹಿತಿ ಸಂಗ್ರಹ

ಇಸ್ರೇಲ್‌ನಲ್ಲಿರುವ ಶಿವಮೊಗ್ಗ ಜಿಲ್ಲೆಯವರ ಕುರಿತು ಜಿಲ್ಲಾಡಳಿತ ಮಾಹಿತಿ ಸಂಗ್ರಹಿಸುತ್ತಿದೆ ಎಂದು ತಿಳಿದು ಬಂದಿದೆ. ಜಿಲ್ಲೆಯವರ ಸುರಕ್ಷತೆ ಕುರಿತು ಮಾಹಿತಿ ಪಡೆಯುವ ಉದ್ದೇಶದಿಂದ ಜಿಲ್ಲಾಡಳಿತ ಮಾಹಿತಿ ಸಂಗ್ರಹಿಸುತ್ತಿದೆ. ನೂರಕ್ಕೂ ಹೆಚ್ಚು ಮಂದಿ ಇರಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ – ವಿದ್ಯಾನಗರ ಮೇಲ್ಸೇತುವೆ ಕಾಮಗಾರಿ ಕೊನೆ ಹಂತಕ್ಕೆ, ಶಿವಮೊಗ್ಗ – ಚಿತ್ರದುರ್ಗ ರಸ್ತೆಯಲ್ಲಿ ವಾಹನ ಸಂಚಾರದ ಮಾರ್ಗ ಬದಲು

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : October 10, 2023 at 6:40 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಅಕ್ಟೋಬರ್ 10, 2023

Leave a Comment