ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 23 JULY 2023
SHIMOGA : ಇನ್ನು 24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯ ಮೂರು ಸೇರಿ ರಾಜ್ಯದ 31 ತಾಲೂಕುಗಳಲ್ಲಿ ಭಾರಿ ಮಳೆಯಾಗುವ (Heavy Rain) ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ, ಸಾಗರ ಮತ್ತು ತೀರ್ಥಹಳ್ಳಿ ತಾಲೂಕಿನಲ್ಲಿ ಭಾರಿ ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.
ಮತ್ತೊಂದೆಡೆ ಜಿಲ್ಲೆಯಾದ್ಯಂತ ಕಳೆದ 24 ಗಂಟೆಯಲ್ಲಿ ಭಾರಿ ಮಳೆಯಾಗಿದೆ. ಅತಿ ಹಚ್ಚು ಮಳೆ (Heavy Rain) ಕಂಡಿರುವ ಶಿವಮೊಗ್ಗದ ಟಾಪ್ 10 ಸ್ಥಳಗಳ ವಿವರ ಇಲ್ಲಿದೆ.
ತೀರ್ಥಹಳ್ಳಿಯ ಆಗುಂಬೆ – 207.5 ಮಿ.ಮೀ
ಹೊಸನಗರದ ಸೋನಲೆ – 162.5 ಮಿ.ಮೀ
ಹೊಸನಗರದ ತ್ರಿಣಿವೆ – 151 ಮಿ.ಮೀ
ಹೊಸನಗರದ ಸುಳಗೋಡು – 130 ಮಿ.ಮೀ
ತೀರ್ಥಹಳ್ಳಿಯ ಹಾದಿಗಲ್ಲು – 129 ಮಿ.ಮೀ
ಹೊನಸಗರ ಮೇಲಿನ ಬೆಸಿಗೆ – 119 ಮಿ.ಮೀ
ತೀರ್ಥಹಳ್ಳಿಯ ಬಿದರಗೋಡು – 113 ಮಿ.ಮೀ
ಹೊನಸಗರದ ನಗರ – 110.5 ಮಿ.ಮೀ
ತೀರ್ಥಹಳ್ಳಿಯ ಹೊನ್ನೇತಾಳು – 106 ಮಿ.ಮೀ
ಹೊಸನಗರದ ಮುಂಬಾರು – 105.5 ಮಿ.ಮೀ
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಗೆ ಆರೆಂಜ್ ಅಲರ್ಟ್, ತುಂಗಾ ಡ್ಯಾಂ ಎಲ್ಲ ಗೇಟ್ ಓಪನ್, ನಗರದಲ್ಲಿ ನದಿ ನೀರಿನ ಮಟ್ಟ ಏರಿಕೆ
ಆಗಂಬೆಗೆ ರಾಜ್ಯದಲ್ಲೇ ಎರಡನೇ ಸ್ಥಾನ
ಕಳೆದ 24 ಗಂಟೆಯಲ್ಲಿ ಅತಿ ಹೆಚ್ಚು ಮಳೆಯಾದ ಪ್ರದೇಶಗಳ ಪೈಕಿ ತೀರ್ಥಹಳ್ಳಿಯ ಆಗುಂಬೆ ಎರಡನೇ ಸ್ಥಾನದಲ್ಲಿದೆ. ಉತ್ತರ ಕನ್ನಡದ ಸಿದ್ದಾಪುರ ತಾಲೂಕಿನ ನಿಲ್ಕುಂದದಲ್ಲಿ 217 ಮಿ.ಮೀ ಮಳೆಯಾಗಿದೆ. ಆಗುಂಬೆಯಲ್ಲಿ 207.5 ಮಿಮೀ ಮಳೆಯಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422