ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 2 FEBRUARY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಶಿವಮೊಗ್ಗ – ಯಶವಂತಪುರ ರಾತ್ರಿ ರೈಲಿನಲ್ಲಿ ಮಹಿಳಾ ಮೀಸಲು ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಭದ್ರಾವತಿ ಮೂಲದ ಮಹಿಳೆಯೊಬ್ಬರ ಮೃತದೇಹ ತುಮಕೂರು ಸಮೀಪದ ಹಿರೇಹಳ್ಳಿ ಬಳಿ ಪತ್ತೆಯಾಗಿದೆ. ಸುಮಾರು 20 ಕಿ.ಮೀ ದೂರದಲ್ಲಿ ಅವರ ಬ್ಯಾಗ್ ದೊರಕಿದೆ. ಚಿನ್ನಾಭರಣ ದೋಚಿ ಮಹಿಳೆಯ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಪರೀಕ್ಷೆ ಮೇಲ್ವಿಚಾರಣೆಗೆ ಬಂದಿದ್ದರು
ಬೆಂಗಳೂರಿನ ಮಲ್ಲೇಶ್ವರಂನ ಅರಣ್ಯ ಇಲಾಖೆ ವಸತಿ ಸಮುಚ್ಚಯದ ನಿವಾಸಿ, ಅರಣ್ಯ ಇಲಾಖೆಯ ಸ್ಟೆನೋಗ್ರಾಫರ್ ಜಿ.ಅನ್ನಪೂರ್ಣ (50) ಹತ್ಯೆಯಾದವರು. ಅನ್ನಪೂರ್ಣ ಅವರು ಮೂಲತಃ ಭದ್ರಾವತಿ ತಾಲೂಕು ಬಿ.ಆರ್.ಪಿಯವರು. ಶಿವಮೊಗ್ಗದಲ್ಲಿ ಅರಣ್ಯ ಇಲಾಖೆ ಸ್ಟೆನೋಗ್ರಾಫರ್ ನೇಮಕ ಪರೀಕ್ಷೆಯ ಮೇಲ್ವಿಚಾರಣೆಗೆ ಆಗಮಿಸಿದ್ದರು. ಜ.30ರ ರಾತ್ರಿ ಶಿವಮೊಗ್ಗ – ಯಶವಂತಪುರ ರೈಲಿನಲ್ಲಿ ಮಹಿಳಾ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದಾಗ ಘಟನೆ ಸಂಭವಿಸಿದೆ.
ಅದೇ ರೈಲಿನಲ್ಲಿದ್ದರು ಸಹೋದರ
ಅನ್ನಪೂರ್ಣ ಅವರು ಪ್ರಯಾಣಿಸುತ್ತಿದ್ದ ರೈಲಿನಲ್ಲಿ ರಿಸರ್ವೇಷನ್ ಬೋಗಿಯಲ್ಲಿ ಅವರ ಸಹೋದರ ಬ್ರಹ್ಮಾನಂದ ಅವರು ಪ್ರಯಾಣಿಸುತ್ತಿದ್ದರು. ಜನರಲ್ ಬೋಗಿಯಲ್ಲಿದ್ದ ಅನ್ನಪೂರ್ಣ ಅವರು ಸಹೋದರನಿಗೆ ತಿಳಿಸಿ ಮಹಿಳಾ ಮೀಸಲು ಜನರಲ್ ಬೋಗಿಗೆ ಹೋಗಿದ್ದರು ಎಂದು ಹೇಳಲಾಗುತ್ತಿದೆ. ಬೆಳಗ್ಗೆ ರೈಲು ಯಶವಂತಪುರ ತಲುಪಿದಾಗ ಸಹೋದರಿಗೆ ಬ್ರಹ್ಮಾನಂದ ಕರೆ ಮಾಡಿದ್ದರೆ. ಆಗ ಅನ್ನಪೂರ್ಣ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು.
ದರೋಡೆ ಮಾಡಿ ಹತ್ಯೆ ಮಾಡಿರುವ ಶಂಕೆ
ಅನ್ನಪೂರ್ಣ ಅವರ ಮೃತದೇಹದ ಮೇಲೆ ಮಾಂಗಲ್ಯ ಸರ, ಕಿವಿ ಓಲೆ, ಬಳೆ ಪತ್ತೆಯಾಗಿಲ್ಲ. ಆದ್ದರಿಂದ ಮಹಿಳಾ ಬೋಗಿಯಲ್ಲಿದ್ದವರೆ ಅವರ ದರೋಡೆ ಮಾಡಿ, ಹತ್ಯೆ ಮಾಡಿರುವ ಕುರಿತು ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಕಲ್ಲು ತೂರಿ, ಗಾಜು ಪುಡಿಗೈದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ, ಶಿವಮೊಗ್ಗದಲ್ಲಿ ಆಕ್ರೋಶ