ದಸರಾ ಹಬ್ಬದ ಭರ್ಜರಿ ಗಿಫ್ಟ್ ಕೊಟ್ಟ ಶಿವಮೊಗ್ಗ ಹಾಲು ಒಕ್ಕೂಟ, ಹಾಲು ಉತ್ಪಾದಕರು ಮತ್ತಷ್ಟು ಖುಷ್

ಶಿವಮೊಗ್ಗ ಲೈವ್.ಕಾಂ | SHIMOGA | 28 ಸೆಪ್ಟೆಂಬರ್ 2019 (ಈ ಸುದ್ದಿಯನ್ನು ಇನ್ನು 41 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಶಿವಮೊಗ್ಗ ಹಾಲು ಒಕ್ಕೂಟವು ಹಾಲು ಉತ್ಪಾದಕರಿಗೆ ದಸರಾ ಹಬ್ಬದ ಭರ್ಜರಿ ಕೊಡುಗೆ ನೀಡಿದೆ. ಉತ್ಪಾದಕರಿಗೆ ಹಾಲಿನ ದರವನನ್ಉ ಹೆಚ್ಚಳ ಮಾಡಲಾಗಿದೆ.

SHIMUL-Nandini-1.jpg

ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಉತ್ಪಾದಕರ ಹಾಲಿನ ದರವನ್ನು ಲೀಟರ್’ಗೆ 2.50 ರೂ. ಹೆಚ್ಚಳ ಮಾಡಿದೆ. ಕೇವಲ ಒಂದೂವರೆ ತಿಂಗಳ ಅಂತರದಲ್ಲಿ ಹಾಲಿನ ದರವನ್ನು ಲೀಟರ್’ಗೆ 5 ರೂ. ಹೆಚ್ಚಳ ಮಾಡಿದಂತೆ ಆಗಿದೆ.

ಲೀಟರ್ ಹಾಲಿಗೆ ಎಷ್ಟು ಮೊತ್ತ ಸಿಗಲಿದೆ ಗೊತ್ತಾ?

ಹಾಲು ಒಕ್ಕೂಟವು ಆಗಸ್ಟ್ 3ರಂದು ಲೀಟರ್ ಹಾಲಿಗೆ 2.50 ರೂ. ಹೆಚ್ಚಳ ಮಾಡಿತ್ತು. ಈ ಮತ್ತೊಮ್ಮೆ ಹೆಚ್ಚಳ ಮಾಡಿರುವುದರಿಂದ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್’ಗೆ 27 ರೂ. ಸಿಗಲಿದೆ. ಜಿಡ್ಡಿನ ಪ್ರಮಾಣ ಉತ್ತಮವಾಗಿದ್ದಲ್ಲಿ 28.50 ರೂ. ಸಿಗುತ್ತದೆ. ನಿರ್ದೇಶಕರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

Leave a Comment