ಶಿವಮೊಗ್ಗದಲ್ಲಿ ಉಚಿತವಾಗಿ ಹೆಪಟೈಟಿಸ್‌ ಬಿ ತಪಾಸಣೆ ಶಿಬಿರ, ಲಸಿಕೆ ವಿತರಣೆ, ಈಗಲೆ ಹೆಸರು ನೋಂದಣಿಗೆ ಸೂಚನೆ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ:  ವಿಶ್ವ ಹೆಪಟೈಟಿಸ್ ದಿನದ ಅಂಗವಾಗಿ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜುಲೈ 28 ರಿಂದ ಆಗಸ್ಟ್ 2ರವರೆಗೆ ಉಚಿತವಾಗಿ ಹೆಪಟೈಟಿಸ್ ಬಿ (Hepatitis B) ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಆಸಕ್ತರು ಉಚಿತವಾಗಿ ತಮ್ಮ ಹೆಸರು ನೋಂದಣಿ ಮಾಡಿಕೊಂಡು, ವೈದ್ಯರ ಸಲಹೆ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

ಶಿಬಿರದ ಅವಧಿಯಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ವೈದ್ಯರ ಸಲಹೆ ಪಡೆದು, ಉಚಿತವಾಗಿ ಹೆಪಟೈಟಿಸ್‌ ಬಿ ಲಸಿಕೆ ಪಡೆಯಬಹುದಾಗಿದೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಮಳೆ ಕಣ್ಮರೆ, ಬಿಸಿಲು ಪ್ರತ್ಯಕ್ಷ, ಗಾಳಿ ಅಬ್ಬರಕ್ಕೆ ಜನರಲ್ಲಿ ಆತಂಕ, ಎಲ್ಲೆಲ್ಲಿ ಹೇಗಿದೆ ಸ್ಥಿತಿ?

ಜುಲೈ 28ರಂದು ವಿಶ್ವ ಹೆಪಟೈಟಿಸ್‌ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ ಹೆಪಟೈಟಿಸ್ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ಸೂಕ್ತ ಸಂದರ್ಭ ಔಷಧಿ ಹಾಗೂ ಲಸಿಕೆ ಪಡೆಯದೆ ಇದ್ದರೆ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಆಸ್ಪತ್ರೆಯ ಯಕೃತ್‌ ಮತ್ತು ಗ್ಯಾಸ್ಟ್ರೋ ಎಂಟರಾಲಜಿ ವಿಭಾಗದ ವೈದ್ಯರಾದ ಡಾ. ಶಿವಕುಮಾರ್‌ ಮತ್ತು ಡಾ. ಸುಮೇಶ್‌ ತಿಳಿಸಿದ್ದಾರೆ.

Sahyadri-Narayana-Multispeciality-hospital-NH-Hospital.

ಹೆಪಟೈಟಿಸ್ ‘ಬಿ’ ರೋಗ ತಡೆಗೆ ಹೆಪಟೈಟಿಸ್ ‘ಬಿ’ ಲಸಿಕೆ  ಹಾಕಿಸಿಕೊಳ್ಳಬೇಕು. ಇದರಿಂದ ಈ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟಬಹುದಾಗಿದೆ. ಹೆಪಟೈಟಿಸ್ ‘ಸಿ’ ದೃಢಪಟ್ಟಲ್ಲಿ ಅಂತಹ ರೋಗಿಗಳಿಗೆ ಚಿಕಿತ್ಸೆಯು ಲಭ್ಯವಿರುತ್ತದೆ.ವರ್ಗೀಸ್ ಪಿ ಜಾನ್, ವೈವಸ್ಥಾಪಕ ನಿರ್ದೆಶಕ, ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ

ಹೆಸರು ನೋಂದಣಿಗೆ ಮೊಬೈಲ್‌ ನಂಬರ್‌ 9513097400 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

June-2025-Report-Shivamogga-Live-New-New.

Free Hepatitis B screening camp

Sahyadri-Narayana-Multispeciality-hospital-NH-Hospital.

Leave a Comment