ವಿಶ್ವದಲ್ಲೆ ಮೊದಲ ಬಾರಿ, ಶಿವಮೊಗ್ಗದಲ್ಲಿ 1404 ಮಂದಿಯಿಂದ ವಚನ ಗಾಯನ, ಹೇಗಿತ್ತು? ಇಲ್ಲಿದೆ ಫೋಟೊ ಆಲ್ಬಂ

ಶಿವಮೊಗ್ಗ: ಬಸವ ಜಯಂತಿ ಅಂಗವಾಗಿ ಸಾವಿರಕ್ಕು ಹೆಚ್ಚು ಮಂದಿ ವಚನ (Vachana) ಗಾಯನಕ್ಕೆ ಧ್ವನಿಯಾದರು. ಶಿವಮೊಗ್ಗದಲ್ಲಿಯೇ ಮೊದಲ ಬಾರಿಗೆ ಇಂತಹ ಪ್ರಯತ್ನವಾಗಿದ್ದು, ಬೃಹತ್‌ ವೇದಿಕೆ ಕಣ್ಸೆಳೆದರೆ, ಸಾವಿರ ಕಂಠಗಳಿಂದ ಹೊರಹೊಮ್ಮಿದ ವಚನಗಳು ಕಿವಿಗೆ ಮುದ ನೀಡಿದವು.

ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ಬಸವ ಜಯಂತಿ ಆಚರಣಾ ಸಮಿತಿ ವತಿಯಿಂದ ಸಾವಿರದ ವಚನ ಕಾರ್ಯಕ್ರಮ ನಡೆಯಿತು. ಮಹಿಳೆಯರು, ಮಕ್ಕಳು, ವೃದ್ಧರು ಸೇರಿ 1404 ಮಂದಿ ಡಾ. ಸಿ.ಅಶ್ವಥ್‌ ಅವರ ರಾಗ ಸಂಯೋಜನೆಯಂತೆ ವಚನಗಳನ್ನು ಹಾಡಿದರು. ಬಸವ ಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಪ್ರತಿ ವಚನದ ಅರ್ಥ ತಿಳಿಸಿದರು.

SLV-BOOK-SHOP-SHIMOGA

ಇದಕ್ಕು ಮುನ್ನ ಬಸವಣ್ಣನವರ ಪ್ರತಿಮೆಗೆ ವಿವಿಧ ಮಾಠಧೀಶರು, ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಇವತ್ತು ಹಾಡಿದ 38 ವಚನಗಳು, ಅವುಗಳ ಅರ್ಥ ಇರುವ ಕಿರುಹೊತ್ತಿಗೆ ತೋರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಅಲ್ಲದೆ ಪಹಲ್ಗಾಮ್‌ ದಾಳಿಯಲ್ಲಿ ಮೃತರಾದವರಿಗೆ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು.

ಜಿಲ್ಲೆ ಶರಣರ ನಾಡು. ಹಿರೇಜಂಬೂರಿನ ಸತ್ಯಕ್ಕ, ಅಜಗಣ್ಣ, ಪೋಡ ಶಿವಯ್ಯ, ಅಕ್ಕಮಹಾದೇವಿ, ಅಲ್ಲಮಪ್ರಭು ಹುಟ್ಟಿದ ಹಾಗೂ ದೇಶಕ್ಕೆ 40 ಶಿವಶರಣರನ್ನು ಕೊಟ್ಟ ನಾಡು ನಮ್ಮ ಶಿವಮೊಗ್ಗ. ರಾಜ್ಯದ ಇತಿಹಾಸದಲ್ಲೆ ಮೊದಲ ಬಾರಿಗೆ ಐತಿಹಾಸಿಕ ಕಾರ್ಯಕ್ರಮ ಮಾಡಿದ್ದೇವೆ. ಇದು ಭೂಮಂಡಲದಲ್ಲೆ ದೊಡ್ಡ ಕಾರ್ಯಕ್ರಮ.

– ಡಾ. ಧನಂಜಯ ಸರ್ಜಿ, ವಿಧಾನ ಪರಿಷತ್‌ ಸದಸ್ಯ

Savirada vachana Programme at Freedom Park

ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಿಳಕಿ ಮಠದ ಶ್ರೀ ರಾಚೋಟೇಶ್ವರ ಸ್ವಾಮೀಜಿ, ಹಾರನಹಳ್ಳಿ, ಜಡೆ ಮಠ ಸೇರಿದಂತೆ ಮಲೆನಾಡು ಮಠಾಧೀಶರ ಪರಿಷತ್ತಿನ ಸ್ವಾಮೀಜಿಗಳು, ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ. ಫ್ರಾನ್ಸಿಸ್‌ ಸೆರಾವೋ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಬಿ.ಕೆ.ಸಂಗಮೇಶ್ವರ, ಎಸ್‌.ಎನ್.ಚನ್ನಬಸಪ್ಪ, ವಿಧಾನ ಪರಿಷತ್‌ ಸದಸ್ಯ ಡಿ.ಎಸ್.ಅರುಣ್‌, ಮಾಜಿ ಸಚಿವರಾದ ಕೆ.ಎಸ್‌.ಈಶ್ವರಪ್ಪ, ರೇಣುಕಾಚಾರ್ಯ, ಭೋವಿ ಅಭಿವೃದ್ಧಿ ನಿಗಮದ ಅ‍ಧ್ಯಕ್ಷ ರವಿಕುಮಾರ್‌, ಪ್ರಮುಖರಾದ ಹೆಚ್‌.ಆರ್.ಬಸವರಾಜಪ್ಪ, ಆರ್‌.ಪ್ರಸನ್ನಕುಮಾರ್‌, ಸೂಡಾ ಅಧ್ಯಕ್ಷ ಹೆಚ್‌.ಎಸ್‌.ಸುಂದರೇಶ್‌, ಹಾಪ್‌ಕಾಮ್ಸ್‌ ಅಧ್ಯಕ್ಷ ವಿಜಯಕುಮಾರ್‌ ಸೇರಿ ಹಲವರು ಇದ್ದರು.

Savirada vachana Programme at Freedom Park

Savirada vachana Programme at Freedom Park

Savirada vachana Programme at Freedom Park

savirada vachana

JNNCE-ADMISSION-2025-26

Savirada vachana Programme at Freedom Park

Savirada vachana Programme at Freedom Park

The-Team-PU-College-scaled

Savirada vachana Programme at Freedom Park

Savirada vachana Programme at Freedom Park

Savirada vachana Programme at Freedom Park

Savirada vachana Programme at Freedom Park

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

Savirada vachana Programme at Freedom Park

Savirada vachana Programme at Freedom Park

Savirada vachana Programme at Freedom Park

Vachana Gayana in Shimoga City

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ 
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : May 9, 2025 at 9:30 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮೇ 9, 2025

Leave a Comment