ಶಿವಮೊಗ್ಗದ ಕಾಫಿ, ಟೀ ಪ್ರಿಯರಿಗೆ ಹೊಸ ಹಾಟ್‌ಸ್ಪಾಟ್‌ – 1936‌, ಏನಿದು? ಕಾಫಿ ಶಾಪ್‌ ಹೆಸರೇಕೆ ಹೀಗಿದೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ವಾಟ್ಸಪ್‌ ಮಾಡಲು ಕೆಳಗಿರುವ ನಂಬರ್‌ ಮೇಲೆ ಕ್ಲಿಕ್‌ ಮಾಡಿ.

ಶಿವಮೊಗ್ಗ: ಬಿಸಿಬಿಸಿ ಕಾಫಿ ಕಪ್ ಹಿಡಿದು ಮಳೆಯನ್ನು ಸವಿಯುವ ಸುಖವೇ ಬೇರೆ. ಕಾಫಿ ಪ್ರಿಯರ ಈ ಬಯಕೆಯಂತೆ ಶಿವಮೊಗ್ಗ ನಗರದಲ್ಲಿ ರೆಟ್ರೊ ಶೈಲಿಯ ವಿಶಿಷ್ಟ ಕಾಫಿ ಶಾಪ್‌ ‘1936’ ಆರಂಭವಾಗಿದೆ. ಸದ್ಯ ಈ ಕಾಫಿ ಶಾಪ್‌ ಕಾಫಿ, ಟೀ ಪ್ರಿಯರ ಫೇವರೆಟ್‌ ಸ್ಪಾಟ್‌ ಆಗಿದೆ. ➤ ಸುದ್ದಿಯ ಮುಂದಿನ 7 ಪ್ಯಾರಾಗಳು ಕೆಳಗಿವೆ.

ನಗರದ ಜೈಲ್ ಸರ್ಕಲ್‌ನಿಂದ ದುರ್ಗಿಗುಡಿ ಕಡೆಗೆ ಹೋಗುವ ದಾರಿಯಲ್ಲಿ ಸುಮಾರು ನೂರು ಮೀಟರ್ ದೂರದಲ್ಲಿ ಎಡಭಾಗದಲ್ಲಿರುವ ಈ ಕೆಫೆ. ಹತ್ತು ದಿನಗಳ ಹಿಂದಷ್ಟೇ ಆರಂಭವಾಗಿದ್ದರೂ ‘1936 ಕಾಫಿ ಶಾಪ್‌’ಗೆ ಜನ ಮುಗಿಬೀಳುತ್ತಿದ್ದಾರೆ. ಕಾಫಿ ಶಾಪ್‌ನ ವಿನ್ಯಾಸ, ಲೈಟ್ ಮ್ಯೂಸಿಕ್ ಆಂಬಿಯನ್ಸ್ ಗ್ರಾಹಕರಿಗೆ ಹೊಸ ಫೀಲ್‌ ನೀಡುತ್ತದೆ.

1936-Coffee-Shop-in-Shivamogga-Durgigudi

ಐದು ವರ್ಷದ ಕನಸಿನ ಕೂಸು

1936 ಕಾಫಿ ಶಾಪ್‌ನ ಹಿಂದೆ ಲಕ್ಕವಳ್ಳಿಯ ಯುವ ಉದ್ಯಮಿ ಜೇಮ್ಸ್ ಅವರ ಐದು ವರ್ಷಗಳ ಕಠಿಣ ಪರಿಶ್ರಮ ಮತ್ತು ಕನಸಿದೆ. ಶಿವಮೊಗ್ಗದಲ್ಲಿ ವಿಶಿಷ್ಟ ಕಾಫಿ ಶಾಪ್ ತೆರೆಯಬೇಕೆಂಬ ಹಂಬಲದಿಂದ ಬೆಂಗಳೂರು ಸೇರಿದಂತೆ ವಿವಿಧ ಪ್ರಮುಖ ನಗರಗಳಿಗೆ ಭೇಟಿ ನೀಡಿ ರಿಸರ್ಚ್ ನಡೆಸಿದ್ದರಂತೆ ಜೇಮ್ಸ್.

“ವ್ಯಾಪಾರಕ್ಕಾಗಿ ಮಾತ್ರವಲ್ಲದೆ, ಜನರಿಗೆ ಉತ್ತಮ ಅನುಭವ ನೀಡಬೇಕು ಎಂದು ಪ್ರತಿಯೊಂದು ವಸ್ತುವನ್ನು ಪ್ರೀತಿಯಿಂದ ಆಯ್ಕೆ ಮಾಡಿ ಇದನ್ನು ಆರಂಭಿಸಿದ್ದೇನೆ” – ಜೇಮ್ಸ್‌, 1936 ಕಾಫಿ ಶಾಪ್‌ ಮಾಲೀಕ

ಹೆಸರಿನ ಹಿಂದಿದೆ ರೋಚಕ ಇತಿಹಾಸ

ಈ ಕಾಫಿ ಶಾಪ್‌ಗೆ ‘1936’ ಎಂದು ಹೆಸರಿಡಲು ಭಾರತೀಯ ಕಾಫಿ ಇತಿಹಾಸದ ಪುಟಗಳೇ ಕಾರಣ ಅನ್ನುತ್ತಾರೆ ಜೇಮ್ಸ್‌. ಬ್ರಿಟಿಷರ ಆಡಳಿತದಲ್ಲಿ ಭಾರತ ಸರ್ಕಾರದ ವಾಣಿಜ್ಯ ಇಲಾಖೆಯು ಇಂಡಿಯನ್ ಕಾಫಿ ಸೆಸ್ ಆಕ್ಟ್ ಕಮಿಟಿ ಸ್ಥಾಪಿಸಿತು. ಈ ಸಮಿತಿಯ ಮಾರ್ಕೆಟಿಂಗ್ ವಿಭಾಗದ ಕಾರ್ಯದರ್ಶಿಯಾಗಿದ್ದ ತಿರುವಾಂಕೂರಿನ ಎಂ.ಜೆ.ಸೈಮನ್ ಅವೆರ್ಗಳ್, ಭಾರತೀಯರಲ್ಲಿ ಕಾಫಿ ಸಂಸ್ಕೃತಿ ಹೆಚ್ಚಿಸಲು ‘ಕಾಫಿ ಹೌಸ್’ ಸರಣಿ ಪ್ರಾರಂಭಿಸಲು ಯೋಜಿಸಿದರು. ಅದರಂತೆ, 1936ರಲ್ಲಿ ಬಾಂಬೆಯಲ್ಲಿ ಭಾರತದ ಪ್ರಥಮ ‘ಕಾಫಿ ಹೌಸ್’ ಆರಂಭವಾಯಿತು. ಆ ಇತಿಹಾಸ ಸ್ಮರಿಸುತ್ತಾ ಈ ಕೆಫೆಗೆ ‘1936ʼ ಎಂದು ನಾಮಕರಣ ಮಾಡಲಾಗಿದೆ. 1936 ಕಾಫಿ ಶಾಪ್‌ ಹೊರಗೆ ಇತಿಹಾಸದ ಬೋರ್ಡ್‌ ಅಳವಡಿಸಲಾಗಿದೆ.

ಪಿಂಗಾಣಿ ಕಪ್‌ಗಳ ‘ರೆಟ್ರೊ ಫೀಲ್’

ಇಲ್ಲಿ ಕಾಫಿಯನ್ನು ಪ್ಲಾಸ್ಟಿಕ್ ಅಥವಾ ಪೇಪರ್ ಕಪ್‌ಗಳಲ್ಲಿ ನೀಡುವುದಿಲ್ಲ. ಸಾಂಪ್ರದಾಯಿಕ ಪಿಂಗಾಣಿ ಕಪ್ ಮತ್ತು ಸಾಸರ್‌ಗಳಲ್ಲಿ ನೀಡಲಾಗುತ್ತದೆ. ಈ ಪಿಂಗಾಣಿ ಲೋಟಗಳ ಸದ್ದಿನ ನಡುವೆ ಸ್ನೇಹಿತರೊಂದಿಗೆ ಹರಟೆ ಹೊಡೆಯುತ್ತ ಕಾಫಿ ಸವಿಯಲು ಇದು ಶಿವಮೊಗ್ಗದ ಬೆಸ್ಟ್ ಸ್ಪಾಟ್ ಆಗಿ ಮಾರ್ಪಾಡಾಗಿದೆ.

1936 ಕಾಫಿ ಶಾಪ್‌ನಲ್ಲಿ ಏನೇನು ಸಿಗುತ್ತೆ?

ಇಲ್ಲಿನ ಮೆನುವಿನಲ್ಲಿ ರೆಗ್ಯುಲರ್ ಫಿಲ್ಟರ್ ಕಾಫಿ, ಬ್ಲಾಕ್ ಕಾಫಿ, ಬೆಲ್ಲದ ಫಿಲ್ಟರ್ ಕಾಫಿ, ಶುಂಠಿ ಕಾಫಿ ಹಾಗೂ ಜೋನಿ ಬೆಲ್ಲದ ಕಾಫಿ ಲಭ್ಯವಿದೆ. ಟೀ ಪ್ರಿಯರಿಗಾಗಿ ರೆಗ್ಯುಲರ್, ಬೆಲ್ಲದ, ಶುಂಠಿ, ಲೆಮನ್ ಹಾಗೂ ವಿಶೇಷವಾದ ಶುಂಠಿ ನಿಂಬೆ ಚಹಾ ದೊರೆಯಲಿದೆ. ಹಾಲು ಹಾಗೂ ಕೋಲ್ಡ್ ಕಾಫಿ ಇಷ್ಟಪಡುವವರಿಗಾಗಿ ವಿವಿಧ ಫ್ಲೇವರ್‌ಗಳ ಕೋಲ್ಡ್ ಬೆವರೇಜಸ್ ಇವೆ. ಜೊತೆಗೆ ರಸ್ಕ್, ಬಿಸ್ಕತ್‌ಗಳೊಂದಿಗೆ ಇಲ್ಲಿನ ಮತ್ತೊಂದು ಆಕರ್ಷಣೆಯಾದ ಬನ್ ಮಸ್ಕಾ’ ಗ್ರಾಹಕರ ನೆಚ್ಚಿನ ಆಯ್ಕೆಯಾಗಿದೆ.

1936 ಕಾಫಿ ಶಾಪ್‌ ಸದ್ಯ ಶಿವಮೊಗ್ಗದ ಕಾಫಿ ಪ್ರಿಯರಿಗೆ ಫೇವರೆಟ್‌ ಸ್ಪಾಟ್‌ ಆಗಿದೆ. ಉತ್ತಮ ಮತ್ತು ಕ್ವಿಕ್‌ ಸರ್ವಿಸ್‌ನ ಕಾರಣಕ್ಕು ಜನ ಮೆಚ್ಚುಗೆ ಪಡೆದುಕೊಂಡಿದೆ.

ಶಿವಮೊಗ್ಗ ಲೈವ್ ಅಪ್ಡೇಟ್ಸ್

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿರಿ!