ಭದ್ರಾವತಿಯ ವ್ಯಕ್ತಿಗೆ 20 ವರ್ಷ ಜೈಲು, 1.12 ಲಕ್ಷ ರೂ. ದಂಡ

SHIMOGA NEWS, 9 NOVEMBER 2024 : ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ 20 ವರ್ಷ ಜೈಲು (Jail) ಶಿಕ್ಷೆ ಹಾಗೂ 1.12 ಲಕ್ಷ ರೂ. ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಮೋಹನ್‌ ಜೆ.ಎಸ್‌. ಅವರು ಆದೇಶ ನೀಡಿದ್ದಾರೆ.➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ದಂಡ ಕಟ್ಟಲು ವಿಫಲವಾದಲ್ಲಿ 1 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಪರಿಹಾರ ರೂಪವಾಗಿ ದಂಡದ ಮೊತ್ತದಲ್ಲಿ 1 ಲಕ್ಷ ರೂ. ಮತ್ತು ಸರ್ಕಾರದಿಂದ 5 ಲಕ್ಷ ರೂ.ವನ್ನು ನೊಂದ ಬಾಲಕಿಗೆ ನೀಡಲು ನ್ಯಾಯಾಧೀಶರು ಗುರುವಾರ ಆದೇಶಿಸಿದ್ದಾರೆ. 

2023ರಲ್ಲಿ ಭದ್ರಾವತಿ ತಾಲ್ಲೂಕಿನ ಗ್ರಾಮವೊಂದರ 30 ವರ್ಷದ ವ್ಯಕ್ತಿಯು 14 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ನೊಂದ ಬಾಲಕಿ ನೀಡಿದ ದೂರಿನ ಮೇರೆಗೆ ಭದ್ರಾವತಿಯ ನ್ಯೂ ಟೌನ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. 

ಇದನ್ನೂ ಓದಿ » ಶಿವಮೊಗ್ಗದ ಯುವತಿಗೆ ಮುಂಬೈ ಪೊಲೀಸರಿಂದ ಫೋನ್‌, ಆಮೇಲೆ ಕಾದಿತ್ತು ದೊಡ್ಡ ಶಾಕ್‌

ಪ್ರಕರಣದ ತನಿಖಾಧಿಕಾರಿ ಸಿಪಿಐ ಶ್ರೀಶೈಲ್‌ ಕುಮಾರ್‌ ಜೆ. ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಕೀಲ ಶ್ರೀಧರ್‌ ಎಚ್‌.ಆರ್‌. ವಾದ ಮಂಡಿಸಿದ್ದರು.

RED-LINE-

A 30-year-old man gets 20 years jail & fined ₹1.12 lakh for sexually assaulting a 14-year-old girl in Bhadravati, Karnataka. 

Leave a Comment