ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 23 JUNE 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ತೀವ್ರ ಕುತೂಹಲ ಮೂಡಿಸಿರುವ ಕೇಂದ್ರ ಸಹಕಾರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಆಡಳಿತ ಮಂಡಳಿ ಚುನಾವಣೆಗೆ (Election) ಅಖಾಡ ಸಿದ್ಧವಾಗಿದೆ. ನಿರ್ದೇಶಕರ ಚುನಾವಣೆಗೆ 35 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ 7 ಅಭ್ಯರ್ಥಿಗಳು ಶನಿವಾರ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ.
ಯಾರೆಲ್ಲ ನಾಮಪತ್ರ ಹಿಂಪಡೆದಿದ್ದಾರೆ?
ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ 13 ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಯುತ್ತಿದೆ. ವಿವಿಧ ಕ್ಷೇತ್ರದಿಂದ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿದ್ದ 7 ಮಂದಿ ನಾಮಪತ್ರ ಹಿಂಪಡೆದಿದ್ದಾರೆ. ಎಂ.ಶ್ರೀಕಾಂತ್, ಆರ್.ವಿಜಯ ಕುಮಾರ್, ಹೆಚ್.ಮಲ್ಲಿಕ್, ಹೆಚ್.ಎನ್.ವಿಜಯ ಕುಮಾರ್, ಟಿ.ಎಸ್.ದುದ್ದೇಶ್, ಹೆಚ್.ಜಿ.ಮಲ್ಲಯ್ಯ ಮತ್ತು ಆರ್.ಸಿ.ನಾಯ್ಕ್ ನಾಮಪತ್ರ ಹಿಂಪಡೆದಿದ್ದಾರೆ.
ಯಾರೆಲ್ಲ ಯಾವ ಕ್ಷೇತ್ರದಿಂದ ಸ್ಪರ್ಧೆಯಲ್ಲಿದ್ದಾರೆ?
ವಿವಿಧ ಸಹಕಾರ ಸಂಘಗಳಿಂದ ಪ್ರತಿ ತಾಲೂಕಿಗೆ ಒಬ್ಬರು ಪ್ರತಿನಿಧಿಯನ್ನು ಆಯ್ಕೆ ಮಾಡಲಾಗುತ್ತದೆ. ಈ ಕ್ಷೇತ್ರಗಳಿಗೆ ಪ್ರತಿ ತಾಲೂಕಿನಿಂದ ಅಖಾಡದಲ್ಲಿರುವವರ ಹೆಸರು ಇಲ್ಲಿದೆ.
ಕ್ಷೇತ್ರ | ಅಭ್ಯರ್ಥಿಗಳು |
ಶಿವಮೊಗ್ಗ | ಕೆ.ಪಿ.ದುಗ್ಗಪ್ಪಗೌಡ, ಶಿವನಂಜಪ್ಪ |
ಭದ್ರಾವತಿ | ಹೆಚ್.ಎಲ್.ಷಡಾಕ್ಷರಿ, ಸಿ.ಹನುಮಂತು |
ತೀರ್ಥಹಳ್ಳಿ | ಬಸವಾನಿ ವಿಜಯದೇವ್, ಶಿವಕುಮಾರ್ |
ಸಾಗರ | ಗೋಪಾಲಕೃಷ್ಣ ಬೇಳೂರು, ರತ್ನಾಕರ್ ಹೊನಗೋಡು |
ಶಿಕಾರಿಪುರ | ಚಂದ್ರಶೇಖರ ಗೌಡ, ಅಗಡಿ ಅಶೋಕ್ |
ಸೊರಬ | ಕೆ.ಪಿ.ರುದ್ರಗೌಡ, ನೀಲಕಂಠಗೌಡ, ಶಿವಮೂರ್ತಿಗೌಡ |
ಹೊಸನಗರ ತಾಲೂಕಿನಲ್ಲಿ ಅವಿರೋಧ ಆಯ್ಕೆಯಾಗಿದೆ. ನಾಮಪತ್ರ ಪುರಸ್ಕೃತವಾದ ಹಿನ್ನೆಲೆ ಎಂ.ಎಂ.ಪರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳು, ಸಂಸ್ಕರಣ ಸಂಘಗಳ ವತಿಯಿಂದ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಈ ಕ್ಷೇತ್ರದಿಂದ ನಾಲ್ವರು ಸ್ಪರ್ಧೆಯಲ್ಲಿದ್ದಾರೆ.
ಶಿವಮೊಗ್ಗ ಉಪ ವಿಭಾಗ | ಆರ್.ಎಂ.ಮಂಜುನಾಥ ಗೌಡ, ವಿರೂಪಾಕ್ಷಪ್ಪ |
ಸಾಗರ ಉಪ ವಿಭಾಗ | ಜಿ.ಎನ್.ಸುಧೀರ್, ಬಿ.ಡಿ.ಭೂಕಾಂತ್ |
ಪಟ್ಟಣ ಸಹಕಾರ ಸಂಘಗಳು ಮತ್ತು ವ್ಯವಸಾಯೇತರ ಸಹಕಾರ ಸಂಘಗಳ ವತಿಯಿಂದ ಇಬ್ಬರು ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಕ್ಷೇತ್ರದಿಂದ ನಾಲ್ವರು ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.
ಶಿವಮೊಗ್ಗ ಉಪ ವಿಭಾಗ | ಮರಿಯಪ್ಪ, ಎಸ್.ಪಿ.ದಿನೇಶ್ |
ಸಾಗರ ಉಪ ವಿಭಾಗ | ರವೀಂದ್ರ, ಬಸವರಾಜ |
ಇನ್ನಿತರೆ ಸಹಕಾರ ಸಂಘಗಳ ವತಿಯಿಂದ ಇಬ್ಬರು ಸದಸ್ಯರ ಆಯ್ಕೆ ಮಾಡಲಾಗುತ್ತದೆ. ಈ ಕ್ಷೇತ್ರದಿಂದ ಏಳು ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಶಿವಮೊಗ್ಗ ಉಪ ವಿಭಾಗ | ಜಗದೀಶ್ವರ್, ಜೆ.ಪಿ.ಯೋಗೇಶ್, ಹೆಚ್.ಬಿ.ದಿನೇಶ್ ಬುಳ್ಳಾಪುರ, ಡಿ.ಆನಂದ್, ಮಹಾಲಿಂಗಯ್ಯ ಶಾಸ್ತ್ರಿ |
ಸಾಗರ ಉಪ ವಿಭಾಗ | ಟಿ.ಶಿವಶಂಕರಪ್ಪ, ಎನ್.ಡಿ.ಹರೀಶ್ |
ಚುನಾವಣೆಯಲ್ಲಿ ಡಿಸಿಸಿ ಬ್ಯಾಂಕ್‌ನ ಹಾಲಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಸೇರಿದಂತೆ 10 ನಿರ್ದೇಶಕರು, ಶಿವಮೊಗ್ಗ ಹಾಲು ಒಕ್ಕೂಟದ ಹಾಲಿ 6 ನಿರ್ದೇಶಕರು ಕಣದಲ್ಲಿದ್ದಾರೆ. ಜೂನ್ 28ರಂದು ಡಿಸಿಸಿ ಬ್ಯಾಂಕ್‌ನ ಪ್ರಧಾನ ಕಚೇರಿ ಆವರಣದಲ್ಲಿ ಮತದಾನ ನಡೆಯಲಿದೆ.
ಇದನ್ನೂ ಓದಿ – ಪರೀಕ್ಷೆಯ ಹಾಲ್ ಟಿಕೆಟ್ ತೋರಿಸಿದರೆ KSRTC ಬಸ್‌ಗಳಲ್ಲಿ ಉಚಿತ ಪ್ರಯಾಣ