ಶಿವಮೊಗ್ಗದ ಕುಟುಂಬಕ್ಕೆ ₹30 ಲಕ್ಷ ಚೆಕ್‌ ಹಸ್ತಾಂತರಿಸಿದ ಎಸ್‌ಬಿಐ

ಶಿವಮೊಗ್ಗ: ಶಾಂತಲಾ ಸ್ಪೇರೋ ಕಾಸ್ಟ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ತೇಜು.ಟಿ ಅವರ ಕುಟುಂಬಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ₹30 ಲಕ್ಷ ಮೊತ್ತದ ಅಪಘಾತ ವಿಮಾ ಪರಿಹಾರದ ಚೆಕ್ ಹಸ್ತಾಂತರಿಸಲಾಯಿತು. (ಈ ಸುದ್ದಿಯನ್ನು ಇನ್ನು 48 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಶಾಂತಲಾ ಸ್ಪೇರೋ ಕಾಸ್ಟ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಉದ್ಯೋಗಿಯಾಗಿದ್ದ ತೇಜು.ಟಿ ಅವರು ಸ್ನೇಹಿತರ ಮನೆಗೆ ತೆರಳುತ್ತಿದ್ದಾಗ ಬೈಕ್ ಹಂದಿಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿತ್ತು. ತಲೆಗೆ ಗಂಭೀರ ಗಾಯವಾಗಿ ತೇಜು ಅವರು ಮೃತಪಟ್ಟಿದ್ದರು.

30-lakh-cheque-issued-by-SBI-Bank-to-Shivamogga-Family

ಮೃತರ ಬ್ಯಾಂಕ್ ಖಾತೆಯು ಭಾರತೀಯ ಸ್ಟೇಟ್ ಬ್ಯಾಂಕ್‌ನ ವೇತನ ಪ್ಯಾಕೇಜ್ ಅಡಿಯಲ್ಲಿ ಇದ್ದುದರಿಂದ, ಬ್ಯಾಂಕಿನ ವಿಶೇಷ ವಿಮಾ ಯೋಜನೆಯಡಿ ಅವರ ಕುಟುಂಬಕ್ಕೆ ₹30 ಲಕ್ಷ ಅಪಘಾತ ವಿಮಾ ಪರಿಹಾರ ಲಭಿಸಿದೆ. ಎಸ್‌ಬಿಐನ ಪ್ರಾದೇಶಿಕ ವ್ಯವಸ್ಥಾಪಕ ಅರಿಂದಮ್ ಪಾತ್ರ ಅವರು ಮೃತರ ಕುಟುಂಬ ಸದಸ್ಯರಿಗೆ ₹30 ಲಕ್ಷ ಮೊತ್ತದ ವಿಮಾ ಪರಿಹಾರದ ಚೆಕ್ ಹಸ್ತಾಂತರಿಸಿದರು. ಈ ಸಂದರ್ಭ ಶಾಂತಲಾ ಸ್ಪೇರೋ ಕಾಸ್ಟ್ ಪ್ರೈವೇಟ್ ಲಿಮಿಟೆಡ್‌ನ ಆಪರೇಷನ್‌ ವಿಭಾಗದ ಉಪಾಧ್ಯಕ್ಷ ವೀರಶೇಖರಪ್ಪ, ಎಚ್‌ಆರ್ ಮತ್ತು ಅಕೌಂಟ್ಸ್ ಮ್ಯಾನೇಜರ್ ಸತೀಶ್, ಎಸ್‌ಬಿಐ ಅಧಿಕಾರಿಗಳಾದ ಗಿರೀಶ್ ಸಿ. ಸಾಣೆನಹಳ್ಳಿ ಹಾಗೂ ಶಶಿಕುಮಾರ್.ಹೆಚ್.ಆರ್. ಮತ್ತು ಶಾಂತಲಾ ಸ್ಪೇರೋ ಕಾಸ್ಟ್ ಪ್ರೈವೇಟ್ ಲಿಮಿಟೆಡ್‌ನ ಸಿಬ್ಬಂದಿ ಉಪಸ್ಥಿತರಿದ್ದರು.