ಭದ್ರಾವತಿಯ ಶ್ರೇಯಾ ದೇಶಕ್ಕೆ ಮೊದಲ ರ‍್ಯಾಂಕ್, VISL ಉದ್ಯೋಗಿಯ ಮಗಳ ಸಾಧನೆ

ಶಿವಮೊಗ್ಗ: ಭದ್ರಾವತಿ ತಾಲ್ಲೂಕಿನ ತಿಮ್ಮಾಪುರ ಗ್ರಾಮದ ಶ್ರೇಯಾ ಎನ್‌.ಗೌಡ ಯುಪಿಎಸ್‌ಸಿ ಎನ್‌ಡಿಎ (ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ) ಪರೀಕ್ಷೆಯಲ್ಲಿ ಮಹಿಳಾ ವಿಭಾಗದಲ್ಲಿ ದೇಶಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದಾರೆ. (ಈ ಸುದ್ದಿಯನ್ನು ಇನ್ನು 33 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

1ರಿಂದ 10ನೇ ತರಗತಿವರೆಗೆ ಭದ್ರಾವತಿಯ ಬಿಜಿಎಸ್‌ ಕಾರೇಹಳ್ಳಿ ಓದಿದ್ದ ಶ್ರೇಯಾ ಅವರು, ಬೆಂಗಳೂರಿನ ರಾಜಾಜಿನಗರದ ಬೇಸ್‌ ಪಿಯು ಕಾಲೇಜಿನಲ್ಲಿ ಪಿಯು ಓದಿದ್ದಾರೆ. ಪ್ರಸ್ತುತ ಮಂಗಳೂರಿನ ಸುರತ್ಕಲ್‌ ಕಾಲೇಜಿನಲ್ಲಿ ಇಂಜಿನಿಯರಿಂಗ್‌ ಓದುತ್ತಿದ್ದಾರೆ.

Bhadravathi-Shreya-Gowda-secures-first-rank-in-NDA-Exam

ಬಾಲ್ಯದಿಂದಲೂ ಶ್ರೇಯಾ ಸೈನಿಕಳಾಗುವ ಕನಸು ಹೊತ್ತಿದ್ದರು. ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯಲ್ಲಿ ಮಹಿಳೆಯರಿಗೂ ಅವಕಾಶ ಕೊಟ್ಟಿದ್ದು ಅವರ ಆಸೆಗೆ ನೀರೆಯಿತು. ಅಲ್ಲಿಂದಲೇ ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ ಕನಸು ಹೊತ್ತಿದ್ದ ಶ್ರೇಯಾ ಮೊದಲ ಅವಕಾಶದಲ್ಲೇ ದೇಶಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದಾರೆ. ತಂದೆ ನಾಗೇಂದ್ರ.ಜೆ ಅವರು ವಿಐಎಸ್‌ಎಲ್‌ ಕಾರ್ಖಾನೆ ನೌಕರರಾಗಿದ್ದು, ತಾಯಿ ಡಾ.ಆಶಾ.ಬಿ.ಎಂ ಅವರು ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ.