ಶಿವಮೊಗ್ಗ ವಿನೋಬನಗರದಲ್ಲಿ 6 ತಿಂಗಳ ತರೆಬೇತಿ, ಏನಿದು? ಯಾರೆಲ್ಲ ಅರ್ಹರು?

ಶಿವಮೊಗ್ಗ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಶಿವಮೊಗ್ಗದ 2ನೇ ಹಂತದ ವಿನೋಬ ನಗರದಲ್ಲಿರುವ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ– ಆಪರೇಟಿವ್ ಮ್ಯಾನೇಜ್‌ಮೆಂಟ್ (ಕೆ.ಐ.ಸಿ.ಎಮ್) ಸಂಸ್ಥೆಯ ವತಿಯಿಂದ 6 ತಿಂಗಳ ಅವಧಿಯ ‘ಡಿಪ್ಲೊಮಾ ಇನ್ ಕೋ-ಆಪರೇಟಿವ್ ಆಡಿಟ್’ ತರಬೇತಿಯು ನ. 14ರಿಂದ ಪ್ರಾರಂಭವಾಗಲಿದೆ. (ಈ ಸುದ್ದಿಯನ್ನು ಇನ್ನು 50 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಈ ಕೋರ್ಸ್‌ಗೆ ಬಿ.ಕಾಂ, ಬಿ.ಬಿ.ಎಂ ಅಥವಾ ಲೆಕ್ಕಶಾಸ್ತ್ರವನ್ನು ಐಚ್ಛಿಕ ವಿಷಯವನ್ನಾಗಿ ಒಳಗೊಂಡ ಇತರ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಸಾಮಾನ್ಯ ಅಭ್ಯರ್ಥಿಗಳಿಗೆ ಪ್ರವೇಶ ಶುಲ್ಕ ₹9,500 ಇದ್ದು, ಬಿಪಿಎಲ್  ಹಾಗೂ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರಲಿದೆ.

SHIMOGA-NEWS-GRAPHICS-BY-SHIVAMOGGA-LIVE

ತರಬೇತಿಯಲ್ಲಿ ಏನೆಲ್ಲ ತಿಳಿಸಲಾಗುತ್ತೆ?

ಈ ತರಬೇತಿಯಲ್ಲಿ ಸಹಕಾರ ಕ್ಷೇತ್ರ ಮತ್ತು ಲೆಕ್ಕ ಪತ್ರ ನಿರ್ವಹಣೆಯ ಜ್ಞಾನ, ಲೆಕ್ಕ ಪರಿಶೋಧನೆ, ಟ್ಯಾಲಿ ಹಾಗೂ ಡಿಜಿಟಲ್ ಅಕೌಂಟಿಂಗ್ ಕೌಶಲಗಳನ್ನು ಕಲಿಸಲಾಗುತ್ತದೆ. ಇದು ಸಹಕಾರ ಸಂಘ, ಸಂಸ್ಥೆಗಳಲ್ಲಿ ಹಾಗೂ ಖಾಸಗಿ ರಂಗದಲ್ಲಿ ಉದ್ಯೋಗ ಮತ್ತು ಸ್ವಯಂ ಉದ್ಯೋಗ ಕಂಡುಕೊಳ್ಳಲು ಸಹಕಾರಿಯಾಗಿದೆ.

ಅರ್ಜಿ ಸಲ್ಲಿಸಲು ನ. 13 ಕೊನೆಯ ದಿನಾಂಕ. ಆನ್‌ಲೈನ್ ಮೂಲಕ https://dca.kscfl.in ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 94490 75746  ಅಥವಾ 70262 46493 ಅನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಾಂಶುಪಾಲರು ತಿಳಿಸಿದ್ದಾರೆ.