ಶಿವಮೊಗ್ಗದಲ್ಲಿ ಜನತಾ ದರ್ಶನಕ್ಕೆ ಭರ್ಜರಿ ರೆಸ್ಪಾನ್ಸ್‌, ಎಷ್ಟು ಅರ್ಜಿ ಸಲ್ಲಿಕೆಯಾಯ್ತು? ಇಲ್ಲಿದೆ 6 ಪ್ರಮುಖಾಂಶ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 26 SEPTEMBER 2023

SHIMOGA : ಸರ್ಕಾರದ ಮೊದಲ ಜನತಾ ದರ್ಶನಕ್ಕೆ (Janata Darshana) ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯ ಜನರು ಅಹವಾಲು ಸಲ್ಲಿಸಿದ್ದಾರೆ. ಸಚಿವರೊಂದಿಗೆ ಖುದ್ದು ಮಾತನಾಡಿ ಸಮಸ್ಯೆ ಪರಿಹರಿಸುವಂತೆ ಜನರು ಮನವಿ ಮಾಡಿದರು. ಮೊದಲ ಜನತಾ ದರ್ಶನದ ಪ್ರಮುಖ ಆರು ಫಟಾಫಟ್‌ ಅಪ್‌ಡೇಟ್‌ ಇಲ್ಲಿದೆ.

janata darshana in Shimoga - Madhu Bangarappa

ವೇದಿಕೆಯಿಂದ ಕೆಳಗಿಳಿದು ಅಹವಾಲು ಸ್ವೀಕಾರ

FATAFAT-NEWS-1ಜನತಾ ದರ್ಶನದಲ್ಲಿ (Janata Darshana) ಅಹವಾಲು ಸಲ್ಲಿಸಲು ವಿಶೇಷ ಚೇತನರು ಆಗಮಿಸಿದ್ದರು. ಇದನ್ನು ಗಮನಿಸಿದ ಸಚಿವ ಮಧು ಬಂಗಾರಪ್ಪ ವಿಶೇಷ ಚೇತನರು ವೇದಿಕೆ ಹತ್ತುವುದು ಕಷ್ಟವಾಗಲಿದೆ. ನಾನೇ ಅಲ್ಲಿಗೆ ಬರುತ್ತೇನೆ ಎಂದು ಕೆಳಗಿಳಿದು ಬಂದು ಸಮಸ್ಯೆ ಆಲಿಸಿದರು. ಇನ್ನು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಇದನ್ನು ಗಮನಿಸಿ ಮಹಿಳೆಯರಿಗೆ ಮೊದಲ ಆದ್ಯತೆ ಎಂದು ತಿಳಿಸಿದರು. ಅರ್ಜಿ ಹಿಡಿದು ಬರುವ ಮಹಿಳೆಯರನ್ನು ಮೊದಲು ಮುಂದೆ ಬಿಡಿ ಎಂದು ಪೊಲೀಸರಿಗೆ ಸೂಚಿಸಿದರು. ಅದರಂತೆ ಮಹಿಳೆಯರ ಮನವಿಗಳನ್ನು ಮೊದಲು ಪಡೆಯಲಾಯಿತು.

janata darshana in Shimoga - Madhu Bangarappa

ಸ್ಥಳದಲ್ಲೇ ಪರಿಹಾರದ ಭರವಸೆ

FATAFAT-NEWS-2ಬೀದಿ ಬದಿ ವ್ಯಾಪಾರ ಮಾಡುವ ಮಹಿಳೆಯೊಬ್ಬರು ಪಿಎಂ ಸ್ವನಿಧಿ ಯೋಜನೆ ಅಡಿ ತಮಗೆ ಸಾಲ ಸೌಲಭ್ಯ ದೊರೆಯುತ್ತಿಲ್ಲ ಎಂದು ಅಳಲು ತೋಡಿಕೊಂಡರು. ತಕ್ಷಣ ಸಾಲದ ವ್ಯವಸ್ಥೆ ಮಾಡುವಂತೆ ಸಚಿವ ಮಧು ಬಂಗಾರಪ್ಪ ಜಿಲ್ಲಾಧಿಕಾರಿಗೆ ಸೂಚಿಸಿದರು. ಕಸ್ತೂರ ಬಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರು ಕೋಟೆ ಗಂಗೂರಿನಿಂದ ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು. ಇನ್ನು, ಶಾಲೆ, ಕಾಲೇಜು ಹೊತ್ತಿಗೆ ತಕ್ಕ ಹಾಗೆ ತಮ್ಮೂರಿನಿಂದ ಬಸ್‌ ವ್ಯವಸ್ಥೆ ಕಲ್ಪಿಸುವಂತೆ ಹಾಯ್‌ಹೊಳೆಯ ಕೆಲವು ವಿದ್ಯಾರ್ಥಿನಿಯರು ಮನವಿ ಮಾಡಿದರು. ಕೆಎಸ್‌ಆರ್‌ಟಿಸಿ ಜಿಲ್ಲಾ ಅಧಿಕಾರಿ ವಿಜಯ್‌ ಕುಮಾರ್‌ ಅವರಿಗೆ ಸಮಸ್ಯೆ ತಕ್ಷಣ ಪರಿಹರಿಸುವಂತೆ ಸಚಿವರು ತಿಳಿಸಿದರು.

janata darshana in Shimoga - Madhu Bangarappa

ಗೃಹಲಕ್ಷ್ಮಿ ಹಣ ಬರುತ್ತಿಲ್ಲ

FATAFAT-NEWS-3ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ  ಯೋಜನೆ ಕುರಿತು ಹಲವು ಮಹಿಳೆಯರು ಅಹವಾಲು ಸಲ್ಲಿಸಿದರು. ತಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗಿಲ್ಲ ಎಂದು ಆರೋಪಿಸಿದರು. ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಕೂಡಲೆ ಮಹಿಳೆಯರ ಸಮಸ್ಯ ಪರಿಹರಿಸುವಂತೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರಿಗೆ ಸೂಚಿಸಿದರು. ‘ಬ್ಯಾಂಕ್‌ ಖಾತೆ ಮತ್ತು ಪಡಿತರ ಚೀಟಿಗೆ ಆಧಾರ್‌ ಲಿಂಕ್‌ ಆಗದೆ ಇದ್ದರೆ ಪ್ರಯೋಜನ ಸಿಗುವುದಿಲ್ಲʼ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಅಲ್ಲದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಅರ್ಜಿಗಳನ್ನು ವರ್ಗಾಯಿಸಲಾಗುತ್ತದೆ ಎಂದು ತಿಳಿಸಿದರು.

janata darshana in Shimoga - Madhu Bangarappa

ಭೂ ವಿವಾದದ ಸಾಲು ಸಾಲು ಅರ್ಜಿ

Fatafat 3ಜಿಲ್ಲೆಯಲ್ಲಿ ಶರಾವತಿ ಸಂತ್ರಸ್ತರು, ಬಗರ್‌ ಹುಕುಂ ಸಮಸ್ಯೆ ಹೆಚ್ಚಿದೆ. ಜಮೀನು ಮಂಜೂರು ಮಾಡಿ ಕೊಡುವಂತೆ ಹಲವು ರೈತರು ಮನವಿ ಸಲ್ಲಿಸಿದರು. ಈ ಸಂಬಂಧ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಂತದಲ್ಲಿ ಕಾನೂನುಗಳು ಬದಲಾಗಬೇಕಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗುತ್ತದೆ. ಸರ್ಕಾರದ ಹಂತದಲ್ಲಿ ಕಾನೂನು ಬದಲಾವಣೆ ಆಗಬೇಕಿದೆ ಎಂದು ಮಧು ಬಂಗಾರಪ್ಪ ತಿಳಿಸಿದರು. ಉಳಿದಂತೆ ಮೂಲ ಸೌಕರ್ಯ, ಆರೋಗ್ಯ ಸಮಸ್ಯೆಗೆ ನೆರವು ಸೇರಿದಂತೆ ವಿವಿಧ ಕಾರಣಕ್ಕೆ ಜನರು ಮನವಿ ಸಲ್ಲಿಸಿದರು.

janata darshana in Shimoga - Madhu Bangarappa

316 ಅರ್ಜಿ ಸಲ್ಲಿಕೆ

Fatafat5ಖಾಸಗಿ ಬಸ್‌ ನಿಲ್ದಾಣದಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಗುತ್ತಿಗೆ ಪಡೆದ ಸಂಸ್ಥೆ ವೇತನ ಮತ್ತು ಸವಲತ್ತು ನೀಡುತ್ತಿಲ್ಲ. ಕರ್ನಾಟಕ ನೀರಾವರಿ ನಿಗಮದ ವಿವಿಧ ಹುದ್ದೆಗಳ ಭರ್ತಿಗೆ ಕೆಪಿಎಸ್‌ಸಿ ಮೂಲಕ ಪರೀಕ್ಷೆ ನಡೆಸಲಾಗಿದೆ. ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಹೀಗೆ, ನಾನಾ ಸಮಸ್ಯೆಗಳ ಪರಿಹಾರಕ್ಕೆ ಮನವಿ ಸಲ್ಲಿಸಲಾಯಿತು. ಒಟ್ಟು 316 ಅರ್ಜಿಗಳು ಸಲ್ಲಿಕೆಯಾಗಿದೆ. ಜನತಾ ದರ್ಶನದಲ್ಲಿ ಅರ್ಜಿ ಸಲ್ಲಿಸಲು ನೂಕು ನುಗ್ಗಲು ಉಂಟಾಯಿತು.

janata darshana in Shimoga - Madhu Bangarappa

ಅರ್ಜಿ ಕೊಟ್ಟ ತಕ್ಷಣ ಮೊಬೈಲ್‌ಗೆ ಎಸ್‌ಎಂಎಸ್‌

Fatafat6ಜನತಾ ದರ್ಶನದಲ್ಲಿ ಸಚಿವರಿಗೆ ಅರ್ಜಿ ಸಲ್ಲಿಸಿದ ಬಳಿಕ ಆಯಾ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಅವುಗಳ ವಿವರವನ್ನು ಕಂಪ್ಯೂಟರ್‌ನಲ್ಲಿ ನಮೂದು ಮಾಡುತ್ತಿದ್ದರು. ಅರ್ಜಿಯ ಮಾಹಿತಿಯ ಎಸ್‌ಎಂಎಸ್‌ ಜನರ ಮೊಬೈಲ್‌ಗೆ ತಲುಪುವಂತೆ ಮಾಡಲಾಗಿತ್ತು. ಇದರ ಆಧಾರದಲ್ಲಿ ಅರ್ಜಿ ಯಾವ ಹಂತದಲ್ಲಿದೆ, ವಿಲೇವಾರಿಯಾಗಿದೆಯ ಎಂಬ ಮಾಹಿತಿ ಸಾರ್ವಜನಿಕರಿಗೆ ದೊರೆಯಲು ಅನುಕೂಲವಾಗಲಿದೆ.

ಇದನ್ನೂ ಓದಿ – ಜನತಾ ದರ್ಶನ, ಸಿಎಂಗೆ ಹೊಸ ಪ್ರಸ್ತಾವನೆ ಸಲ್ಲಿಸಲು ಮುಂದಾದ ಸಚಿವ ಮಧು ಬಂಗಾರಪ್ಪ, ಏನದು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment