ಶಿವಮೊಗ್ಗ ದಸರಾದಲ್ಲಿ 68 ಕಾರ್ಯಕ್ರಮ, ಏನೆಲ್ಲ ನಡೆಯುತ್ತೆ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIMOGA NEWS, 2 OCTOBER 2024 : ಈ ಬಾರಿಯು ಶಿವಮೊಗ್ಗ ದಸರಾ (Dasara) ಮಹೋತ್ಸವವನ್ನು ಅದ್ಧೂರಿಯಾಗಿ ನೆರೆವೇರಲಿದೆ. 68 ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಪ್ರಸಿದ್ಧ ನಟ, ನಟಿಯರು ಸೇರಿ ಸುಮಾರು 5 ಸಾವಿರ ಕಲಾವಿದರು ಈ ಬಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಎಸ್‌.ಎನ್‌.ಚನ್ನಬಸಪ್ಪ, 2.35 ಕೋಟಿ ರೂ. ವೆಚ್ಚದಲ್ಲಿ ಈ ಬಾರಿ ದಸರಾ ಆಚರಣೆ ಮಾಡಲಾಗುತ್ತಿದೆ. ಆಯವ್ಯಯದಲ್ಲಿ 1.5 ಕೋಟಿ ರೂ. ಮೀಸಲಿಡಲಾಗಿದೆ ಎಂದು ತಿಳಿಸಿದರು.

ಯಾವೆಲ್ಲ ಕಾರ್ಯಕ್ರಮ ನಡೆಯಲಿದೆ?

» ಅ.3ರಂದು ಕುವೆಂಪು ರಂಗಮಂದಿರದಲ್ಲಿ ಸಾಂಸ್ಕೃತಿಕ ದಸರಾವನ್ನು ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರರಾಜ್‌ ಉದ್ಘಾಟಿಸಲಿದ್ದಾರೆ. ಕವಿಗೋಷ್ಠಿ, ನೃತ್ಯ ವೈಭವ, ಸುಗಮ ಸಂಗೀತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 5.30ಕ್ಕೆ ಯಕ್ಷ ದಸರಾ ನಡೆಯಲಿದೆ.

» ಅ.4ರಂದು ಕುವೆಂಪು ರಂಗಮಂದಿರದಲ್ಲಿ ಮಹಿಳಾ ದಸರಾ ನಡೆಯಲಿದೆ. ಭೀಮಾ ಸಿನಿಮಾದ ನಟಿ ಪ್ರಿಯಾ ಶಠಮರ್ಷಣ್‌ ಉದ್ಘಾಟನೆ ಮಾಡಲಿದ್ದಾರೆ. ಡಾ. ಅಂಬೇಡ್ಕರ್‌ ಭವನದಲ್ಲಿ ಬೆಳಗ್ಗೆ 9.30ಕ್ಕೆ ಚಲನ ಚಿತ್ರೋತ್ಸವವನ್ನು ನಟಿ, ಮಾಜಿ ಸಚಿವ ಉಮಾಶ್ರೀ ಉದ್ಘಾಟಿಸಲಿದ್ದಾರೆ. ಅ.4ರಂದು ಸಂಜೆ 4.30ಕ್ಕೆ ಪತ್ರಕರ್ತರ ದಸರಾಗೆ ಕುವೆಂಪು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರ ಡಾ ಎಂ.ಆರ್.ಸತ್ಯ ಪ್ರಕಾಶ್‌ ಉದ್ಘಾಟನೆ ಮಾಡಲಿದ್ದಾರೆ.

» ಅ.6ರಂದು ಬೆಳಗ್ಗೆ 6 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಯೋಗ ದಸರಾವನ್ನು ಹಿರಿಯ ವೈದ್ಯ ಡಾ. ಎನ್‌.ಎಲ್‌.ನಾಯಕ್‌ ಉದ್ಘಾಟಿಸಲಿದ್ದಾರೆ. ಡಾ. ಅಂಬೇಡ್ಕರ್‌ ಭವನದಲ್ಲಿ ಬೆಳಗ್ಗೆ 10 ಗಂಟೆಗೆ ಚಲನಚಿತ್ರ ರಸಗ್ರಹಣ ಕಾರ್ಯಾಗಾರ ನಡೆಯಲಿದೆ. ಸಂಜೆ 5.30ಕ್ಕೆ ಕುವೆಂಪು ರಂಗಮಂದಿರದಲ್ಲಿ ರಂಗ ದಸರಾಕ್ಕೆ ರಂಗ ನಿರ್ದೇಶಕ ಮಂಜು ಕೊಡಗು ಉದ್ಘಾಟಿಸಲಿದ್ದಾರೆ.

021024 shimoga dasara news general image

» ಅ.6ರಂದು ಸಂಜೆ 6 ಗಂಟೆಗೆ ಡಾ. ಅಂಬೇಡ್ಕರ್‌ ಭವನದಲ್ಲಿ ಯುವ ದಸರಾದಲ್ಲಿ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಗೆ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 9 ಗಂಟೆಗೆ ಕಮಲಾ ನೆಹರೂ ಕಾಲೇಜಿನಲ್ಲಿ ಗಮಕ ದಸರಾ ನಡೆಯಲಿದೆ.

» ಅ.8ರಂದು ಬೆಳಗ್ಗೆ 11 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಪೌರ ಕಾರ್ಮಿಕ ದಸರಾ ನಡೆಯಲಿದೆ. ಮಹಾನಗರ ಪಾಲಿಕೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎ.ಅಮೃತ್‌ ರಾಜ್‌ ಉದ್ಘಾಟಿಸಲಿದ್ದಾರೆ.

MLA Channabasappa and Commissioner Kavitha Yogappanavar

ಇನ್ನು, ಕಲಾ ದಸರಾ, ಆಹಾರ ದಸರಾ, ಜ್ಞಾನ ದಸರಾ ಸೇರಿ ಒಟ್ಟು 68 ಈವೆಂಟ್‌ಗಳು ಈ ಬಾರಿ ದಸರಾದಲ್ಲಿ ಮಹೋತ್ಸವದಲ್ಲಿ ಇರಲಿದೆ.

ವಿಧಾನ ಪರಿಷತ್‌ ಸದಸ್ಯ ಡಿ.ಎಸ್.ಅರುಣ್‌, ಪಾಲಿಕೆ ಕಮಿಷನರ್‌ ಡಾ. ಕವಿತಾ ಯೋಗಪ್ಪನವರ್‌ ಸೇರಿ ಸುದ್ದಿಗೋಷ್ಠಿಯಲ್ಲಿದ್ದಾರೆ.

ಇದನ್ನೂ ಓದಿ » ನಾಳೆಯಿಂದ ಶಿವಮೊಗ್ಗ ದಸರಾ, ಉದ್ಘಾಟನೆಗೆ ಬರ್ತಿದ್ದಾರೆ ಖ್ಯಾತ ಸಿನಿಮಾ ನಿರ್ದೇಶಕ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment