ಶಿವಮೊಗ್ಗದಲ್ಲಿ 7 ಚಕ್ರದ ಆಟೋ, ಒಳಗೆ ಎಲ್ಲವೂ ಹೈಟೆಕ್, ಹೇಗಿದೆ? ಏನೇನೆಲ್ಲ ಇದೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SHIMOGA | ಇದು ಶಿವಮೊಗ್ಗದ ಹೈಟೆಕ್ ಆಟೋ (Hi tech Auto). ಇದಕ್ಕೆ ಏಳು ಚಕ್ರವಿದೆ. ಒಳಗೆ ಏರಿದರೆ ಐಷಾರಾಮಿ ಕಾರಿನಲ್ಲಿ ಕುಳಿತಷ್ಟೆ ಹಿತ. ಆದರೆ ಈ ವಿಶೇಷ ಆಟೋ ರಸ್ತೆಗಿಳಿಯುವುದು ಕೆಲವೆ ಕೆಲವು ಸಂದರ್ಭದಲ್ಲಿ ಮಾತ್ರ.

Shimoga Nanjappa Hospital

ಇದು ಟಿಪ್ಪು ನಗರದ 7ನೇ ಅಡ್ಡರಸ್ತೆಯಲ್ಲಿ ಬಾಬಾ ಕಿಂಗ್ ಎಂದು ಕರೆಯಿಸಿಕೊಳ್ಳುವ ಸಯ್ಯದ್ ಅಶ್ರಫ್ ಎಂಬುವವರಿಗೆ ಸೇರಿದ ಆಟೋ. ಲಕ್ಷ ಲಕ್ಷ ರುಪಾಯಿ ಖರ್ಚು ಮಾಡಿ, ಈ ಆಟೋಗೆ ಹೈಟೆಕ್ ಸ್ಪರ್ಶ ನೀಡಿದ್ದಾರೆ. ನಗರದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಏಳು ಚಕ್ರದ ಈ ಆಟೋ ಎಲ್ಲರ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಥಟ್ ಅಂತಾ ಕಣ್ಸೆಳೆಯುತ್ತೆ (Hi tech Auto)

ಸಯ್ಯದ್ ಆಶ್ರಫ್ ಅವರ ಈ ಹೈಟೆಕ್ ಆಟೋ ರಸ್ತೆಗಿಳಿದರೆ ಥಟ್ ಅಂತಾ ಎಲ್ಲರ ಗಮನ ಸೆಳೆಯುತ್ತದೆ. ಆಟೋದ ಹಿಂಬದಿ, ಪ್ರತಿ ಕಡೆಯು ತಲಾ ಮೂರು ಚಕ್ರಗಳನ್ನು ಅಳವಡಿಸಲಾಗಿದೆ. ವಿಭಿನ್ನವಾದ ಮಡ್ ಗಾರ್ಡ್ ಕೂಡ ಹಾಕಿಸಿದ್ದಾರೆ. ಉಳಿದ ಆಟೋಗಳ ಹಾಗೆ ಹಳದಿ ಅಥವಾ ಕಪ್ಪು ಟಾಪ್ ಬದಲು, ಹುಲಿ ಚರ್ಮದ ಮಾದರಿ ಹೋಲುವ ಟಾಪ್ ಹಾಕಿಸಿದ್ದಾರೆ.

ಆಟೋದಲ್ಲಿ ಎಲ್ಲವು ಸ್ಟೀಲ್ (Hi tech Auto)

ಹೈಟೆಕ್ ಆಟೋದಲ್ಲಿ ಎಲ್ಲವು ಫಳಫಳ ಹೊಳೆಯುತ್ತವೆ. ಹಿಂಬದಿ ಇಂಜಿನ್ ಗೆ ಸ್ಟೀಲ್ ಕೋಟ್ ಮಾಡಿಸಿದ್ದಾರೆ. ಅದರ ಬಾಗಿಲಿಗೆ ಗಾಜು, ಸುತ್ತಲು ಸ್ಟೀಲ್ ಹಾಕಿಸಲಾಗಿದೆ. ಇನ್ನು, ಒಳ ಭಾಗದಲ್ಲಿ ಚಾಲಕನ ಸೀಟಿನ ಹಿಂಬದಿ ಸ್ಟೀಲ್ ಬಳಸಿ ತಾಜ್ ಮಹಲ್ ಮಾದರಿಯನ್ನು ಅಳವಡಿಸಲಾಗಿದೆ. ಆಟೋದ ಹ್ಯಾಂಡಲ್, ಬ್ರೇಕ್ ಲಿವರ್ ಎಲ್ಲವು ಸ್ಟೀಲ್ ನಿಂದಲೇ ಮಾಡಿಸಲಾಗಿದೆ. ಒಳ ಭಾಗದಲ್ಲಿ ಮ್ಯೂಸಿಕ್ ಸಿಸ್ಟಮ್, ಅದ್ಧೂರಿ ಅನಿಸುವ ಇಂಟೀರಿಯರ್ ಲೈಟಿಂಗ್ ಗಳನ್ನು ಹಾಕಿಸಿದ್ದಾರೆ ಸಯ್ಯದ್ ಅಶ್ರಫ್.

ಒಂದೆರಡು ಸರ್ತಿ ಮಾತ್ರ ಹೊರಬರುತ್ತೆ

ಆಟೋ ಹೈಟೆಕ್ ಮಾಡಲು ಸಯ್ಯದ್ ಅಶ್ರಫ್ ಅವರು ಲಕ್ಷ ಲಕ್ಷ ಖರ್ಚು ಮಾಡಿದ್ದಾರೆ. ‘ಆಟೋದಲ್ಲಿ ಎಲ್ಲವು ಇದೆ. ಒಳಗೆ ಕುಳಿತವರು ತುಂಬಾ ಖುಷಿ ಪಡುತ್ತಾರೆ. ಇದಕ್ಕಾಗಿ ನಾನು 13 ಲಕ್ಷ ರೂ. ಖರ್ಚು ಮಾಡಿದ್ದೀನಿ’ ಅನ್ನುತ್ತಾರೆ ಸಯ್ಯದ್ ಅಶ್ರಫ್. ಆದರೆ ಈ ಹೈಟೆಕ್ ಆಟೋವನ್ನು ನಿತ್ಯ ಬಾಡಿಗೆಗೆ ಬಳಸುವುದಿಲ್ಲ. ‘ಈದ್ ಮಿಲಾದ್ ಮೆರವಣಿಗೆ, ಕೆಲವು ಕಾರ್ಯಕ್ರಮಗಳಿಗೆ ಮಾತ್ರ ಆಟೋವನ್ನು ಹೊರಗೆ ತೆಗೆಯುತ್ತೇನೆ. ಇಲ್ಲವಾದಲ್ಲಿ ಮನೆಯಲ್ಲಿಯೇ ಇರುತ್ತದೆ’ ಅನ್ನುತ್ತಾರೆ ಮಾಲೀಕ ಸಯ್ಯದ್ ಆಶ್ರಫ್.

Hi Tech Auto in Shimoga city

ತಾಯಿ ಪ್ರೀತಿಯೆ ಕಾರಣ

ಜೀವನ ನಿರ್ವಹಣೆಗಾಗಿ ಸಯ್ಯದ್ ಅಶ್ರಫ್ ಅವರ ತಾಯಿ ಅವರಿಗೊಂದು ಆಟೋ ಕೊಡಿಸಿದ್ದರು. ಆ ಬಳಿಕ ಸಯ್ಯದ್ ಅಶ್ರಫ್ ಅವರು ದುಡಿದು ಮತ್ತೊಂದು ಆಟೋ ಖರೀದಿಸಿದರು. ಜೊತೆಗೆ ವಾಹನಗಳ ಖರೀದಿ, ಮಾರಾಟ ವ್ಯವಹಾರನ್ನು ಆರಂಭಿಸಿದರು. ಆದರೆ ತಾಯಿ ಕೊಡಿಸಿದ ಆಟೋದ ಮೇಲೆ ಮಮಕಾರ ಹೆಚ್ಚು. ಇದೆ ಕಾರಣಕ್ಕೆ ಅದಕ್ಕೆ ಹೊಸ ರೂಪ ನೀಡಬೇಕು ಎಂದು ನಿರ್ಧರಿಸಿದರು.

ಕ್ಲಿಕ್ ಮಾಡಿ ಇದನ್ನೂ ಓದಿ ಇಲ್ಲಿ ರಸ್ತೆ ಮಧ್ಯೆ ಗುಂಡಿಗಳಿವೆಯೋ, ಗುಂಡಿಗಳ ಅಕ್ಕಪಕ್ಕ ಅಲ್ಲಲ್ಲಿ ಡಾಂಬಾರ್ ಹಾಕಿದ್ದಾರೋ?

‘ಅಮ್ಮ ಕೊಡಿಸಿದ ಆಟೋ ಅನ್ನುವ ಕಾರಣಕ್ಕೆ ಅದನ್ನು ಹೀಗೆ ರೆಡಿ ಮಾಡಿಸಿದೆ. ಇದನ್ನು ಕಂಡು ಅಮ್ಮ ತುಂಬಾ ಖುಷಿ ಪಟ್ಟರು. ಈಗಲು ಒಂದು ಭಾರಿ ಆಟೋ ಹೊರಗೆ ಹೋಗಿ ಬಂದರೆ, ಅಮ್ಮ ದೃಷ್ಟಿ ತೆಗೆಯುತ್ತಾರೆ. ಆಟೋ ಸಿದ್ಧವಾದ ಮೇಲೆ ಅಮ್ಮನನ್ನೆ ಮೊದಲು ಕೂರಿಸಿಕೊಂಡು ಹೋಗಿದ್ದೆ. ನಮ್ಮ ಬಡಾವಣೆಯಲ್ಲಿ ಸುತ್ತಿಸಿದ್ದೆ. ಅಮ್ಮ 501 ರೂ. ಬಾಡಿಗೆ ಹಣ ಕೊಟ್ಟಿದ್ದರು. ಅದೊಂದೆ ಬಾಡಿಗೆ ಹಣವನ್ನು ನಾನು ಈ ತನಕ ಪಡೆದಿರುವುದು. ಮತ್ತಿನ್ಯಾರಿಗೂ ಬಾಡಿಗೆ ಹೋಗಿಲ್ಲ’ ಅನ್ನುತ್ತಾರೆ ಸಯ್ಯದ್ ಅಶ್ರಫ್.

Shimoga Nanjappa Hospital

ಈಶ್ವರಪ್ಪ ಕೂಡ ಖುಷಿ ಪಟ್ಟಿದ್ದರಂತೆ

ತಾಯಿ ಕೊಡಿಸಿದ ಆಟೋ ಎಂಬ ಪ್ರೀತಿಗಾಗಿ ಸಯ್ಯದ್ ಅಶ್ರಫ್ ಆಟೋವನ್ನು ಹೈಟೆಕ್ ಮಾಡಿಸಿದ್ದಾರೆ. ಕಳೆದ ವರ್ಷದ ನವೆಂಬರ್ 1ರಂದು ಹೈಟೆಕ್ ಆಟೋ ಮೊದಲು ರಸ್ತೆಗಿಳಿದಿದ್ದು. ಆಗ ದೊಡ್ಡಪೇಟೆ ಠಾಣೆ ಇನ್ಸ್ ಪೆಕ್ಟರ್ ಆಗಿದ್ದ ಹರೀಶ್ ಪಟೇಲ್ ಅವರು ಆಟೋವನ್ನು ಉದ್ಘಾಟಿಸಿದ್ದರು. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಆಟೋವನ್ನು ಕಂಡು ಖುಷಿ ಪಟ್ಟಿದ್ದರು ಅನ್ನುತ್ತಾರೆ ಮಾಲೀಕ ಸಯ್ಯದ್ ಅಶ್ರಫ್.

ಆಟೋ ನೋಡಲು ವಿಡಿಯೋ ಕಾಲ್

ಆಟೋವನ್ನು ಹೈಟೆಕ್ ಮಾಡಿದ ಸಯ್ಯದ್ ಅಶ್ರಫ್ ಉಳಿದ ಚಾಲಕರ ಕಣ್ಣಲ್ಲಿ ಸೆಲಬ್ರಿಟಿ ಆಟೋ ಮಾಲೀಕರಾಗಿದ್ದಾರೆ. ಇವರ ಆಟೋದ ಫೋಟೊ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜಿಲ್ಲೆ, ಹೊರ ಜಿಲ್ಲೆ, ವಿವಿಧ ರಾಜ್ಯಗಳು, ವಿದೇಶದಿಂದೆಲ್ಲ ವಿಡಿಯೋ ಕಾಲ್ ಮಾಡಿ ಆಟೋವನ್ನು ತೋರಿಸುವಂತೆ ಆಶ್ರಫ್ ಅವರನ್ನು ಜನ ಕೇಳುತ್ತಾರಂತೆ.

ಮೊನ್ನೆಯ ಈದ್ ಮಿಲಾದ್ ಮೆರವಣಿಗೆ ಬಳಿಕ ಸಯ್ಯದ್ ಅಶ್ರಫ್ ಅವರ 7 ಚಕ್ರದ ಆಟೋ ಪುನಃ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ.

Shimoga Nanjappa Hospital

ಕ್ಲಿಕ್ ಮಾಡಿ ಇದನ್ನೂ ಓದಿ ಹಿಂದೂ ಹರ್ಷ ಹತ್ಯೆ ಕೇಸ್, ಒಬ್ಬ ಆರೋಪಿಗೆ ಜಾಮೀನು

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment