ಶಿವಮೊಗ್ಗ: ಆಲ್ಕೊಳ ಸರ್ಕಲ್ (Alkola Circle) ಸಮೀಪದ ಮಾಲ್‌ವೊಂದರಲ್ಲಿ ಸೋಮವಾರ ರಾತ್ರಿ ತಾಂತ್ರಿಕ ದೋಷದಿಂದಾಗಿ 9 ಮಂದಿ ಲಿಫ್ಟ್‌ನಲ್ಲಿ ಸಿಲುಕಿದ್ದರು. ಅಗ್ನಿಶಾಮಕ ದಳದ (Fire brigade / Fire and Rescue services) ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇಬ್ಬರು ಮಕ್ಕಳು ಹಾಗೂ ಮಹಿಳೆಯರು ಸೇರಿದಂತೆ ಒಟ್ಟು ಒಂಬತ್ತು ಜನರನ್ನು ರಕ್ಷಿಸಿದ್ದಾರೆ.
ಲಿಫ್ಟ್‌ನಲ್ಲಿ ತಾಂತ್ರಿಕ ದೋಷ
ವಿಶಾಲ್ ಮಾರ್ಟ್‌ನಲ್ಲಿ (Vishal Mart) ಸಾಮಗ್ರಿ ಖರೀದಿಸಲು ಬಂದಿದ್ದ ಗ್ರಾಹಕರು ಲಿಫ್ಟ್‌ನಲ್ಲಿ ಚಲಿಸುತ್ತಿದ್ದಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಲಿಫ್ಟ್ ಮಧ್ಯದಲ್ಲೇ ಸ್ಥಗಿತಗೊಂಡಿತ್ತು. ಮಾಲ್ ಸಿಬ್ಬಂದಿ ಬಾಗಿಲು ತೆರೆಯಲು ಪ್ರಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ. ಇದರಿಂದಾಗಿ ಒಳಗಿದ್ದ ಗ್ರಾಹಕರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಲಿಫ್ಟ್‌ನಲ್ಲಿ ಗಾಳಿಯಾಡದೆ ಇದ್ದುದರಿಂದ (Lack of ventilation) ಒಬ್ಬ ಮಹಿಳೆಗೆ ಉಸಿರಾಟದ ತೊಂದರೆಯೂ (Breathing difficulty) ಕಾಣಿಸಿಕೊಂಡಿತ್ತು.

ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ, ಕಾರ್ಯಾಚರಣೆ ನಡೆಸಿ ಲಿಫ್ಟ್ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದರು. ಸುಮಾರು ಒಂದು ಗಂಟೆ ಲಿಫ್ಟ್‌ನ ಒಳಗೆ ಸಿಲುಕಿದ್ದ ಒಂಬತ್ತೂ ಜನರನ್ನು ಸುರಕ್ಷಿತವಾಗಿ ಹೊರತರಲಾಗಿದೆ.
ಅಗ್ನಿಶಾಮಕ ಠಾಣಾಧಿಕಾರಿ (Station Fire Officer) ಬಿ.ಎಸ್. ಅಶೋಕ್ ಕುಮಾರ್, ಆರ್.ಎಫ್.ಟಿ ರಾಮು, ಎಫ್.ಎಸ್.ಟಿ.ಒ ಮುಕ್ತಾಮ್ ಹುಸೇನ್ ಹಾಗೂ ಸಿಬ್ಬಂದಿ ಸುನೀಲ್, ಸತೀಶ್, ಸಂತೋಷ್ ಮತ್ತು ಮನೋಜ್ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಕೆಳಗಿದೆ ಕಾರ್ಯಾಚರಣೆಯ ವಿಡಿಯೋ

