SHIVAMOGGA LIVE NEWS | 18 MARCH 2023
SHIMOGA : ಸಾರ್ವಜನಿಕರಿಗೆ ಮುಕ್ತ ಸೇವೆ ನೀಡಬೇಕಾದ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ ಭ್ರಷ್ಟಾಚಾರ (Corruption) ನಡೆಯುತ್ತಿದೆ. ಅಧಿಕಾರಿಗಳು ಬಹಿರಂಗವಾಗಿಯೇ ಲಂಚದ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಆಪಾದಿಸಿ ಆಮ್ ಆದ್ಮಿ ಪಕ್ಷದ ಪ್ರತಿಭಟನೆ ನಡೆಸಿತು.
ಆರ್.ಟಿ.ಒ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಆಮ್ ಆದ್ಮಿ ಪಕ್ಷದ ಮುಖಂಡರು, ಆರ್.ಟಿ.ಒ ಕಚೇರಿಗೆ ಬರುವ ಜನರಿಗೆ ಅಧಿಕಾರಿಗಳು ಬಹಿರಂಗವಾಗಿಯೇ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಈ ಹಿಂದೆ ಭ್ರಷ್ಟಾಚಾರ (Corruption) ಆರೋಪ ಸಂಬಂಧ ಅಮಾನತುಗೊಂಡು, ಬೇರೆಡೆಗೆ ವರ್ಗವಾಗಿದ್ದ ಅಧಿಕಾರಿಯನ್ನು ಪುನಃ ಇಲ್ಲಿಗೆ ಕರೆಯಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ಆರ್.ಟಿ.ಒ ಕಚೇರಿಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಮಧ್ಯವರ್ತಿಗಳ ಹಾವಳಿ ತಡೆಗಟ್ಟಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಲೇಡಿಸ್ ನೈಟ್ ಪಾರ್ಟಿ, ಹೊಟೇಲ್ ಮೇಲೆ ಬಜರಂಗದಳ ಕಾರ್ಯಕರ್ತರ ದಾಳಿ
ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಕಿರಣ್, ನೇತ್ರಾವತಿ, ನಜೀರ್ ಅಹ್ಮದ್, ಸುರೇಶ್ ಕೋಟೆಕರ್, ಶ್ರೀನಿವಾಸ್, ಮನೋಹರ ಗವಡ, ಏಳುಮಲೈ, ಮಾಲತೇಶ್ ಸೇರಿದಂತೆ ಹಲವರು ಇದ್ದರು.