ಮಾಚೇನಹಳ್ಳಿಯ ಜಿ.ಟಿ.ಟಿ.ಸಿಯಲ್ಲಿ ಮೂರು ಕೋರ್ಸುಗಳಿಗೆ ಅರ್ಜಿ ಆಹ್ವಾನ, ‘ಇಲ್ಲಿ ಕಲಿತರೆ ಉದ್ಯೋಗ ಖಚಿತʼ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

Arya-PU-College-Shimoga.

ಶಿವಮೊಗ್ಗ: ಮಾಚೇನಹಳ್ಳಿಯಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಮೂರು ಕೋರ್ಸುಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಎಸ್ಸೆಸ್ಸೆಲ್ಸಿ ಪಾಸಾದವರು ಈ ಕೋರ್ಸುಗಳಿಗೆ (Course) ಸೇರಬಹುದಾಗಿದೆ. ಈ ಕೋರ್ಸುಗಳನ್ನು ಪೂರ್ಣಗಳಿಸಿದರೆ ಶೇ.100ರಷ್ಟು ಉದ್ಯೋಗವಕಾಶವಿದೆ.

ಇದನ್ನೂ ಓದಿ » ಹೊಸನಗರದಲ್ಲಿ ದೇವರ ಕಾರ್ಯದ ವೇಳೆ ಕಲಹ, ವ್ಯಕ್ತಿಯ ಕೊಲೆ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತರಬೇತಿ ಕೇಂದ್ರದ ಪ್ರಾಂಶುಪಾಲ ದೀಪಕ್‌ ಕುಮಾರ್‌, ಎಐಸಿಟಿಇ 2010ರಲ್ಲಿ ಜಿಲ್ಲೆಯಲ್ಲಿ ಪ್ರಾರಂಭವಾಗಿದೆ. ಕೌಶಲಾಭವೃದ್ಧಿ, ಉದ್ಯಮಶೀಲತಾ, ಜೀವನೋಪಾಯ ಇಲಾಖೆ ಅಡಿ ಮಾನ್ಯತೆ ಪಡೆದಿದೆ ಎಂದು ತಿಳಿಸಿದರು.

ಕಾಲೇಜಿನ ಹೈಲೈಟ್ಸ್‌

  • ಡಿಪ್ಲೋಮಾ ಇನ್‌ ಟೂಲ್‌ ಅಂಡ್‌ ಡೈ ಮೇಕಿಂಗ್‌, ಡಿಪ್ಲೋಮಾ ಇನ್‌ ಪ್ರಿಸಿಷನ್‌ ಮ್ಯಾನುಫ್ಯಾಕ್ಚರಿಂಗ್‌, ಡಿಪ್ಲೋಮಾ ಇನ್‌ ಮೆಕಟ್ರಾನಿಕ್ಸ್‌ ಕೋರ್ಸುಗಳಿಗೆ ಪ್ರಸಕ್ತ ಸಾಲಿನ ಪ್ರವೇಶ ಆರಂಭವಾಗಿದೆ.
  • ಪ್ರತಿ ಕೋರ್ಸ್‌ಗೆ 60 ಸೀಟ್‌ ಇರಲಿದೆ. ಒಟ್ಟು 180 ವಿದ್ಯಾರ್ಥಿಗಳಿಗೆ ಅವಕಾಶ ಇರಲಿದೆ. ಮೆರಿಟ್‌ ಮತ್ತು ರೋಸ್ಟರ್‌ ಪದ್ಧತಿಯಂತೆ ಆಯ್ಕೆ ನಡೆಯಲಿದೆ. ಶೇ.30ರಷ್ಟು ಸೀಟುಗಳು ವಿದ್ಯಾರ್ಥಿನಿಯರಿಗೆ ಕಾಯ್ದಿರಿಸಲಾಗಿದೆ.
  • ಬಾಲಕರಿಗೆ ಸುಸಜ್ಜಿತವಾದ ವಸತಿ ನಿಲಯ ಇದೆ. ವಿದ್ಯಾರ್ಥಿಗಳಿಗೆ ಸ್ಟೈಫಂಡ್‌ ದೊರೆಯಲಿದೆ. ಎರಡನೆ ವರ್ಷದಿಂದ ಎಲ್ಲಾ ವಿದ್ಯಾರ್ಥಿಗಳಿಗೆ 28 ಸಾವಿರ ರೂ. ವಿದ್ಯಾರ್ಥಿ ವೇತನ ದೊರೆಯಲಿದೆ.
  • ಮಾಚೇನಹಳ್ಳಿಯಲ್ಲಿ 5.15 ಎಕರೆ ವಿಸ್ತೀರ್ಣದಲ್ಲಿ ಸ್ವಂತ ಕಟ್ಟಡವಿದೆ. ವಿಶಾಲವಾದ ತರಗತಿಗಳು, ಯಂತ್ರಾಗಾರ, ಗ್ರಂಥಾಲಯ, ಸುಸಜ್ಜಿತ ಪ್ರಯೋಗಾಲಯ, ನುರಿತ ಉಪನ್ಯಾಸಕರಿದ್ದಾರೆ.
  • ಶೇ.70ರಷ್ಟು ಪ್ರಾಯೋಗಿಕ ಶಿಕ್ಷಣವಿರಲಿದೆ. ಕಡ್ಡಾಯವಾಗಿ ಕೈಗಾರಿಕೆ ತರಬೇತಿ ದೊರೆಯಲಿದೆ.
  • ಐ.ಟಿ.ಐ ಮತ್ತು ಪಿಯುಸಿ (ವಿಜ್ಞಾನ) ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ 3ನೇ ಸೆಮಿಸ್ಟರ್‌ ಡಿಪ್ಲೋಮಾ ಕೋರ್ಸ್‌ಗೆ ನೇರ ಪ್ರವೇಶ ಕಲ್ಪಿಸಲಾಗುತ್ತದೆ.

GTTC-College-press-meet. course

2025-26ರ ಸಾಲಿನ ಪ್ರವೇಶ ಪ್ರಾರಂಭವಾಗಿದೆ. ಮೂರು ಕೋರ್ಸುಗಳಿವೆ. ಶೇ.70ರಷ್ಟು ಪ್ರಾಯೋಗಿಕ ತರಬೇತಿ ಇರಲಿದೆ. ಆಸಕ್ತರು ನೇರವಾಗಿ ಕಾಲೇಜಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

– ದೀಪಕ್‌ ಕುಮಾರ್‌.ವಿ.ಆರ್‌, ಪ್ರಾಂಶುಪಾಲರು

ಈ ಕೋರ್ಸುಗಳು ಮಧ್ಯಮ ವರ್ಗದ ಮಕ್ಕಳಿಗೆ ತುಂಬಾ ಅನುಕೂಲ. ಪ್ರಾಯೋಗಿಕವಾಗಿಯೆ ಮಕ್ಕಳು ಕಲಿಯುತ್ತಾರೆ. ಕೈಗಾರಿಕಾ ತರಬೇತಿ ಮುಗಿಸಿದರೆ ಮಾತ್ರ ಕೋರ್ಸ್ ಪೂರ್ಣವಾಗುತ್ತದೆ. ಮೂರನೇ ವರ್ಷದಲ್ಲಿ ಕ್ಯಾಂಪಸ್ ಸೆಲೆಕ್ಷನ್ ನಡೆಯುತ್ತದೆ.

– ನಾಗರಾಜ್.ಹೆಚ್.ಪಿ, ಘಟಕ ಮುಖ್ಯಸ್ಥರು

ಪತ್ರಿಕಾಗೋಷ್ಠಿಯಲ್ಲಿ ಉಪನ್ಯಾಸಕ ಮಂಜುನಾಥ್‌ ಉಪಸ್ಥಿತರಿದ್ದರು.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment