ಈಶ್ವರಪ್ಪ ನೇತೃತ್ವದ ಕಾರ್ಯಕ್ರಮ, ಶಿವಮೊಗ್ಗ ವಕೀಲರಿಂದ ಮುಖ್ಯ ನ್ಯಾಯಮೂರ್ತಿಗಳಿಗೆ ದೂರು, ಯಾಕೆ?

 ಶಿವಮೊಗ್ಗ  LIVE 

ಶಿವಮೊಗ್ಗ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕ್ರಿಮಿನಲ್‌ ಪ್ರಕರಣಗಳಿವೆ. ಅವರ ಜೊತೆಗೆ ಹೈಕೋರ್ಟ್‌ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರು ವೇದಿಕೆ ಹಂಚಿಕೊಳ್ಳುವುದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸಲಿದೆ. ಈ ಹಿನ್ನೆಲೆ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ದೂರು ನೀಡಲಾಗಿದೆ ಎಂದು ವಕೀಲ (Advocates) ಕೆ.ಪಿ.ಶ್ರೀಪಾಲ್‌ ತಿಳಿಸಿದರು.

KP-Sripal-remark-against-Srigandha-Programme.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಪಿ.ಶ್ರೀಪಾಲ್‌, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ಲೋಕಾಯುಕ್ತದಲ್ಲಿ ಒಂದು ಪ್ರಕರಣವಿದೆ. ಇದು ಸೇರಿದಂತೆ ಮೂರು ಕ್ರಿಮಿನಲ್ ಪ್ರಕರಣಗಳಿವೆ. ಹೈಕೋರ್ಟ್‌ ಹಾಗೂ ಶಿವಮೊಗ್ಗ ನ್ಯಾಯಾಲಯದಲ್ಲಿ ಪ್ರಕರಣಗಳು ಬಾಕಿ ಇವೆ. ಇವರ ಜೊತೆಗೆ ನ್ಯಾಯಾಧೀಶರು ವೇದಿಕೆ ಹಂಚಿಕೊಂಡರೆ, ನಾಳೆ ಒಂದು ವೇಳೆ ನ್ಯಾಯಾಲಯದ ತೀರ್ಪು ಅವರ ಪರವಾಗಿ ಬಂದಾಗ ಜನರು ನ್ಯಾಯಾಂಗದ ಮೇಲೆ ಸಂಶಯ ಪಡುವಂತಾಗುತ್ತದೆ ಎಂದು ಶ್ರೀಪಾಲ್ ಆತಂಕ ವ್ಯಕ್ತಪಡಿಸಿದರು.

ಇನ್ನು, ಈ ಸಂಬಂಧ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ದೂರು ಸಲ್ಲಿಸಲಾಗಿದೆ ಎಂದು ಶ್ರೀಪಾಲ್‌ ತಿಳಿಸಿದರು. ಆದರೆ ಈತನಕ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ದೂರಿನಲ್ಲಿ ಏನಿದೆ?

ಶ್ರೀಗಂಧ ಸಂಸ್ಥೆ ವತಿಯಿಂದ ಡಿ.25ರಂದು ಕುವೆಂಪು ರಂಗಮಂದಿರದಲ್ಲಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಹೈಕೋರ್ಟ್‌ ನ್ಯಾಯಾಧೀಶರಾದ ವಿ.‍ಶ್ರೀಶಾನಂದ ಅವರು ಉಪನ್ಯಾಸ ನೀಡಲು ಆಗಮಿಸುತ್ತಿದ್ದಾರೆ. ‍ಕೆ.ಎಸ್.‌ಈಶ್ವರಪ್ಪ ಅವರು ಶ್ರೀಗಂಧ ಸಂಸ್ಥೆಯ ‍ಅಧ್ಯಕ್ಷರಾಗಿದ್ದಾರೆ. ಇವರ ವಿರುದ್ಧ ಹಲವು ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇವೆ. ಹೈಕೋರ್ಟ್‌ ನ್ಯಾಯಾಧೀಶರು ಈಶ್ವರಪ್ಪ ಅವರ ಜೊತೆಗೆ ವೇದಿಕೆ ಹಂಚಿಕೊಳ್ಳುವುದು ಸೂಕ್ತವಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ » ಶಿವಮೊಗ್ಗ ಡಿಸಿಸಿ ಬ್ಯಾಂಕ್‌, 72 ವರ್ಷದಲ್ಲಿ ಅತ್ಯಧಿಕ ಲಾಭ ಗಳಿಕೆ, ಮುಂದನ ವರ್ಷದ ಟಾರ್ಗೆಟ್‌ ಎಷ್ಟು?

ದೂರಿನ ಪ್ರತಿಗೆ ವಕೀಲ ಕೆ.ಪಿ.ಶ್ರೀಪಾಲ್‌ ಸೇರಿದಂತೆ ಹಲವು ವಕೀಲರು ಸಹಿ ಮಾಡಿದ್ದಾರೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment