ಗಾಂಧಿ ಬಜಾರ್ ಸುತ್ತಮುತ್ತ ದಿಢೀರ್ ಕಾರ್ಯಾಚರಣೆ, 5 ದಿನದ ಬಳಿಕ 5 ಮಹತ್ವದ ಬದಲಾವಣೆ, ಏನದು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 7 NOVEMBER 2022

SHIMOGA | ಜಿಲ್ಲಾಧಿಕಾರಿ, ರಕ್ಷಣಾಧಿಕಾರಿ ನೇತೃತ್ವದಲ್ಲಿ ಮೂರು ಗಂಟೆಯ ಕಾರ್ಯಾಚರಣೆ (operation footpath), ಮೂರು ದಿನ ಜೆಸಿಬಿ ಘರ್ಜನೆ, ಪಾಲಿಕೆ ಅಧಿಕಾರಿಗಳ ಶ್ರಮದಿಂದ ಗಾಂಧಿ ಬಜಾರ್ ಸುತ್ತಮುತ್ತ ಬದಲಾವಣೆ ಕಂಡು ಬಂದಿದೆ. ಒತ್ತುವರಿ ತೆರವಾಗಿದ್ದು, ವಾಹನ ಮತ್ತು ಜನ ಸಂಚಾರ ಸುಗಮವಾಗಿದೆ.

Shimoga Nanjappa HOspital

ನವೆಂಬರ್ 2ರಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ರಕ್ಷಣಾಧಿಕಾರಿ ಮಿಥುನ್ ಕುಮಾರ್, ಕಮಿಷನರ್ ಮಾಯಣ್ಣ ಗೌಡ ನೇತೃತ್ವದಲ್ಲಿ ಗಾಂಧಿ ಬಜಾರ್ ಸುತ್ತಮುತ್ತ ಕಾರ್ಯಾಚರಣೆ ನಡೆಸಲಾಗಿತ್ತು. ಫುಟ್ ಪಾತ್ ಮತ್ತು ರಸ್ತೆ ಒತ್ತುವರಿ ತೆರವು ಮಾಡುವಂತೆ ಖಡಕ್ ಸೂಚನೆ ನೀಡಲಾಗಿತ್ತು. ಇದಾಗಿ ಐದು ದಿನ ಕಳೆದಿದೆ. ಈಗಲಾಗಲೆ ಹಲವು ಮಹತ್ವದ ಬದಲಾವಣೆಗಳು ಗೋಚರಿಸಿವೆ.

(operation footpath)

ಏನೆಲ್ಲ ಬದಲಾವಣೆಯಾಗಿದೆ? ಇಲ್ಲಿದೆ 5 ಪ್ರಮುಖಾಂಶ

POINT%201ಗಾಂಧಿ ಬಜಾರ್ ಮುಖ್ಯ ರಸ್ತೆ, ಅದಕ್ಕೆ ಹೊಂದಿಕೊಂಡಿರುವ ನಾಗಪ್ಪ ಕೇರಿ, ಉರ್ದು ಬಜಾರ್ ರಸ್ತೆಗಳಲ್ಲಿ ಒತ್ತುವರಿ ತೆರವು ಮಾಡಲಾಗಿದೆ. ಅಂಗಡಿ ಮಾಲೀಕರು ಮಳಿಗೆ ಮುಂದೆ ಶೀಟ್ ಅಳವಡಿಸಿ, ರಸ್ತೆ, ಫುಟ್ ಪಾತ್ ಒತ್ತುವರಿ ಮಾಡಿ ಕಟ್ಟೆಗಳನ್ನು ಕಟ್ಟಿದ್ದರು. ಈಗ ಅವುಗಳನ್ನು ತೆರವುಗೊಳಿಸಲಾಗಿದೆ. ರಸ್ತೆಯಲ್ಲಿ ಜನ, ವಾಹನ ಸಂಚಾರ ಸುಗಮವಾಗಿದೆ. (operation footpath)

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗದ ಗಾಂಧಿ ಬಜಾರ್ ಸುತ್ತಮುತ್ತ ಡಿಸಿ, ಎಸ್.ಪಿ ನೇತೃತ್ವದಲ್ಲಿ 3 ಗಂಟೆ ದಿಢೀರ್ ಕಾರ್ಯಾಚರಣೆ

operation footpath in gandhi bazaar

POINT%202ಗಾಂಧಿ ಬಜಾರ್, ಉರ್ದು ಬಜಾರ್ ರೋಡ್, ಕಸ್ತೂರ ಬಾ ರಸ್ತೆ, ಎಂಕೆಕೆ ರಸ್ತೆಯುಲ್ಲಿ ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್ ಗೆ ಬ್ರೇಕ್ ಬಿದ್ದಿದೆ. ನಿಗದಿಯಂತೆ ಒಂದು ಬದಿಯಲ್ಲಿ ವಾಹನಗಳ ನಿಲುಗಡೆ ಮಾಡಲಾಗುತ್ತಿದೆ. ಯದ್ವತದ್ವ ಪಾರ್ಕಿಂಗ್ ತಡೆಗೆ ಸಂಚಾರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಕ್ಲಿಕ್ ಮಾಡಿ ಇದನ್ನೂ ಓದಿ |  ಬೆಳ್ಳಂಬೆಳಗ್ಗೆ ಗಾಂಧಿ ಬಜಾರ್ ನಲ್ಲಿ ಜೆಸಿಬಿ ಘರ್ಜನೆ, ಎರಡನೇ ದಿನಕ್ಕೆ ತೆರವು ಕಾರ್ಯಾಚರಣೆ

POINT%203ಗುಜರಿ ವ್ಯಾಪಾರಿಗಳು ಸುಲ್ತಾನ್ ಮಾರುಕಟ್ಟೆ ರಸ್ತೆಯನ್ನೆ ಅತಿಕ್ರಮಿಸಿಕೊಂಡಿದ್ದರು. ಈ ಹಿಂದೆ ಪಾಲಿಕೆ ಮೇಯರ್ ಆಗಿದ್ದ ಸುನಿತಾ ಅಣ್ಣಪ್ಪ ಅವರು ರಸ್ತೆ ಮೇಲಿನ ಗುಜರಿ ತೆರವು ಮಾಡುವಂತೆ ಮನವಿ ಮಾಡಿದ್ದರು. ಆದರೆ ಇದಕ್ಕೆ ಕ್ಯಾರೆ ಅನ್ನದ ವ್ಯಾಪಾರಿಗಳು ಈಗ ಅಧಿಕಾರಿಗಳ ಖಡಕ್ ನಿರ್ಧಾರಕ್ಕೆ ತಲೆಬಾಗಿದ್ದಾರೆ. ಸುಲ್ತಾನ್ ಮಾರುಕಟ್ಟೆ ರಸ್ತೆಯಲ್ಲಿ ಗುಜರಿ ತೆರವು ಮಾಡಿ, ಅಂಗಡಿಯೊಳಗೆ ಇರಿಸಿಕೊಂಡು ವಹಿವಾಟು ಮಾಡುತ್ತಿದ್ದಾರೆ.

ಕ್ಲಿಕ್ ಮಾಡಿ ಇದನ್ನೂ ಓದಿ | ಶಿವಮೊಗ್ಗದಲ್ಲಿ ಮುಂದುವರೆದ ಒತ್ತುವರಿ ತೆರವು, ಗುಜರಿ ವಸ್ತುಗಳು ವಶಕ್ಕೆ

shimoga gandhi bazaar

POINT%204ಗಾಂಧಿ ಬಜಾರ್ ಪ್ರವೇಶದಲ್ಲಿ ವಾಹನ ಪಾರ್ಕಿಂಗ್ ಸ್ಥಳಾವಕಾಶ ಹೆಚ್ಚಳ ಮಾಡಲಾಗಿದೆ. ಶಿವಪ್ಪ ಪ್ರತಿಮೆ ಬಳಿ ಗಾಂಧಿ ಬಜಾರ್ ಬಸ್ ಸ್ಟಾಪ್ ಹಿಂಭಾಗ ತಳ್ಳುಗಾಡಿ ವ್ಯಾಪಾರಿಗಳನ್ನು ತೆರವು ಮಾಡಲಾಗಿದೆ. ಹಾಗಾಗಿ ವಾಹನಗಳ ಪಾರ್ಕಿಂಗ್ ಸ್ಥಳಾವಕಾಶ ಹೆಚ್ಚಾಗಿದೆ. ಅದರ ಪಕ್ಕದಲ್ಲಿ ಅಂಗಡಿಯವರು ಫುಟ್ ಪಾತ್ ಮೇಲೆ ಹಣ್ಣು ಇರಿಸಿ ವ್ಯಾಪಾರ ಮಾಡುವುದಕ್ಕು ಬ್ರೇಕ್ ಬಿದಿದೆ. ಪಾದಚಾರಿಗಳ ಸುಗಮ ಸಂಚಾರಕ್ಕೆ ವ್ಯವಸ್ಥೆಯಾಗಿದೆ.

shimoga gandhi bazaar

POINT%205ಎಂಕೆಕೆ ರಸ್ತೆ, ಕೆ.ಆರ್.ಪುರಂ ರಸ್ತೆ ಸೇರಿದಂತೆ ವಿವಿಧೆಡೆ ರಸ್ತೆ ಪಕ್ಕದಲ್ಲಿ ಬಿದ್ದದ್ದ ಕಸ, ಕಟ್ಟಡ ಸಾಮಾಗ್ರಿಗಳನ್ನು ತೆರವು ಮಾಡಲಾಗಿದೆ. ಹಾಗಾಗಿ ವಾಹನಗಳ ಪಾರ್ಕಿಂಗ್ ಮಾಡಲು ಹೆಚ್ಚುವರಿ ಸ್ಥಳಾವಕಾಶ ಲಭಿಸಿದಂತಾಗಿದೆ.

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment