ಶಿವಮೊಗ್ಗದ ಹೊಸ ಜಿಲ್ಲಾಧಿಕಾರಿ ಬಗ್ಗೆ ಗೊತ್ತಿರಬೇಕಾದ ಮೂರು ವಿಚಾರಗಳಿವು

ಶಿವಮೊಗ್ಗದ ಲೈವ್.ಕಾಂ | SHIMOGA NEWS | 13 ಜನವರಿ 2022

ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಡಾ. ಆರ್. ಸೆಲ್ವಮಣಿ ಅವರು ಅಧಿಕಾರ ಸ್ವೀಕರಿಸಿದರು. ಕೋಲಾರ ಜಿಲ್ಲಾಧಿಕಾರಿಯಾಗಿದ್ದ ಡಾ. ಸೆಲ್ವಮಣಿ ಅವರನ್ನು ಶಿವಮೊಗ್ಗ ಡಿಸಿಯಾಗಿ ಮಂಗಳವಾರ ವರ್ಗಾವಣೆ ಮಾಡಲಾಗಿತ್ತು.

AVvXsEichXaELYeDOhFU0n9XstiInpkhsI4y9y5uB VImqATyx1h3CLRA4zsRrFRxoiVo U462f0MYCBVD

ಈವರೆಗೆ ಶಿವಮೊಗ್ಗ ಡಿಸಿಯಾಗಿದ್ದ ಕೆ.ಬಿ.ಶಿವಕುಮಾರ್‌ ಅವರಿಗೆ ಯಾವುದೇ ಸ್ಥಳ ಸೂಚಿಸಿಲ್ಲ.

ಮೂರು ಪ್ರಮುಖಾಂಶ

  1. 1986ರಲ್ಲಿ ಜನಿಸಿದ ಡಾ. ಆರ್.ಸೆಲ್ವಮಣಿ 2013ನೇ ಬ್ಯಾಚ್‌ನ ಐಎಎಸ್ ಅಧಿಕಾರಿ. ಮೂಲತಃ ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯವರು.
  2. ಮಂಗಳೂರು ಜಿಪಂ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರನ್ನು ಕೆಲವು ತಿಂಗಳ ಹಿಂದಷ್ಟೇ ಕೋಲಾರ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿತ್ತು.
  3. ಇದೀಗ ವರ್ಷದಲ್ಲಿ ಎರಡನೇ ಬಾರಿ ಅವರನ್ನು ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ | ಶಿವಮೊಗ್ಗ ಡಿಸಿ ವರ್ಗಾವಣೆ, ಹೊಸ ಡಿಸಿ ಯಾರು?

ಇದನ್ನೂ ಓದಿ | ಶಿವಮೊಗ್ಗ ಲೈವ್.ಕಾಂ ವೆಬ್ ಸೈಟ್’ಗೆ ಐದು ವರ್ಷ. ಇಲ್ಲಿದೆ ಪ್ರಮುಖ ಮಾಹಿತಿ.

ABOUT ME DECEMBER REPORT

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment