ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 21 AUGUST 2024 : ಸೇನೆಯ ಅಗ್ನಿಪಥ್ ಯೋಜನೆ ಅಡಿ ಶಿವಮೊಗ್ಗದಲ್ಲಿ ನಾಳೆಯಿಂದ ಅಗ್ನಿವೀರರ (agniveer) ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ರಾಜ್ಯದ 11 ಜಿಲ್ಲೆಗಳ ಅಭ್ಯರ್ಥಿಗಳು ದೈಹಿಕ ಸಾಮರ್ಥ್ಯ ಪರೀಕ್ಷೆ ಎದುರಿಸಲಿದ್ದಾರೆ. ಇದಕ್ಕಾಗಿ ನೆಹರು ಸ್ಟೇಡಿಯಂನಲ್ಲಿ ಸಿದ್ಧತೆ ನಡೆಸಲಾಗಿದೆ. ಅರ್ಹ ಅಭ್ಯರ್ಥಿಗಳಿಗೆ ಪ್ರವೇಶ ಪತ್ರ ರವಾನಿಸಲಾಗಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ನೆಹರು ಸ್ಟೇಡಿಯಂನಲ್ಲಿ ಆ.22 ರಿಂದ ಆ.31ರವರೆಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಯಲಿದೆ. ಈ ಅವಧಿಯಲ್ಲಿ ಅಭ್ಯರ್ಥಿಗಳ ಹೊರತು ಉಳಿದ ಸಾರ್ವಜನಿಕರಿಗೆ ಪ್ರವೇಶ ನಿರ್ಬಂರ್ಧವಿದೆ. ಬೆಳಗ್ಗೆ 6 ಗಂಟೆಗೆ ರನ್ನಿಂಗ್ ಇರಲಿದೆ. 5 ನಿಮಿಷ 45 ಸಕೆಂಡ್‌ನಲ್ಲಿ 1.6 ಕಿ.ಮೀ ಓಡಬೇಕು. ಇದರಲ್ಲಿ ಪಾಸಾದವರಿಗೆ ಫಿಸಿಕಲ್ ಫೆಟ್ನೆಸ್, ಮೆಡಿಕಲ್ ಟೆಸ್ಟ್ ಮಾಡಲಾಗುತ್ತಾರೆ. ಆಯ್ಕೆಯಾದವರಿಗೆ ಮುಂದಿನ ಹಂತದ ಪ್ರಕ್ರಿಯೆ ನಡೆಯಲಿದೆ.ನೆಹರು ಸ್ಟೇಡಿಯಂನಲ್ಲಿ ಹೇಗಿದೆ ಸಿದ್ಧತೆ?
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಸೇನಾಧಿಕಾರಿಗಳ ನಿರ್ಧಾರವೆ ಫೈನಲ್
ಈ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಂಗಳೂರು ವಿಭಾಗದ ಸೇನಾ ನೇಮಕಾತಿ ಅಧಿಕಾರಿ ಕರ್ನಲ್ ಕೃಷ್ಣನ್ ಕಶ್ಯಪ್, ಆ.22ರಂದು ಮೇಜರ್ ಹರಿಪಿಳ್ಳೈ ಅವರು ರನ್ನಿಂಗ್‌ಗೆ ಚಾಲನೆ ನೀಡಲಿದ್ದಾರೆ. ಒಂದು ದಿನ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಕೂಡ ರನ್ನಿಂಗ್‌ಗೆ ಚಾಲನೆ ನೀಡಲಿದ್ದಾರೆ. ಸೇನಾಧಿಕಾರಿಗಳ ನಿರ್ದೇಶನದಂತೆಯೇ ಅಭ್ಯರ್ಥಿಗಳು ನಡೆದುಕೊಳ್ಳಬೇಕು. ನೆಹರು ಸ್ಟೇಡಿಯಂಗೆ ಯಾವುದೇ ಸಾರ್ವಜನಿಕರಿಗೆ ಪ್ರವೇಶ ನೀಡುವುದಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ ⇒ ಪಡಿತರ ಚೀಟಿದಾರರೆ ಗಮನಿಸಿ, ಆ.31 ಕೊನೆ ದಿನ, ತಪ್ಪಿದರೆ ಪಡಿತರ ಸಿಗಲ್ಲ
ದಾಖಲೆ ಪರಿಶೀಲನೆಗೆ ಅಧಿಕಾರಿಗಳ ತಂಡ
ಇನ್ನು, ದೈಹಿಕ ಸಾಮರ್ಥ್ಯ ಪರೀಕ್ಷೆ ಬಳಿಕ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ನಡೆಯಲಿದೆ. ಇದಕ್ಕಾಗಿ ಕಂದಾಯ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಕರ್ನಲ್ ಕೃಷ್ಣನ್ ಕಶ್ಯಪ್ ತಿಳಿಸಿದರು.
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಹಿರೇಮಠ್ ಮಾತನಾಡಿ, ನೆಹರು ಕ್ರೀಡಾಂಗಣದ ಒಳಗೆ ಎಲ್ಲ ಬಗೆಯ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ನಿತ್ಯ ಒಂದೊಂದು ಜಿಲ್ಲೆಯ 800 ರಿಂದ 900 ಅಭ್ಯರ್ಥಿಗಳ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಯಲಿದೆ. ಸರ್ಕಾರಿ ನೌಕರರ ಸಂಘದ ನೂತನ ಭವನ ಕಟ್ಟಡ ಮತ್ತು ಕುವೆಂಪು ನಗರದಲ್ಲಿರುವ ಕ್ರೀಡಾ ವಸತಿ ಶಾಲೆಯಲ್ಲಿ ಅಭ್ಯರ್ಥಿಗಳು ತಂಗಲು ಅವಕಾಶ ಕಲ್ಪಿಸಲಾಗಿದ ಎಂದರು.
ಶಿವಮೊಗ್ಗದಲ್ಲಿ ಇದೇ ಮೊದಲ ಬಾರಿ ಅಗ್ನಿವೀರರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಶಿವಮೊಗ್ಗ, ದಾವಣಗೆರೆ, ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಗದಗ, ಹಾವೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ.
ಇದನ್ನೂ ಓದಿ ⇒ ರಾತ್ರೋರಾತ್ರಿ ಶಾಲೆ ಆವರಣದಲ್ಲಿದ್ದ ಬಸ್ಸುಗಳ ಟೈರ್‌ಗಳು ನಾಪತ್ತೆ, ಸ್ಟೆಪ್ನಿ, ಜಾಕ್‌ಗಳು ಕಣ್ಮರೆ