SHIVAMOGGA LIVE NEWS, 7 DECEMBER 2024
ಶಿವಮೊಗ್ಗ : ಆಶ್ರಯ ಮನೆಗಳ ಫಲಾನುಭವಿಗಳ ಆಯ್ಕೆ ಕಾರ್ಯಕ್ರಮವನ್ನು ದಿಢೀರ್ ರದ್ದುಗೊಳಿಸಿದ್ದನ್ನು ಖಂಡಿಸಿ ಫಲಾನುಭವಿಗಳು ಮಹಾನಗರ ಪಾಲಿಕೆ ಆಯುಕ್ತರ ಕಾರಿಗೆ ಮುತ್ತಿಗೆ ಹಾಕಿದರು. ಈ ಸಂದರ್ಭ ಶಾಸಕ ಚನ್ನಬಸಪ್ಪ ಮತ್ತು ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಮಧ್ಯೆ ಮಾತಿನ ಚಕಮಕಿ (Altercation) ನಡೆಯಿತು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ದಿಢೀರ್ ರದ್ದಾದ ಕಾರ್ಯಕ್ರಮ
ಗೋವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪದಲ್ಲಿ 638 ಆಶ್ರಯ ಮನೆಗಳ ಹಂಚಿಕೆಗೆ ಇವತ್ತು ಫಲಾನುಭವಿಗಳ ಆಯ್ಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕುವೆಂಪು ರಂಗಮಂದಿರದಲ್ಲಿ ಫಲಾನುಭವಿಗಳ ಆಯ್ಕೆ ನಡೆಯಬೇಕಿತ್ತು. ಆದರೆ ಕಾರ್ಯಕ್ರಮ ದಿಢೀರ್ ರದ್ದುಗೊಳಿಸಲಾಗಿದೆ. ಮನೆಗಳಿಗಾಗಿ ವರ್ಷಗಳಿಂದ ಕಾದಿದ್ದ ಫಲಾನುಭವಿಗಳು, ಪಾಲಿಕೆ ಅಧಿಕಾರಿಗಳ ನಡೆ ವಿರುದ್ಧ ಆಕ್ರೋಶಗೊಂಡರು.
ಎಂಎಲ್‌ಎ ಕರೆ ಕಟ್ ಮಾಡಿದ ಕಮಿಷನರ್
ವಿಷಯ ತಿಳಿಯುತ್ತಿದ್ದಂತೆ ಶಾಸಕ ಎಸ್.ಎನ್.ಚನ್ನಬಸಪ್ಪ ಕುವೆಂಪು ರಂಗಮಂದಿರಕ್ಕೆ ದೌಡಾಯಿಸಿದರು. ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಅವರಿಗೆ ಶಾಸಕ ಚನ್ನಬಸಪ್ಪ ಕರೆ ಮಾಡಿದಾಗ ಹಾರಿಕೆ ಉತ್ತರ ನೀಡಿ, ಕರೆ ಕಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆಕ್ರೋಶಗೊಂಡ ಶಾಸಕರು, ಕುವೆಂಪು ರಂಗಮಂದಿರದ ಮೆಟ್ಟಿಲುಗಳ ಮೇಲೆ ಫಲಾನುಭವಿಗಳ ಜೊತೆಗೆ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿಗೆ ಕರೆ ಮಾಡಿ ಕಮಿಷನರ್ ವಿರುದ್ಧ ದೂರು ತಿಳಿಸಿದರು.
ಕಮಿಷನರ್ ಕಾರಿಗೆ ಮುತ್ತಿಗೆ
ಕೆಲವು ಹೊತ್ತಿನ ಬಳಿಕ ಕಮಿಷನರ್ ಕವಿತಾ ಯೋಗಪ್ಪನವರ್ ಕುವೆಂಪು ರಂಗಮಂದಿರಕ್ಕೆ ಆಗಮಿಸಿದರು. ಈ ಸಂದರ್ಭ ಫಲಾನುಭವಿಗಳು ಪಾಲಿಕೆ ಆಯುಕ್ತರ ವಿರುದ್ಧ ಘೋಷಣೆ ಕೂಗಿದರು. ಶಾಸಕ ಚನ್ನಬಸಪ್ಪ ಮತ್ತು ಕಮಿಷನರ್ ಕವಿತಾ ಯೋಗಪ್ಪನವರ್ ಮಧ್ಯೆ ಮಾತಿನ ಚಕಮಕಿ ನಡೆಯಿತು. ಸ್ಥಳದಿಂದ ಕಮಿಷನರ್ ಹೊರಡುತ್ತಿದ್ದಂತೆ ಫಲಾನುಭವಿಗಳು ಆಕ್ರೋಶಗೊಂಡರು. ಕಮಿಷನರ್ ಕಾರಿಗೆ ಮುತ್ತಿಗೆ ಹಾಕಿದರು.
ಬದಲಿ ಕಾರಿನಲ್ಲಿ ಕಚೇರಿಗೆ ಕಮಿಷನರ್
ಕಾರಿನ ಮುಂದೆ ಮಲಗಿದ ಫಲಾನುಭವಿಗಳು ಕಮಿಷನರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೋಟೆ ಠಾಣೆ ಪೊಲೀಸರು ಫಲಾನುಭವಿಗಳನ್ನು ಸಮಾಧಾನಪಡಿಸಿ ಕಾರಿಗೆ ದಾರಿ ಬಿಡಿಸಲು ಮಾಡಿದ ಪ್ರಯತ್ನ ವಿಫಲವಾಯಿತು. ಪರಿಸ್ಥಿತಿ ಕೈ ಮೀರಿದ ಹಿನ್ನೆಲೆ ಡಿಎಆರ್‌ನಿಂದ ಹೆಚ್ಚುವರಿ ಪೊಲೀಸರನ್ನು ಕರೆಯಿಸಿಲಾಯಿತು. ಆ ಬಳಿಕ ಕಾರು ಇಳಿದು ಸ್ವಲ್ಪ ದೂರದವರೆಗೆ ನಡೆದು ಹೋದ ಪಾಲಿಕೆ ಕಮಿಷನರ್ ಬದಲಿ ಕಾರಿನಲ್ಲಿ ಪಾಲಿಕೆ ಕಚೇರಿಗೆ ತೆರಳಿದರು.
ಇದನ್ನೂ ಓದಿ » ಸರ್ಜಿ ಆಸ್ಪತ್ರೆ ಇನ್ಮುಂದೆ ಪೇಪರ್ ಲೆಸ್, ರೋಗಿಗಳಿಗೆ ಅನುಕೂಲವೇನು?