ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 9 SEPTEMBER 2023
SHIMOGA : ಬೀದಿ ನಾಯಿಯೊಂದು (Stray Dog) ಕಾರಿನ ಚಕ್ರದ ಮೇಲೆ ಮೂತ್ರ ವಿಸರ್ಜನೆ ಮಾಡಿದ ವಿಚಾರಕ್ಕೆ ಎರಡು ಕುಟುಂಬದ ಮಧ್ಯೆ ಜಗಳವಾಗಿ ಕೈ ಕೈ ಮಿಲಾಯಿಸಿದ್ದಾರೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಶಿವಮೊಗ್ಗದ ಆರ್ಎಂಎಲ್ ನಗರದಲ್ಲಿ ಘಟನೆ ಸಂಭವಿಸಿದೆ. ಹಾಲಮ್ಮ ಎಂಬುವವರು ತಮ್ಮ ಮನೆ ಸಮೀಪ ಇದ್ದ ಬೀದಿ ನಾಯಿ ಒಂದಕ್ಕೆ ಆಗಾಗ ಊಟ ಹಾಕುತ್ತಿದ್ದರು. ನಾಯಿ ಸಮೀಪದಲ್ಲಿ ನಿಲ್ಲಿಸಿದ್ದ ಕಾರಿನ ಚಕ್ರದ ಮೇಲೆ ಮೂತ್ರ ವಿಸರ್ಜನೆ ಮಾಡಿತ್ತು. ಆಕ್ರೋಶಗೊಂಡ ಕಾರಿನ ಮಾಲೀಕ ಹಾಲಮ್ಮ, ಅವರ ಪತಿ ಜೊತೆ ಜಗಳವಾಡಿದ್ದು, ತಳ್ಳಾಡಿದ್ದಾರೆ.
ಇದನ್ನೂ ಓದಿ – ಕೆಲಸ ಹುಡುಕ್ತಿರೋರಿಗೆ ಗುಡ್ ನ್ಯೂಸ್, ಶಿವಮೊಗ್ಗ ಸೈನ್ಸ್ ಮೈದಾನದಲ್ಲಿ ಬೃಹತ್ ಉದ್ಯೋಗ ಮೇಳ, 5 ಸಾವಿರ ಕೆಲಸ ಇದೆ
ಹಾಲಮ್ಮ ಅವರ ಪತಿಗೆ ಗಾಯವಾಗಿದೆ. ಇದೆ ವೇಳೆ ಕಾರಿನ ಮಾಲೀಕ ಜೀವ ಬೆದರಿಕೆ ಒಡ್ಡಿದ್ದಾನೆ ಎಂದ ಹಾಲಮ್ಮ ದೂರಿನಲ್ಲಿ ಆಪಾದಿಸಿದ್ದಾರೆ. ಕಾರಿನ ಮಾಲೀಕನ ತಾಯಿ, ಸಹೋದರಿ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಸ್ನೇಹಿತೆಗಾಗಿ ಬಸ್ಸಿನಿಂದ ಕೆಳಗಿಳಿದು ಪ್ಲಾಟ್ಫಾರಂನಲ್ಲಿ ಕುಳಿತಿದ್ದ ಮಹಿಳೆಗೆ ಕಾದಿತ್ತು ಶಾಕ್
LATEST NEWS
- ಸಿದ್ಲೀಪುರದಲ್ಲಿ ವೈಭವದ ಬ್ರಹ್ಮರಥೋತ್ಸವ, ಏನೇನೆಲ್ಲ ಪೂಜೆಗಳು ನೆರವೇರಿದವು?

- ಕೋಟೆ ಮಾರಿಕಾಂಬ ಜಾತ್ರೆ, ದರ್ಶನ ಮುಗಿಸಿ ಹೊರಬಂದ ವೃದ್ಧೆಗೆ ಕಾದಿತ್ತು ಆಘಾತ, ದಾಖಲಾಯ್ತು ಪ್ರಕರಣ

- ಶಿವಮೊಗ್ಗದ JNN ಕಾಲೇಜು ವಿದ್ಯಾರ್ಥಿಗಳು ಚಾಂಪಿಯನ್ಸ್, ಯಾವ್ಯಾವ ಸ್ಪರ್ಧೆಗಳಲ್ಲಿ ಯಾರೆಲ್ಲ ಗೆದ್ದಿದ್ದಾರೆ?

- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

About The Editor
ನಿತಿನ್ ಆರ್.ಕೈದೊಟ್ಲು






