ಶಿವಮೊಗ್ಗ: ಅಂಬೇಡ್ಕರ್ ಸೇನೆಯ ಶಿವಮೊಗ್ಗ ತಾಲ್ಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಟಿ.ಎಂ. ಮಂಜುನಾಥ್ ತಿಳಿಸಿದ್ದಾರೆ. (ಈ ಸುದ್ದಿಯನ್ನು ಇನ್ನು 40 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ರಾಜ್ಯಾಧ್ಯಕ್ಷ ಡಾ. ಪಿ. ಮೂರ್ತಿ ಅವರ ನೇತೃತ್ವದಲ್ಲಿ ಅಂಬೇಡ್ಕರ್ ಸೇನೆಯು 2014–15ರಿಂದ ರಾಜ್ಯಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 2023ರಿಂದ ಸಂಘಟನೆ ಕಾರ್ಯಾರಂಭ ಮಾಡಿದೆ. ಕಳೆದ ಮೂರು ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಕ್ಷೇತ್ರಗಳ ಸಮಸ್ಯೆಗಳ ಕುರಿತು ಮತ್ತು ನೊಂದವರ ಪರ ಹೋರಾಟ ನಡೆಸಿಕೊಂಡು ಬರುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಘಟನೆಯ ಶಿವಮೊಗ್ಗ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಜಬೀವುಲ್ಲಾ ಇಬ್ರಾಹಿಂ ಸಾಹೇಬ್ ಸೈಕಲ್ಗಾರ್, ಉಪಾಧ್ಯಕ್ಷರಾಗಿ ಆರ್. ಸತೀಶ್, ಸಂಘಟನಾ ಕಾರ್ಯದರ್ಶಿಯಾಗಿ ಎಸ್. ಶಿವರಾಮ್, ಕಾರ್ಯದರ್ಶಿಯಾಗಿ ಮೊಹಮ್ಮದ್ ಜಮೀರ್, ಜಂಟಿ ಕಾರ್ಯದರ್ಶಿಗಳಾಗಿ ಎಂ.ಡಿ. ಸಾದಿಕ್ ಉರ್ ರೆಹಮಾನ್ ಹಾಗೂ ಸಂತೋಷ್ ಗೌಡ, ಖಜಾಂಚಿಯಾಗಿ ನೂರುಲ್ಲಾ, ಸಹ ಖಜಾಂಚಿಯಾಗಿ ಸೈಫುಲ್ಲಾ ಖಾನ್ ಮತ್ತು ಕಾನೂನು ಸಲಹೆಗಾರರಾಗಿ ಮೊಹಮ್ಮದ್ ರಫೀ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.