60 ಸಾವಿರ ಹೆಕ್ಟೇರ್ ಅರಣ್ಯ ಖಾಸಗಿ ಪಾಲಾಗುವ ಆತಂಕ, ಮಲೆನಾಡು ಬಯಲು ಸೀಮೆಯಾಗುವ ಭೀತಿ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಜೂನ್ 2020

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಮೈಸೂರು ಪೇಪರ್ ಮಿಲ್ಸ್‍ಗೆ (ಎಂಪಿಎಂ) ಸರ್ಕಾರ ಲೀಸ್‍ಗೆ ನೀಡಿದ್ದ 60 ಸಾವಿರ ಹೆಕ್ಟೇರ್ ಅರಣ್ಯ ಭೂಮಿಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಶಿವಮೊಗ್ಗದ ಪ್ರಗತಿಪರ ಸಂಘಟನೆಗಳ ಒಕ್ಕೂಟ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ.

https://www.facebook.com/liveshivamogga/videos/260467232032513/?t=4

ಅರಣ್ಯ ಹಿಂಪಡೆಯುವಂತೆ ಒತ್ತಾಯವೇಕೆ?

ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 60 ಸಾವಿರ ಹೆಕ್ಟೇರ್ ಅರಣ್ಯ ಭೂಮಿಯನ್ನು 40 ವರ್ಷ ಲೀಸ್‍ಗೆ ನೀಡಲಾಗಿದೆ. 2020ರ ಆಗಸ್ಟ್‍ಗೆ ಲೀಸ್ ಅವಧಿ ಮುಗಿಯಲಿದೆ. ಈ ಜಾಗದಲ್ಲಿ ಎಂಪಿಎಂ ಕಾರ್ಖಾನೆ 525 ನೆಡುತೋಪುಗಳನ್ನು ಮಾಡಿದ್ದು ಬಹುಪಾಲು ಅಕೇಶಿಯಾ, ಪೈನೂಸ್ ಎಂಬ ಗಿಡಗಳನ್ನು ಬೆಳೆದಿದೆ. ಇದು ಪಶ್ಚಿಮಘಟ್ಟದ ಸ್ವಾಭಾವಿಕ ಅರಣ್ಯಕ್ಕೆ ಮಾರಕವಾಗಿದೆ ಎಂದು ಒಕ್ಕೂಟದ ಸದಸ್ಯರು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿದರು.

https://www.facebook.com/liveshivamogga/videos/2299124960381441/?t=4

ಖಾಸಗಿಯವರಿಗೆ ಲೀಸ್ ಮುಂದುವರೆಸುವ ಆತಂಕ

60 ಸಾವಿರ ಹೆಕ್ಟೇರ್ ಅರಣ್ಯವನ್ನು ಖಾಸಗಿಯವರಿಗೆ ನೀಡುವಂತಿಲ್ಲ ಎಂದು ಮೊದಲೇ ತಿಳಿಸಲಾಗಿದೆ. ಈಗ ಎಂಪಿಎಂ ಕಾರ್ಖಾನೆ ಸ್ಥಗಿತಗೊಂಡಿದೆ. ಇದನ್ನು ಖಾಸಗಿಗೆ ವಹಿಸುವ ಕುರಿತು ಸರ್ಕಾರ ಆಸಕ್ತಿ ತೋರಿಸಿದೆ. ಈ ವೇಳೆ ಅ ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಖಾಸಗಿಯವರಿಗೆ ಲೀಸ್ ಮುಂದುವರೆಸುವ ಸಾದ್ಯತೆ ಇದೆ. ಒಂದು ವೇಳೆ ಹೀಗಾದರೆ ಮಲೆನಾಡು ಬಯಲು ಸೀಮೆ ಆಗಲಿದೆ ಎಂದು ಒಕ್ಕೂಟದ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಒಕ್ಕೂಟದ ಪ್ರಮುಖರಾದ ಕೆ.ಟಿ.ಗಂಗಾಧರ್, ಕೆ.ಪಿ.ಶ್ರೀಪಾಲ್, ಗುರುಮೂರ್ತಿ, ರಾಜೇಂದ್ರ ಕಂಬಳಗೆರೆ, ನಾಗೇಶನ್, ಮಾಲತೇಶ್ ಬೊಮ್ಮನಕಟ್ಟೆ, ಆದರ್ಶ ಹುಂಚದಕಟ್ಟೆ, ಪ್ರಸನ್ನ ಹಿತ್ಲಗದ್ದೆ, ಮಂಜುನಾಥ್ ನವುಲೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

https://www.facebook.com/liveshivamogga/videos/749247015882154/?t=0

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment