ಪೆಟ್ರೋಲಿಯಂ ರಿಟೇಲ್‌ ಮಳಿಗೆ ಆರಂಭಕ್ಕೆ ಅರ್ಜಿ ಆಹ್ವಾನ, ಯಾರು ಅರ್ಜಿ ಸಲ್ಲಿಸಬಹುದು?

SHIVAMOGGA LIVE NEWS | 11 OCTOBER 2023

SHIMOGA : ರಾಜ್ಯದ ವಿವಿಧೆಡೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ವತಿಯಿಂದ ಪೆಟ್ರೋಲಿಯಂ ರಿಟೇಲ್ ಮಳಿಗೆ ಮಾರಾಟಗಾರರಿಗಾಗಿ ಅರ್ಜಿ ಕರೆಯಲಾಗಿದೆ.  ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಅ. 17 ರವರೆಗೆ ವಿಸ್ತರಿಸಲಾಗಿರುತ್ತದೆ.

ಆಸಕ್ತ ಅರ್ಹ ಮಾಜಿ ಸೈನಿಕರು ಡಿಫೆನ್ಸ್ ವರ್ಗ (ಕ್ಯಾಟಗರಿ) ಅಡಿಯಲ್ಲಿ  ಜಾಲತಾಣ www.petrolpumpdealerchayan.in/petrol-2023/index.php/advertisements-list?ad_id=MjUw ರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಪ್ರೇಮ್‍ಜೀತ್ ಪಿ, ಮುಖ್ಯ ವ್ಯವಸ್ಥಾಪಕರು (ರಿಟೇಲ್ ಸೇಲ್ಸ್), ಬೆಂಗಳೂರು ಇವರ ಮೊಬೈಲ್ ಸಂಖ್ಯೆ 9447498234 ಯನ್ನು ಸಂಪರ್ಕಿಸಬಹುದಾಗಿದೆ.

ಇದನ್ನೂ ಓದಿ- ಶಿವಮೊಗ್ಗ ದಸರಾ, ಜಾನಪದ ಗೀತೆ ಸ್ಪರ್ಧೆ, ಕವಿಗೋಷ್ಠಿಗೆ ಹೆಸರೂ ನೋಂದಣಿಗೆ ಸೂಚನೆ

Petrol-Price-General-Image.jpg

Leave a Comment