ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 13 ಡಿಸೆಂಬರ್ 2019
ಜಿಲ್ಲಾಮಟ್ಟದ ಯುವಜನೋತ್ಸವದ ಬಹುಮಾನ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಕಲಾವಿದರು ಅಂಬೇಡ್ಕರ್ ಭವನದ ವೇದಿಕೆ ಮೇಲೆ ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮ ಬೇಡಿಕೆ ಈಡೇರುವವರೆಗೆ ವೇದಿಕೆಯಿಂದ ಕೆಳಗಿಳಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಶಿವಮೊಗ್ಗದಲ್ಲಿ ಎರಡು ದಿನದ ಜಿಲ್ಲಮಟ್ಟದ ಯುವಜನೋತ್ಸವ ಆಯೋಜಿಸಲಾಗಿತ್ತು. ಜಿಲ್ಲೆಯ ವಿವಿಧೆಡೆಯ ಕಲಾವಿದರು ಯುವಜನೋತ್ಸವದಲ್ಲಿ ಭಾಗವಹಿಸಿದ್ದರು. ವಿವಿಧ ಸ್ಪರ್ಧೆಗಳು ನಡೆದವು. ಆದರೆ ಬಹುಮಾನ ಘೋಷಣೆ ಆಗುತ್ತಿದ್ದಂತೆ ಕಲಾವಿದರು ಆಕ್ರೋಶಗೊಂಡರು.
ಕಲಾವಿದರ ಆಕ್ರೋಶಕ್ಕೆ ಕಾರಣವೇನು?
ಯುವಜನೋತ್ಸವದಲ್ಲಿ 35 ಈವೆಂಟ್’ಗಳು ನಡೆದಿವೆ. ಎಲ್ಲದರಲ್ಲೂ ತಾರತಮ್ಯ ಮಾಡಲಾಗಿದೆ. ವಿಜೇತರ ಘೋಷಣೆಯಲ್ಲಿ ಪಕ್ಷಪಾತ ಮಾಡಲಾಗಿದೆ ಎಂದು ಆರೋಪಿಸುತ್ತಾರೆ ವೀರಗಾಸೆ ಕಲಾವಿದ ನಾಗರಾಜ್.
ಹಲವು ಯುವಜನೋತ್ಸವದಲ್ಲಿ ಭಾಗವಹಿಸಿದ್ದೇನೆ. ರಾಜ್ಯಮಟ್ಟದಲ್ಲಿ ಸ್ಪರ್ಧಿಸಿ ನಮ್ಮ ತಂಡ ಪ್ರಥಮ ಸ್ಥಾನ ಪಡೆದಿದೆ. ಆದರೆ ಇಲ್ಲಿ ನಿಯಮಗಳೇ ಗೊತ್ತಿಲ್ಲದ ಜಡ್ಜ್’ಗಳು ಬಂದಿದ್ದರು ಅನಿಸುತ್ತೆ. ವೇದಿಕೆ ಮೇಲೆ ನಿಯಮ ಉಲ್ಲಂಘನೆ ಮಾಡಿದವರಿಗೆ ಪ್ರಥಮ ಬಹುಮಾನ ನೀಡಲಾಗಿದೆ ಎಂದು ಸೊರಬದ ಕಲಾವಿದೆ ಕವನಾ ಆರೋಪಿಸಿದರು.
‘ನಮ್ಮ ತಪ್ಪು ತಿಳಿಸಿ ಎದ್ದು ಹೊರಡುತ್ತೇವೆ’
ಇನ್ನು, ತಮ್ಮ ತಂಡಕ್ಕೆ ಬಹುಮಾನ ಬರದೆ ಇರುವುದಕ್ಕೆ ಕಾರಣ ಹೇಳಿ ಎಂದು ಕಲಾವಿದರು ಆಗ್ರಹಿಸಿದ್ದಾರೆ. ‘ನಮ್ಮ ತಂಡ ಮಾಡಿದ ತಪ್ಪಾದರು ಏನು ಅನ್ನುವುದನ್ನು ತಿಳಿಸಿದರೆ, ಮುಂದಿನ ಯುವಜನೋತ್ಸವದ ಸಿದ್ಧತೆ ಸಂದರ್ಭ ಎಚ್ಚರ ವಹಿಸುತ್ತೇವೆ. ಆದರೆ ಇದಕ್ಕೂ ಉತ್ತರ ಕೊಡಲು ಯಾರು ಇಲ್ಲ ಇಲ್ಲಿ. ಹಾಗಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ’ ಅನ್ನುತ್ತಾರೆ ನಾಗರಾಜ್.
ಆಹೋರಾತ್ರಿ ಧರಣಿ ನಡೆಸಲು ಸಿದ್ಧ ಎಂದು ಕಲಾವಿದರು ಎಚ್ಚರಿಸಿದ್ದಾರೆ. ಆದರೆ ಕಲಾವಿದರ ಪ್ರಶ್ನೆಗಳಿಗೆ ಉತ್ತರಿಸಲು ಅಧಿಕಾರಿಗಳ್ಯಾರು ಅಂಬೇಡ್ಕರ್ ಭವನದಲ್ಲಿ ಇಲ್ಲ. ಕಲಾವಿದರ ಮನವೊಲಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಯುವಜನೋತ್ಸವ ಆಯೋಜಿಸಲಾಗಿತ್ತು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Artists from various pars of the district protest against the judges in District Level Yuvajanotsava in Ambedkar Bhavana in Shimoga
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422