SHIVAMOGGA LIVE NEWS, 15 JANUARY 2025
ಶಿವಮೊಗ್ಗ : ವಿಳಾಸ ಕೇಳುವ ನೆಪದಲ್ಲಿ ವ್ಯಾಪಾರಿಯೊಬ್ಬನ (Merchant) ಮೇಲೆ ಚಾಕುವಿನಿಂದ ಇರಿಯಲಾಗಿದೆ. ಇದರಿಂದ ಆಕ್ರೋಶಗೊಂಡ ಗಾಂಧಿ ಬಜಾರ್ ವರ್ತಕರು ಇವತ್ತು ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಅಲ್ಲದೆ ಜಿಲ್ಲಾ ರಕ್ಷಣಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಶಿವಮೊಗ್ಗದ ಕಸ್ತೂರ ಬಾ ರಸ್ತೆಯಲ್ಲಿ ಕಚೋರಿ ವ್ಯಾಪಾರ ಮಾಡುತ್ತಿದ್ದ ಹೀರಾಲಾಲ್ ಸೇನ್ ಎಂಬಾತನ ಮೇಲೆ ನಾಲ್ವರು ಹಲ್ಲೆ ನಡೆಸಿ, ಚಾಕುವಿನಿಂದ ಇರಿದಿದ್ದಾರೆ. ಕೈ ಮತ್ತು ಕಾಲಿಗೆ ಗಾಯವಾಗಿದ್ದು ಬಿ.ಹೆಚ್.ರಸ್ತೆಯ ಅಶೋಕ ಸಂಜೀವಿನಿ ಆಸ್ಪತ್ರೆಗೆ ಹೀರಾಲಾಲ್ ಸೇನ್ ದಾಖಲಾಗಿದ್ದು, ಚಿಕಿತ್ಸೆ ಪಡೆಯತ್ತಿದ್ದಾರೆ. ನಿನ್ನೆ ಸಂಜೆ ಫ್ಯಾನ್ ರಿಪೇರಿ ಅಂಗಡಿಯ ವಿಳಾಸ ಕೇಳಿ ತೆರಳಿದ್ದ ವ್ಯಕ್ತಿಯೊಬ್ಬ ಕೆಲವೇ ಹೊತ್ತಿನಲ್ಲಿ ಹಿಂತಿರುಗಿದ್ದ. ಆತನೊಂದಿಗೆ ಇತರೆ ಮೂವರು ಇದ್ದರು. ಒಟ್ಟು ನಾಲ್ವರು ನಮ್ಮ ಅಣ್ಣನ ಮೇಲೆ ದಾಳಿ ನಡೆಸಿದರು. ಅವರಲ್ಲಿ ಒಬ್ಬನ ಬಳಿ ಚಾಕು ಇತ್ತು. ಆತ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. – ಉತ್ತಮ ಕುಮಾರ್, ಹೀರಾಲಾಲ್ ಸೇನ್ ಸಹೋದರಕಚೋರಿ ವ್ಯಾಪಾರಿಗೆ ಚಾಕು ಇರಿತ
ಇನ್ನು, ಘಟನೆಯ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ. ಅಂಗಡಿಯೊಂದರ ಮುಂದಿರುವ ಸಿಸಿ ಕ್ಯಾಮರಾದಲ್ಲಿ ಗಲಾಟೆಯ ದೃಶ್ಯ ಸೆರೆಯಾಗಿತ್ತು.
ಹೀರಾಲಾಲ್ ಸೇನ್ ಮೇಲಿನ ಹಲ್ಲೆ ಖಂಡಿಸಿ ಗಾಂಧಿ ಬಜಾರ್ ವರ್ತಕರು ಇವತ್ತು ಪ್ರತಿಭಟನೆ ನಡೆಸಿದರು. ಅಂಗಡಿಗಳನ್ನು ಬಂದ್ ಮಾಡಿದ ವರ್ತಕರು, ಹಲ್ಲೆಕೋರರ ಬಂಧನಕ್ಕೆ ಆಗ್ರಹಿಸಿ ಮೆರವಣಿಗೆ ನಡೆಸಿದರು. ಕಪ್ಪು ಪಟ್ಟಿ ಧರಿಸಿ ಗಾಂಧಿ ಬಜಾರ್ನಿಂದ ಜಿಲ್ಲಾ ರಕ್ಷಣಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮಾಡಿದರು. ಗಾಂಧಿ ಬಜಾರ್ನಲ್ಲಿ ಜನ ಸಂದಣಿ ಹೆಚ್ಚಿದೆ. ವ್ಯಾಪಾರಿಗಳು, ಜನರು ಮತ್ತು ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಓಡಾಡುವುದೆ ಕಷ್ಟವಾಗಿದೆ. ಹೀಗಿದ್ದೂ ವ್ಯಾಪಾರ ಮಾಡುತ್ತಿದ್ದೇವೆ. ಆದರೆ ವ್ಯಾಪಾರಸ್ಥರ ಮೇಲೆ ದುಷ್ಕರ್ಮಿಗಳು ಗೂಂಡಾ ವರ್ತನೆ ತೋರಿಸಿ ಆತಂಕ ಮೂಡಿಸಿದ್ದಾರೆ. ಮತ್ತೆ ಇಂತಹ ಪ್ರಕರಣಗಳು ಮರುಕಳಿಸಬಾರದು ಎಂದು ಎಸ್.ಪಿ.ಗೆ ಮನವಿ ಮಾಡಿದ್ದೇವೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಬೀದಿಗಿಳಿದು ಹೋರಾಟ ನಡೆಸುತ್ತೇವೆ. – ವಿಜಯ ಕುಮಾರ್ ದಿನಕರ್, ಗಾಂಧಿ ಬಜಾರ್ ವರ್ತಕರ ಸಂಘದ ಅಧ್ಯಕ್ಷಗಾಂಧಿ ಬಜಾರ್ನಲ್ಲಿ ಅಂಗಡಿಗಳು ಬಂದ್
ಇದನ್ನೂ ಓದಿ » ಶಿವಮೊಗ್ಗ ನಂದನ್ ಇನ್ನಿಲ್ಲ, ಅವರ ಬಗ್ಗೆ ಗೊತ್ತಿರಬೇಕಾದ ಪ್ರಮುಖ ವಿಷಯಗಳು ಇಲ್ಲಿವೆ
ಇನ್ನು, ಘಟನೆ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ದೊಡ್ಡಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಹಲ್ಲೆ ನಡೆಸಿದ ಆರೋಪಿಗಳ ಈಗಾಗಲೆ ಪೈಕಿ ಒಬ್ಬನನ್ನು ಬಂಧಿಸಲಾಗಿದೆ. ಮದನ್ ಅಲಿಯಾಸ್ ಮಂಜುನಾಥ (35) ಬಂಧಿತ. ಕಸ್ತೂರ ಬಾ ರಸ್ತೆಯಲ್ಲಿ ಸಂಜೆ 6 ಗಂಟೆಗೆ ಕಚೋರಿ ಮಾರಾಟಗಾರನ ಮೇಲೆ ಹಲ್ಲೆಯಾಗಿದೆ. ಸುಳ್ಳು ವಿಳಾಸ ಹೇಳಿದ್ದೀಯ ಎಂದು ಕಚೋರಿ ವ್ಯಾಪಾರಿ ಜೊತೆಗೆ ಆರೋಪಿಗಳು ಮಾತಿಗೆ ಮಾತು ಬೆಳೆಸಿ ಹಲ್ಲೆ ನಡೆಸಿದ್ದಾರೆ. ನಾಲ್ವರ ಪೈಕಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಬೀಟ್ ಹೆಚ್ಚಳ ಮಾಡುವಂತೆ ವ್ಯಾಪಾರಿಗಳು ಮನವಿ ಮಾಡಿದ್ದಾರೆ. – ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ರಕ್ಷಣಾಧಿಕಾರಿಒಬ್ಬನ ಅರೆಸ್ಟ್, ಮೂವರಿಗೆ ಶೋಧ
ಕಸ್ತೂರ ಬಾ ರಸ್ತೆಯಲ್ಲಿ ಕಚೋರಿ ವ್ಯಾಪಾರಿ ಮೇಲಿನ ಹಲ್ಲೆ ಪ್ರಕರಣ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.