ಶಿವಮೊಗ್ಗದಲ್ಲಿ ಫ್ಯಾಷನ್ ಶೋ ಆಡಿಷನ್, ಜನವರಿಯಲ್ಲಿ ನಡೆಯಲಿದೆ ಗ್ರಾಂಡ್ ಫಿನಾಲೆ, ಯಾರೆಲ್ಲ ಪಾಲ್ಗೊಳ್ಳಬಹುದು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಡಿಸೆಂಬರ್ 2021

ಶಿವಮೊಗ್ಗದಲ್ಲಿ ನಡೆಯಲಿರುವ ಫ್ಯಾಷನ್ ಶೋಗೆ ಆಡಿಷನ್ ನಡೆಸಲಾಗುತ್ತಿದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ADVT JULY NANJAPPA HOSPITAL HOME LAB TESTING

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಗ್ರೂಮಿಂಗ್ ಗುರುಕುಲ್ ಸಂಸ್ಥೆಯ ಮುಖ್ಯಸ್ಥೆ ನಿರಂಜನಿ ರವೀಂದ್ರ, ಡಿಸೆಂಬರ್ 18ರಂದು ಶಿವಮೊಗ್ಗದ ರಾಯಲ್ ಆರ್ಕಿಡ್ ಹೊಟೇಲ್’ನಲ್ಲಿ ಫ್ಯಾಷನ್ ಶೋ ಹಂಟ್ ಆಡಿಷನ್ ನಡೆಯಲಿದೆ ಎಂದು ತಿಳಿಸಿದರು.

ಆ ದಿನ ಬೆಳಗ್ಗೆ 10 ಗಂಟೆಗೆ ಸ್ಥಳದಲ್ಲಿಯೇ ನೋಂದಣಿ ಆರಂಭವಾಗುತ್ತದೆ. 18 ವರ್ಷ ಮೇಲ್ಪಟ್ಟ ಪುರುಷ ಮತ್ತು ಮಹಿಳೆಯರು ಇದರಲ್ಲಿ ಭಾಗವಹಿಸಬಹುದಾಗಿದೆ. ಮಿಸ್, ಮಿಸಸ್ ಮತ್ತು ಮಿಸ್ಟರ್ ವಿಭಾಗದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರಿಗೆ 500 ರೂ. ಶುಲ್ಕ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ಇಲ್ಲಿ ಆಯ್ಕೆಯಾದವರು ಜನವರಿ ತಿಂಗಳಲ್ಲಿ ಶಿವಮೊಗ್ಗದಲ್ಲಿ ನಡೆಯಲಿರುವ ಫ್ಯಾಷನ್ ಶೋ ಗ್ರಾಂಡ್ ಫಿನಾಲೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದರು.

ಸಂಸ್ಥೆಯ ಪ್ರಮುಖರಾದ ಸೋನಾಲಿ ನರೇಂದ್ರ, ಕ್ರಿಸ್ ಥಾಮಸ್ ಸುದ್ದಿಗೋಷ್ಠಿಯಲ್ಲಿದ್ದರು.

shivamogga live subscribe New Kannada

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment