ಶಿವಮೊಗ್ಗ ಲೈವ್
ಶಿವಮೊಗ್ಗ: ನಗರದ ಫ್ರೀಡಂ ಪಾರ್ಕ್ನಲ್ಲಿ ಆಯೋಜಿಸಿರುವ ಕಾರ್ನಿವಾಲ್ ಬಿಗ್ಗೆಸ್ಟ್ ಆಟೋ ಎಕ್ಸ್ಪೋ ಆ್ಯಂಡ್ ಕಲ್ಚರಲ್ ಫೆಸ್ಟ್ ಮೊದಲ ದಿನ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ದೊಡ್ಡ ಸಂಖ್ಯೆಯ ಜನರು ಎಕ್ಸ್ಪೋಗೆ ಭೇಟಿ ನೀಡಿ ಕಾರು, ಬೈಕುಗಳ ಕುರಿತು ಮಾಹಿತಿ ಪಡೆದರು.
ಅರುಣೋದಯ ಈವೆಂಟ್ಸ್ ವತಿಯಿಂದ ಆಟೋ ಎಕ್ಸ್ಪೋ ಆಯೋಜಿಸಲಾಗಿದೆ. ಎಕ್ಸ್ಪೋದಲ್ಲಿ ಮಾರುತಿ ಸುಜೂಕಿ, ನೆಕ್ಸಾ, ಟೊಯೊಟಾ, ಕಿಯಾ, ಸ್ಕೋಡಾ, ವೋಕ್ಸ್ವ್ಯಾಗನ್ ಕಾರುಗಳು, ಕೈನೆಟಿಕ್, ರಿವರ್, ಮ್ಯಾಟರ್, ಏಥರ್ ಬೈಕುಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿದೆ.

ಮೊದಲ ದಿನವೆ ಎಕ್ಸ್ಪೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರು ಕಾರು, ಬೈಕುಗಳ ಕುರಿತು ಮಾಹಿತಿ ಪಡೆದು, ಕೊಟೇಷನ್ ಕುರಿತು ಮಾಹಿತಿ ಪಡೆದರು. ಇನ್ನು ಸಂಜೆ ಪೃಥ್ವಿ ಗೌಡ ಕಲ್ಚರಲ್ ಇವೆಂಟ್ಸ್ ವತಿಯಿಂದ ‘ನಾ ಹಾಡಲು ನೀವು ಹಾಡಬೇಕು’ ಗಾಯನ ಮತ್ತು ನೃತ್ಯ ಕಾರ್ಯಕ್ರಮ ನಡೆಯಿತು.