ಶಿವಮೊಗ್ಗ: ಅಪಘಾತದಲ್ಲಿ ಆಟೋ (Auto) ಪಲ್ಟಿಯಾಗಿ ಚಾಲಕನ ಮೇಲೆ ಬಿದ್ದು ಆತ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಶಿವಮೊಗ್ಗದ ವಿನೋಬನಗರದ ಇಂದು ಬೆಳಗಿನ ಜಾವ ಘಟನೆ ಸಂಭವಿಸಿದೆ.
ಸುದ್ದಿಯ ಮುಂದಿನ ಭಾಗ ಕೆಳಗಿದೆ
ನ್ಯೂ ಮಂಡ್ಲಿಯ ನಿವಾಸಿ ಜಫ್ರುಲ್ಲಾ ಅಲಿಯಾಸ್ ವಾಲು ಮೃತರು. ಬಸ್ ನಿಲ್ದಾಣದ ಕಡೆಯಿಂದ ಬಂದ ಬೈಕ್ ಮತ್ತು ಪೊಲೀಸ್ ಚೌಕಿ ಕಡೆಯಿಂದ ಬಂದ ಆಟೋ ಡಿಕ್ಕಿಯಾಗಿವೆ. ಈ ಸಂದರ್ಭ ಆಟೋ ಪಲ್ಟಿಯಾಗಿದ್ದು ಚಾಲಕ ಕೆಳಗೆ ಬಿದ್ದಿದ್ದಾರೆ. ಅವರ ಮೇಲೆಯೇ ಆಟೋ ಪಲ್ಟಿಯಾಗಿದೆ ಎಂದು ಆರೋಪಿಸಲಾಗಿದೆ.

ಪಶ್ಚಿಮ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ » ಶ್ರೀಗಂಧದ ತುಂಡುಗಳ ಸಹಿತ ಯುವಕ ಅರೆಸ್ಟ್, ಮತ್ತೊಬ್ಬ ಎಸ್ಕೇಪ್

ಇದನ್ನೂ ಓದಿ:➤ ಪುರುಷರಲ್ಲಿ ಪ್ರಾಸ್ಟೇಟ್ ಹಿಗ್ಗುವಿಕೆ; ನಂಜಪ್ಪ ಆಸ್ಪತ್ರೆಯಲ್ಲಿ ಉಚಿತ ತಪಾಸಣೆ, ಈಗಲೆ ಹೆಸರು ನೋಂದಣಿಗೆ ಸೂಚನೆ


