ಶಿವಮೊಗ್ಗದ ಪತ್ರಕರ್ತರಿಗೆ ಪ್ರಶಸ್ತಿ ಪ್ರಕಟ | ಮುದಸ್ಸಿರ್‌ ಅಹ್ಮದ್‌ಗೆ ಪ್ರಶಸ್ತಿ ಪ್ರದಾನ | ಬೆಜ್ಜವಳ್ಳಿಯಲ್ಲಿ ಜನ ಸಂಪರ್ಕ ಸಭೆ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

 

ಶಿವಮೊಗ್ಗದ ಮೂವರು ಪತ್ರಕರ್ತರಿಗೆ ಪ್ರಶಸ್ತಿ

FATAFAT - #f1f1f1ಶಿವಮೊಗ್ಗ : ಜಿಲ್ಲೆಯ ಮೂವರು ಪತ್ರಕರ್ತರಿಗೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ದತ್ತಿನಿಧಿ ಪ್ರಶಸ್ತಿ (Award) ಪ್ರಕಟಿಸಲಾಗಿದೆ. ವಿಜಯವಾಣಿ ಪತ್ರಿಕೆಯ ಸ್ಥಾನಿಕ ಸಂಪಾದಕ ಚಂದ್ರಶೇಖರ ಶೃಂಗೇರಿ ಅವರಿಗೆ ಮಿಂಚು ಶ್ರೀನಿವಾಸ್‌ ಪ್ರಶಸ್ತಿ, ಹಿರಿಯ ಪತ್ರಕರ್ತ ಗಿರೀಶ್‌ ಉಮ್ರಾಯ್‌ ಅವರಿಗೆ ಹೆಚ್‌.ಎಸ್.ರಂಗಸ್ವಾಮಿ ಪ್ರಶಸ್ತಿ, ಸಂಯುಕ್ತ ಕರ್ನಾಟಕದ ವರದಿಗಾರ್ತಿ ಕವಿತಾ ಅವರಿಗೆ ಗಿರಿಜಮ್ಮ, ರುದ್ರಪ್ಪ ತಾಳಿಕೋಟಿ ಪ್ರಶಸ್ತಿ ಪ್ರಕಟಿಸಲಾಗಿದೆ.

ಕೊಪ್ಪಳದಲ್ಲಿ ಮಾರ್ಚ್‌ 9ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್‌ ತಿಳಿಸಿದ್ದಾರೆ.

AWARD FOR JOURNALISTS
ಪತ್ರಕರ್ತರಾದ ಗಿರೀಶ್‌ ಉಮ್ರಾಯ್‌, ಕವಿತಾ, ಚಂದ್ರಶೇಖರ್‌ ಶೃಂಗೇರಿ.

 

ಶಿವಮೊಗ್ಗದ ಮುದಸ್ಸಿರ್‌ ಅಹ್ಮದ್‌ಗೆ ಪ್ರಶಸ್ತಿ

FATAFAT - #f1f1f1ಬೆಂಗಳೂರು : ಶಿವಮೊಗ್ಗದಿಂದ ಪ್ರಕಟವಾಗುವ ಆಜ್‌ ಕಾ ಇನ್ಕಲಾಬ್‌ ಪತ್ರಿಕೆ ಸಂಪಾದಕ ಮುದಸ್ಸಿರ್‌ ಅಹ್ಮದ್‌ ಅವರು ಉರ್ದು ಅಕಾಡೆಮಿಯಿಂದ ಅತ್ಯುತ್ತಮ ಪತ್ರಕರ್ತ ಪ್ರಶಸ್ತಿ ನೀಡಲಾಯಿತು. ಬೆಂಗಳೂರಿನಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗಿದೆ.

Journalist Mudasir Ahmed
ಪತ್ರಕರ್ತ ಮುದಸ್ಸಿರ್‌ ಅಹ್ಮದ್‌ಗೆ ಉರ್ದು ಅಕಾಡೆಮಿ ಪ್ರಶಸ್ತಿ

ಕಳೆದ 20 ವರ್ಷಗಳಿಂದ ಮುದಸ್ಸಿರ್ ಅಹ್ಮದ್‌ ಉರ್ದು ಮತ್ತು ಕನ್ನಡ ಭಾಷೆಯ ಪತ್ರಿಕೋದ್ಯಮ ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದು ಪತ್ರಿಕೋದ್ಯಮದಲ್ಲಿ ಅವರ ಸಾಧನೆಗೆ ದೊಡ್ಡ ಗೌರವವಾಗಿದೆ.

ಬಲ್ಕಿಷ್‌ ಬಾನು, ವಿಧಾನ ಪರಿಷತ್‌ ಸದಸ್ಯೆ

 

ಬೆಜ್ಜವಳ್ಳಿಯಲ್ಲಿ ಜನ ಸಂಪರ್ಕ ಸಭೆ

FATAFAT - #f1f1f1ಶಿವಮೊಗ್ಗ : ಬೆಜ್ಜವಳ್ಳಿ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಮಾ.4 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ಜನಸಂಪರ್ಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದಾರೆ. ಈ ಭಾಗದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ಈ ಅವಕಾಶವನ್ನು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ : 8277882835 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ » ರಾತ್ರೋರಾತ್ರಿ ಶಿವಮೊಗ್ಗದಲ್ಲಿ ಪ್ರಮೋದ್‌ ಮುತಾಲಿಕ್‌ಗೆ ತಡೆ, ನೊಟೀಸ್‌ ಕೊಟ್ಟು ಗಡಿ ದಾಟಿಸಿದ ಪೊಲೀಸ್‌, ಯಾಕೆ?

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment